ನರ್ಸ್​​ಗಳನ್ನು ಗುರಿಯಾಗಿಸಿಕೊಂಡು ಹುಬ್ಬಳ್ಳಿಯ ಕಿಮ್ಸ್​ನ ಎಂಬಿಬಿಎಸ್​ ವಿದ್ಯಾರ್ಥಿಗಳಿಂದ ರಿಲ್ಸ್; ವಿಡಿಯೋ ವೈರಲ್​

| Updated By: ವಿವೇಕ ಬಿರಾದಾರ

Updated on: Aug 08, 2023 | 9:03 AM

ಹುಬ್ಬಳ್ಳಿಯ ಕಿಮ್ಸ್​​ನ ವೈದ್ಯಕೀಯ ವಿದ್ಯಾರ್ಥಿಗಳು ಚಲಚಿತ್ರದ ಹಾಡಿಗೆ ರೀಲ್ಸ್​​ ಮಾಡುವ ಮೂಲಕ ಪೇಚಿಗೆ ಸಿಲುಕಿಕೊಂಡಿದ್ದಾರೆ. ಹೌದು ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಯ ನರ್ಸ್​​ಗಳನ್ನು ಗುರಿಯಾಗಿಟ್ಟುಕೊಂಡು ಇನ್ಸ್ಟಾಗ್ರಾಮ್​​ನಲ್ಲಿ ರಿಲ್ಸ್ ಮಾಡಿದ್ದಾರೆ. ಇದಕ್ಕೆ ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ.

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್​​ನಲ್ಲಿ (Instagram) ರೀಲ್ಸ್​​ (Reels) ಮಾಡುವ ಮೂಲಕ ಸಾಕಷ್ಟು ಜನರು ಪ್ರಸಿದ್ಧಿಯಾಗುತ್ತಿದ್ದಾರೆ. ಹಾಗೇ ಟ್ರೋಲ್​ ಆಗುತ್ತಿದ್ದಾರೆ. ಹಾಗೆಯೇ ರೀಲ್ಸ್​ ಮೂಲಕ ಅದೆಷ್ಟೋ ಪ್ರತಿಭೆಗಳು ಮುನ್ನಲೆಗೆ ಬಂದಿವೆ. ಇದೇರೀತಿ ರಾಜ್ಯದ ಪ್ರಸಿದ್ಧ ಹುಬ್ಬಳ್ಳಿಯ (Hubballi) ಕಿಮ್ಸ್​​ನ ಆಸ್ಪತ್ರೆಯ (Kims) ವೈದ್ಯಕೀಯ ವಿದ್ಯಾರ್ಥಿಗಳು ಚಲಚಿತ್ರದ ಹಾಡಿಗೆ ರೀಲ್ಸ್​​ ಮಾಡುವ ಮೂಲಕ ಪೇಚಿಗೆ ಸಿಲುಕಿಕೊಂಡಿದ್ದಾರೆ. ಹೌದು ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಯ ನರ್ಸ್​​ಗಳನ್ನು ಗುರಿಯಾಗಿಟ್ಟುಕೊಂಡು ಇನ್ಸ್ಟಾಗ್ರಾಮ್​​ನಲ್ಲಿ ರಿಲ್ಸ್ ಮಾಡಿದ್ದಾರೆ. ಇದಕ್ಕೆ ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ.

ಯಾವುದೇ ಅನುಮತಿ ಪಡೆಯದೆ ಕಿಮ್ಸ್ ಆಸ್ಪತ್ರೆ ಒಳಗಡೆ ನಟ ಪ್ರಜ್ವಲ್ ದೇವರಾಜ್ ಅಭಿನಯದ ಭದ್ರ ಚಿತ್ರದ “ನಂಬೆಡ ನಂಬೆಡ ಹುಡುಗಿರನ್ನು ನಂಬೇಡ” ಅನ್ನೋ ಹಾಡಿಗೆ ವಿದ್ಯಾರ್ಥಿಗಳು ರೀಲ್ಸ್​ ಮಾಡಿದ್ದಾರೆ. ಈ ಹಾಡಿನ ಮಧ್ಯೆ ಬರುವ “ನಂಬೆಡ ನಂಬೆಡ ನರ್ಸ್​​ಗಳನ್ನು ನಂಬೇಡ” ಸಾಲಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋವನ್ನು ಮಹೇಶ್ ರೆಡ್ಡಿ ಎಂಬುವ ವಿದ್ಯಾರ್ಥಿಯ ಅಕೌಂಟ್​ನಿಂದ ಪೋಸ್ಟ್​ ಮಾಡಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ: ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಪೋಸ್ಟ್​​ ಪ್ರಕರಣ; ಕಿಡಗೇಡಿಯಿಂದ ಪ್ರಚೋದನಕಾರಿ ವಿಡಿಯೋ ಅಪ್ಲೋಡ್ ​

ಸದ್ಯ ಈ ವಿಡಿಯೋ ಫುಲ್ ವೈರಲ್ ಆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಮತ್ತು ಧಾರವಾಡ ಜಿಲ್ಲಾ ಶುಶ್ರೂಷಕರ ಸಂಘ ಕಿಮ್ಸ್ ನಿರ್ದೇಶಕರಿಗೆ ಪತ್ರ ಬರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:59 am, Tue, 8 August 23