ಹುಬ್ಬಳ್ಳಿ: ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಪೋಸ್ಟ್ ಪ್ರಕರಣ; ಕಿಡಗೇಡಿಯಿಂದ ಪ್ರಚೋದನಕಾರಿ ವಿಡಿಯೋ ಅಪ್ಲೋಡ್
ಕಿಡಗೇಡಿಯೊಬ್ಬ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ಈ ಬಗ್ಗೆ ಜೂನ್ 20 ರಂದೇ ಕಾಲೇಜ್ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರೂ, ಆಡಳಿತ ಮಂಡಳಿ ದೂರು ದಾಖಲಿಸದೆ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿ: ಕಿಡಗೇಡಿಯೊಬ್ಬ ನಗರದ ಖಾಸಗಿ ಕಾಲೇಜಿನ (Private College) ವಿದ್ಯಾರ್ಥಿನಿಯರ (Students) ಅಶ್ಲೀಲ ಫೋಟೋಗಳನ್ನು (Photos) ಇನ್ಸ್ಟಾಗ್ರಾಮ್ನಲ್ಲಿ (Instagram) ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ಈ ಬಗ್ಗೆ ಜೂನ್ 20 ರಂದೇ ಕಾಲೇಜ್ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಆದರೂ ಕಾಲೇಜ್ ಆಡಳಿತ ಮಂಡಳಿ ದೂರು ದಾಖಲಿಸದೆ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ. ಇದೀಗ ಶುಕ್ರವಾರ ವಿದ್ಯಾರ್ಥಿನಿಯರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗಿತ್ತಿದ್ದಂತೆ ಅಲರ್ಟ್ ಆದ ಕಿಡಗೇಡಿ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾನೆ.
ಇದೀಗ ಪ್ರಕರಣದ ತನಿಖೆ ತೀವ್ರಗೊಳಿಸಿದ ಬೆನ್ನೆಲ್ಲೆ ಕಿಡಗೇಡಿ ಕಾಲೇಜ್ ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಬಳಸಿಕೊಂಡು ಅಸಹ್ಯಕರ ವಿಡಿಯೊ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋಗಳು kashmira1990_0 ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಪೋಸ್ಟ್ ಆಗಿವೆ.
ಇದನ್ನೂ ಓದಿ: ಗೋಲ್ಡ್ ಕ್ರೌನ್ ಸಬ್‌ಲೈಮ್ ಬಿಲ್ಡರ್ಸ್‌ಗೆ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದ ಗ್ರಾಹಕರ ಆಯೋಗ
ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ರಾಜಕಾರಣಿಗಳ ಫೋಟೊ ಬಳಸಿ ಟಿಪ್ಪು ಸುಲ್ತಾನ್‌ಗೆ ನಮಸ್ಕರಿಸುವ ವಿಡಿಯೋ, ಹಿಂದೂ ಮುಖಂಡ ಪ್ರಮೋದ ಮುತಾಲಿಕ್ ಅವರು ಟಿಪ್ಪುವಿನ ಭಾವಚಿತ್ರ ಹಿಡಿದಿರುವ ಪೋಟೋ ಮತ್ತು ನೋಟುಗಳ ಮೇಲೆ ಟಿಪ್ಪುವಿನ ಭಾವಚಿತ್ರ ಹಾಕಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅಲ್ಲದೇ ತಾಕತ್ತಿದ್ದರೆ ಹಿಡಿಯಿರಿ ಎಂದು ಪೊಲೀಸರಿಗೆ ಸವಾಲು ಹಾಕಿದ್ದಾನೆ.
ಪ್ರಕರಣದ ತನಿಖೆ ನಡೆಸಲು ಎಂಟು ಅಧಿಕಾರಿಗಳ ತಂಡ ರಚನೆಯಾಗಿದೆ. ಪೊಲೀಸರು ವಿಡಿಯೊ ತುಣಕುಗಳನ್ನು ಪರಿಶೀಲನೆಗೆ ಸೈಬರ್ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇನ್ನು ಪೊಲೀಸರು ಖಾಸಗಿ ಕಾಲೇಜ್ ವಿದ್ಯಾರ್ಥಿಗಳ ಮೇಲೆ ಅನುಮಾನ ವ್ಯಕ್ತಪಿಡಿಸಿದ್ದು, ಈಗಾಗಲೆ ಕೆಲವರನ್ನು ಕರೆದು ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ