AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವೈಪೈ ಇಂಟರ್​​ನೆಟ್ ಸಮಸ್ಯೆ, ರೈತರಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಆನ್ ಲೈನ್ ವ್ಯಾಪಾರಕ್ಕೆ ಅವಶ್ಯಕತೆಯಿರುವ ವೈ ಪೈ ಇಂಟರ್​ನೆಟ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಮಸ್ಯೆ ಸರಿಪಡಿಸದೇ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವೈಪೈ ಇಂಟರ್​​ನೆಟ್ ಸಮಸ್ಯೆ, ರೈತರಿಂದ ಪ್ರತಿಭಟನೆ
ಚಿಕ್ಕಬಳ್ಳಾಪುರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವೈಪೈ ಇಂಟರ್ ನೆಟ್ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿದ ಪ್ರತಿಭಟನೆ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Rakesh Nayak Manchi|

Updated on: Aug 04, 2023 | 5:41 PM

Share

ಚಿಕ್ಕಬಳ್ಳಾಪುರ, ಆಗಸ್ಟ್ 4: ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿರುವ ರೇಷ್ಮೆಗೂಡು ಮಾರುಕಟ್ಟೆಯಲ್ಲಿ (Cocoon Market) ಆನ್​ಲೈನ್ ಮೂಲಕವೇ ವ್ಯಾಪಾರ ವಹಿವಾಟು ನಡೆಯುತ್ತದೆ. ಆದರೆ ಈ ಆನ್​ಲೈನ್ ವಹಿವಾಟಿಗೆ ಅವಶ್ಯಕತೆ ಇರುವ ವೈ ಪೈ ಇಂಟಿರ್ ನೆಟ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ (Protest) ನಡೆಸಿದರು.

ಈ ಮಾರುಕಟ್ಟೆ ರಾಜ್ಯದಲ್ಲೇ ಎರಡನೇ ಅತಿದೊಡ್ಡ ರೇಷ್ಮೆ ಗೂಡು ಮಾರುಕಟ್ಟೆ ಎಂಬ ಖ್ಯಾತಿ ಪಡೆದಿದೆ. ಈ ಮಾರುಕಟ್ಟೆಯಲ್ಲಿ ಆನ್​ಲೈನ್ ವ್ಯಾಪಾರ ವಹಿವಾಟು ಅನುಷ್ಠಾನ ಮಾಡಲಾಗಿದೆ. ಆದರೆ ಪ್ರತಿದಿನ ವ್ಯಾಪಾರ ವಹಿವಾಟು ಸಮಯಕ್ಕೆ ಇಲ್ಲಿರುವ ವೈ ಪೈ ಇಂಟರ್ ನೆಟ್ ಕೈ ಕೊಡುತ್ತಿದೆಯಂತೆ. ಇದರಿಂದ ವ್ಯಾಪಾರ ವಹಿವಾಟು ಅಸ್ತವ್ಯಸ್ತವಾಗುತ್ತಿದೆ. ಇದಕ್ಕೆ ಅಧಿಕಾರಿಗಳ ಉದಾಸೀನವೇ ಕಾರಣವೆಂದು ರೇಷ್ಮೆಗೂಡು ಮಾರುಕಟ್ಟೆಯಲ್ಲಿರುವ ರೀಲರ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: By bike not bullocks: ಹೊಸ ಸಾಧನ, ಸಾಹಸ : ಹತ್ತಿ ಹೊಲಕ್ಕೆ ಬೈಕ್ ಮೂಲಕ ಎಡೆ ಹೊಡೆದ ರೈತ

ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೀಲರ್ಸ್ ಪ್ರತಿಭಟನೆ

ಶಿಡ್ಲಘಟ್ಟ ನಗರದಲ್ಲರುವ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇಂಟರ್ ನೆಟ್ ವೈ ಪೈ ಅವ್ಯವಸ್ಥೆ ಖಂಡಿಸಿ ಮಾರುಕಟ್ಟೆಗೆ ಬಂದಿದ್ದ ರೀಲರ್ಸ್ ಹಾಗೂ ರೈತರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಮಾರುಕಟ್ಟೆಯ ಅಧಿಕಾರಿಗಳು, ಇಂಟರ್ ನೆಟ್ ವೈ ಪೈ ಸಮಸ್ಯೆ ಆಗಿದೆ. ತಾಂತ್ರಿಕ ತೊಂದರೆಯಾಗಿದೆ. ಕೆಲವು ದಿನಗಳಲ್ಲಿ ವೈ ಫೈ ಸಮಸ್ಯೆ ಬಗೆಯರಿಸುವುದಾಗಿ ಭರವಸೆ ನೀಡಿದರು. ನಂತರ ರೀಲರ್ಸ್​​ ಪ್ರತಿಭಟನೆ ನಿಲ್ಲಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ