ತಾಯಿ, ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು! ಗಿರಿಜಾದೇವಿಗೆ ಪತ್ರ ಬರೆದ ಭಕ್ತ

ದೇವಸ್ಥಾನದ ಹುಂಡಿಗಳಿಗೆ ಚೀಟಿಯಲ್ಲಿ ನಮ್ಮ ಇಷ್ಟಾರ್ಥವನ್ನು ಬರೆದು ನೆರವೇರಿಸುವಂತೆ ಕೇಳಿಕೊಂಡಿರುತ್ತೇವೆ. ಆದರಂತೆ ಇಲ್ಲೊಬ್ಬ ಭಕ್ತ. ತಾಯಿ, ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕೆಂದು ಗಿರಿಜಾದೇವಿಗೆ ಪತ್ರ ಬರೆದಿದ್ದಾನೆ.

ತಾಯಿ, ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು! ಗಿರಿಜಾದೇವಿಗೆ ಪತ್ರ ಬರೆದ ಭಕ್ತ
ಚಿಕ್ಕಮಗಳೂರು
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 05, 2023 | 12:13 PM

ಚಿಕ್ಕಮಗಳೂರು, ಆ.5: ದೇವರ ರಥೋತ್ಸವದಲ್ಲಿ ಬಾಳೆಹಣ್ಣು(Banana) ಎಸೆಯುವುದರ ಜೊತೆಗೆ ಇತ್ತೀಚೆಗೆ ಅದರ ಮೇಲೆ ನಮ್ಮ ಬಯಕೆಯನ್ನ ಬರೆದು, ಅದನ್ನು ಈಡೇರಿಸುವಂತೆ ಬೇಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿ ನೋಡಿರುತ್ತೇವೆ. ಅದರಂತೆ ದೇವಸ್ಥಾನದ ಹುಂಡಿಗಳಿಗೆ ಚೀಟಿಯಲ್ಲಿ ನಮ್ಮ ಇಷ್ಟಾರ್ಥವನ್ನು ಬರೆದು ನೆರವೇರಿಸುವಂತೆ ಕೇಳಿಕೊಂಡಿರುತ್ತೇವೆ. ಆದರಂತೆ ಇಲ್ಲೊಬ್ಬ ಭಕ್ತ. ತಾಯಿ, ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕೆಂದು ಗಿರಿಜಾದೇವಿಗೆ ಪತ್ರ ಬರೆದಿದ್ದಾನೆ.

ಪತ್ರದಲ್ಲಿ ಎನಿದೆ?

ಹೌದು, ಚಿಕ್ಕಮಗಳೂರಿನ ಕಳಸದ ಕಳಸೇಶ್ವರ ಸ್ವಾಮಿಯ ಕಾಣಿಕೆ ಹುಂಡಿಯನ್ನು ಎಣಿಕೆ ಮಾಡುವ ಸಂದರ್ಭದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ. ರಕ್ಷಿತ್ ಎಂಬ ಭಕ್ತ, ‘ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ. ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು. ಹೀಗಾಗಿ ಸರ್ವ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ ನನ್ನ ಕನಸನ್ನ ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನ ಈಡೇರಿಸು ತಾಯಿ ಎಂದು ಬರೆದಿದ್ದಾನೆ. ಭಕ್ತನ ವಿಚಿತ್ರ ಬೇಡಿಕೆಯನ್ನು ನೋಡಿ ಹುಂಡಿ ಹಣ ಎಣಿಕೆ ಅಧಿಕಾರಿಗಳು ನಗೆ ಕಡಲಲ್ಲಿ ತೇಲಿದ್ದಾರೆ.

ಇದನ್ನೂ ಓದಿ:ಮರದಲ್ಲಿ ಮೂಡಿದ ಅಪರೂಪದ ಗಣಪತಿ; ಬೇಡಿದವರ ಇಷ್ಟಾರ್ಥ​ ಈಡೇರಿಸುತ್ತಿರುವ ವಿಘ್ನೇಶ್ವರ ಎಲ್ಲಿದ್ದಾನೆ ಗೊತ್ತಾ? ಈ ಸ್ಟೋರಿ ನೋಡಿ

ಇನ್ನು ನಾವು ಚುನಾವಣೆ ಸಂದರ್ಭದಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗದ್ದಿಗೆ ಗ್ರಾಮದ ಕೆಂಡಗಣ್ಣ ಸ್ವಾಮಿ ಜಾತ್ರಾಮಹೋತ್ಸವದಲ್ಲಿ ಹರಕೆ ಹೊತ್ತು ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕು ಎಂದು ಬಾಳೆಹಣ್ಣಿನ ಮೇಲೆ ಬರೆದು ದೇವರ ಮೇಲೆ ಎಸೆದು ಬೇಡಿಕೆ ಇಟ್ಟಿರುವ ಘಟನೆಯೊಂದು ನಡೆದಿತ್ತು. ಹೌದು, ಕಾಡುವಡ್ಡರಗುಡಿಯ ಯುವಕನೋರ್ವ ಮತ್ತೊಮ್ಮೆ ಸಿದ್ದರಾಮಯ್ಯನವರು ಸಿಎಂ ಆಗಲೆಂದು ದೇವರಲ್ಲಿ ಬೇಡಿಕೆ ಇಟ್ಟಿದ್ದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Sat, 5 August 23