ಗೋಲ್ಡ್ ಕ್ರೌನ್ ಸಬ್‌ಲೈಮ್ ಬಿಲ್ಡರ್ಸ್‌ಗೆ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದ ಗ್ರಾಹಕರ ಆಯೋಗ

Dharwad News: ಫಾರ್ಮ ಹೌಸ್ ನಿರ್ಮಿಸಿ ಕೊಟ್ಟಿಲ್ಲ ಎಂದು ಆರೋಪಿಸಿ ಬಿಲ್ಡರ್​ ವಿರುದ್ಧ ವ್ಯಕ್ತಿ ಒಬ್ಬರು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದು, 35 ಲಕ್ಷ ರೂ. ಮತ್ತು ಹಣ ನೀಡಿದ ದಿನದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ. 8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ನೀಡುವಂತೆ ಆಯೋಗ ಆದೇಶಿಸಿದೆ.

ಗೋಲ್ಡ್ ಕ್ರೌನ್ ಸಬ್‌ಲೈಮ್ ಬಿಲ್ಡರ್ಸ್‌ಗೆ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದ ಗ್ರಾಹಕರ ಆಯೋಗ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 04, 2023 | 6:43 PM

ಧಾರವಾಡ, ಆಗಸ್ಟ್​ 04: ಕರಾರಿನಂತೆ ನಿಗದಿತ ಅವಧಿಯಲ್ಲಿ ಲೇಔಟ್ ಮಾಡಿ, ಫಾರ್ಮ ಹೌಸ್ ನಿರ್ಮಿಸಿ ಕೊಟ್ಟಿಲ್ಲ. ಇದರಿಂದಾಗಿ ತನಗೆ ಮೋಸವಾಗಿದೆ ಮತ್ತು ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು  ಆರೋಪಿಸಿ ಬಿಲ್ಡರ್​ ವಿರುದ್ಧ ವ್ಯಕ್ತಿ ಒಬ್ಬರು ಗ್ರಾಹಕರ ಆಯೋಗಕ್ಕೆ (Consumer Commission) ದೂರು ನೀಡಿದ್ದಾರೆ. ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ನಗರದ ಟೋಲ್ ನಾಕಾದ ನಿವಾಸಿ ಹೆರಾಲ್ಡ್ ಜೋಸೆಫ್ ಎಂಬುವವರು ಇಮ್ರಾನ್ ಕಳ್ಳಿಮನಿ ಎಂಬುವವರ ಜಾಹೀರಾತಿನ ಮೇರೆಗೆ ಕೆಲಗೇರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಫಾರ್ಮ್ ಹೌಸ್‍ನ್ನು 40 ಲಕ್ಷ ರೂಪಾಯಿಗೆ 2021ರ ಜನವರಿ 25 ರಂದು ಖರೀದಿಸಿದ್ದರು. ಈ ಬಗ್ಗೆ ಇಬ್ಬರ ನಡುವೆ ಖರೀದಿ ಕರಾರು ಪತ್ರ ಆಗಿತ್ತು. ಹೆರಾಲ್ಡ್ ಜೋಸೆಫ್ ರೂ. 35 ಲಕ್ಷ ಮುಂಗಡ ಹಣವನ್ನು ಪಾವತಿಸಿದ್ದರು. ಬಿಲ್ಡರ್ ಇಮ್ರಾನ್ ಕರಾರಿನಂತೆ ನಿಗದಿತ ಅವಧಿಯಲ್ಲಿ ಲೇಔಟ್ ಮಾಡಿ, ಫಾರ್ಮ ಹೌಸ್ ನಿರ್ಮಿಸಿ ಕೊಟ್ಟಿಲ್ಲ. ಹಾಗಾಗಿ ಹೆರಾಲ್ಡ್ ಜೋಸೆಫ್ ಅವರು ಬಿಲ್ಡರ್ ಇಮ್ರಾನ್ ವಿರುದ್ಧ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವೈಪೈ ಇಂಟರ್​​ನೆಟ್ ಸಮಸ್ಯೆ, ರೈತರಿಂದ ಪ್ರತಿಭಟನೆ

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ದೂರುದಾರನಿಂದ ರೂ. 35 ಲಕ್ಷ ಹಣ ಪಡೆದುಕೊಂಡು ಬಿಲ್ಡರ್ ಲೇಔಟ್ ಅಭಿವೃದ್ಧಿಪಡಿಸಿ, ಫಾರ್ಮ್ ಹೌಸ್ ನೋಂದಣಿ ಮಾಡಿಕೊಡಲು ವಿಫಲರಾಗಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ಆ್ಯಂಬುಲೆನ್ಸ್​ ಟೈಯರ್ ಸ್ಫೋಟ: ರೋಗಿ, ಸಂಬಂಧಿಕರು ಪರದಾಟ

ಅಲ್ಲದೇ ದೂರುದಾರನಿಗೆ ಹಣವನ್ನು ಹಿಂತಿರುಗಿಸದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ. ಹೀಗಾಗಿ ಹೆರಾಲ್ಡ್ ಜೋಸೆಫ್ ಅವರು ನೀಡಿದ್ದ ರೂ. 35 ಲಕ್ಷ ಮತ್ತು ಅದರ ಮೇಲೆ ಹಣ ನೀಡಿದ ದಿನದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ. 8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ನೀಡುವಂತೆ ಆಯೋಗ ಆದೇಶಿಸಿದೆ.

ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ಅಂತಾ ರೂ. 10,000/- ನೀಡುವಂತೆ ಎದುರುದಾರನಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ