AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರದಲ್ಲಿ ಮೂಡಿದ ಅಪರೂಪದ ಗಣಪತಿ; ಬೇಡಿದವರ ಇಷ್ಟಾರ್ಥ​ ಈಡೇರಿಸುತ್ತಿರುವ ವಿಘ್ನೇಶ್ವರ ಎಲ್ಲಿದ್ದಾನೆ ಗೊತ್ತಾ? ಈ ಸ್ಟೋರಿ ನೋಡಿ

ಹಚ್ಚ ಹಸಿರಿನ ತಪ್ಪಲಲ್ಲಿರುವ ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಇಂತಹ ಜಿಲ್ಲೆಯಲ್ಲಿ ಇದೀಗ ಅಚ್ಚರಿ ಎಂಬಂತೆ ಕಣಗಿಲೆ (ಒಂದು ಜಾತಿಯ ಮರ) ಮರದ ಬುಡದಲ್ಲಿ ಗಣಪತಿಯೊಂದು ಉದ್ಭವವಾಗಿದೆ.

ಮರದಲ್ಲಿ ಮೂಡಿದ ಅಪರೂಪದ ಗಣಪತಿ; ಬೇಡಿದವರ ಇಷ್ಟಾರ್ಥ​ ಈಡೇರಿಸುತ್ತಿರುವ ವಿಘ್ನೇಶ್ವರ ಎಲ್ಲಿದ್ದಾನೆ ಗೊತ್ತಾ? ಈ ಸ್ಟೋರಿ ನೋಡಿ
ಯಲ್ಲಾಪುರ ತಾಲೂಕಿನಲ್ಲಿ ಅಚ್ಚರಿ ಎಂಬಂತೆ ಮರದ ಬುಡದಲ್ಲಿ ಮೂಡಿದ ಗಣಪತಿ
ಕಿರಣ್ ಹನುಮಂತ್​ ಮಾದಾರ್
|

Updated on: Mar 12, 2023 | 7:00 AM

Share

ಯಲ್ಲಾಪುರ: ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಉತ್ತರ ಕನ್ನಡ, ಹಚ್ಚ ಹಸಿರಿನ ತಪ್ಪಲಲ್ಲಿರುವ ಈ ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಇಂತಹ ಜಿಲ್ಲೆಯಲ್ಲಿ ಇದೀಗ ಅಚ್ಚರಿ ಎಂಬಂತೆ ಕಣಗಿಲೆ (ಒಂದು ಜಾತಿಯ ಮರ) ಮರದ ಬುಡದಲ್ಲಿ ಗಣಪತಿಯೊಂದು ಉದ್ಭವವಾಗಿದೆ. ಜಿಲ್ಲೆಯ ಮೂರು ತಾಲೂಕುಗಳಾದ ಶಿರಸಿ, ಮುಂಡಗೋಡ, ಯಲ್ಲಾಪುರದಿಂದ ಸರಿ ಸುಮಾರು 30 ರಿಂದ 35 ಕಿ.ಮೀ ದೂರದಲ್ಲಿರುವ ಈ ಉದ್ಭವ ಗಣಪತಿಗೆ ಶಿರಸಿ ಯಲ್ಲಾಪುರ ಮಾರ್ಗವಾಗಿ ಬಂದು, ಮಾರ್ಗಮಧ್ಯೆ ಉಮ್ಮಚ್ಚಗಿಯಿಂದ ಕಾತೂರಿಗೆ ಹೋಗುವ ದಾರಿ ಮಧ್ಯೆ ಈ ಉದ್ಬವ ಗಣಪತಿಯ ದರ್ಶನವಾಗುತ್ತದೆ.

ಮರದ ಬುಡದಲ್ಲಿ ಮೂಡಿದ ಉದ್ಭವ ಗಣಪತಿ

ದಟ್ಟಾಡವಿಯ ಮಧ್ಯೆ ಮೂಡಿದ ಈ ಉದ್ಭವ ಗಣಪತಿಯನ್ನು ಮೊದಲು ಗುರುತಿಸಿದ್ದು, ಇಲ್ಲಿನ ಕುಂದರಗಿ ಗ್ರಾಮದ ಅರಣ್ಯಾಧಿಕಾರಿ ಕಲ್ಲಪ್ಪರವರು. ಈ ಉದ್ಭವ ಗಣಪತಿಯನ್ನ ಮೊದಲು ಇವರಿಗೆ ತೋರಿಸಿದ್ದು ಗೋಮಾತೆಯಂತೆ, ಬಹಳ ದಿನಗಳಿಂದ ಈ ಮರದ ಬಳಿ ಆಕಳೊಂದು ಪ್ರತಿನಿತ್ಯ ಬಂದು ನಿಂತುಕೊಳ್ಳುತ್ತಿಂತೆ ಇದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಏನಿರಬಹುದು ಎಂದು ಪರಿಶೀಲಿಸಿದ್ದಾರೆ. ಆದರೆ ಆ ಸಂದರ್ಭದಲ್ಲಿ ಅವರಿಗೆ ಏನು ಗೋಚರಿಸಿಲ್ಲ. ಇದು ಮುಖ್ಯ ರಸ್ತೆಯ ಬಳಿ ಇರುವುದರಿಂದ ಶಾಲಾ ಮಕ್ಕಳು ಓಡಾಡುವುದರಿಂದ ದೈವಪ್ರೇರಣೆಯೊ ಅಥವಾ ಕುತೂಹಲವೊ, ಮರದ ಬುಡದಲ್ಲಿ ಒಂದು ರೀತಿಯ ಗಣಪತಿಯ ಚಿತ್ರಣ ಇರುವುದು ಗಮನಿಸಿ ಪಾರೆಸ್ಟ್​ ಆಫಿಸರ್​ಗೆ ಹೇಳಿದ್ದಾರೆ. ಬಳಿಕ ಇಲ್ಲಿನ ಗ್ರಾಮಸ್ಥರು ಬಂದು ನೋಡಿ ನಮಸ್ಕರಿಸಿ ಪೂಜೆ ಮಾಡಲು ಶುರು ಮಾಡಿದ್ದಾರೆ. ಇದನ್ನು ಗಮನಿಸಿ ಅರಣ್ಯಾಧಿಕಾರಿಗಳು ಅಕ್ಕಪಕ್ಕದಲ್ಲಿರುವ ಗಿಡಗಳನ್ನ ಸ್ವಚ್ಚಗೊಳಿಸಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನೋಡ ನೋಡುತ್ತಿದ್ದಂತೆ ಅನೇಕ ಭಕ್ತಾದಿಗಳು ಉದ್ಭವ ಗಣಪತಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೇಳಿಕೊಳ್ಳಲು ಶುರು ಮಾಡಿದ್ದಾರೆ.

ಸಾವಿನಂಚಿನಲ್ಲಿದ್ದವರನ್ನು ಉಳಿಸಿದ ಗಣಪತಿ

ಹೌದು ಇಲ್ಲಿನ ಭಕ್ತಾಧಿಗಳಲ್ಲೊಬ್ಬರಾದ ರಾಮಕೃಷ್ಣ ಹೆಗಡೆ ಎಂಬುವವರು ಎಲ್ಲವನ್ನು ಕಳೆದುಕೊಂಡು ಜೀವನವೇ ಬೇಡವೆಂದು ನಿರ್ಧರಿಸಿದ್ದರಂತೆ. ಎಲ್ಲ ದೇವಸ್ಥಾನಗಳು ಸುತ್ತಿದ್ದ ಇವರು, ಕೊನೆಗೆ ಉದ್ಭವ ಗಣಪತಿಯ ಬಳಿ ಬಂದು ತಮ್ಮ ಕಷ್ಟಗಳನ್ನು ಬೇಡಿಕೊಂಡು ಹೋದರಂತೆ. ಬಳಿಕ ಕೇವಲ ಎರಡೇ ದಿನಗಳಲ್ಲಿ ಅವರ ಸಮಸ್ಯೆ ಬಗೆಹರಿದು ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದ ಅವರು ಇಂದು 100 ಜನಕ್ಕೆ ಊಟ ಹಾಕುವ ಸ್ಥಿತಿಗೆ ಈ ಗಣಪ ಇಟ್ಟಿದ್ದಾನೆ ಎಂದು ಹೇಳಿದ್ದಾರೆ. ಇಲ್ಲಿನ ಭಕ್ತಾಧಿಗಳು ಹೇಳುವ ಪ್ರಕಾರ ಈ ಉದ್ಭವ ಗಣಪತಿಗೆ ಬೇಡಿಕೊಂಡು ಗಂಟೆಯೊಂದನ್ನು ಕಟ್ಟಿ ಹೋದರೇ ಕೆಲವೆ ದಿನಗಳಲ್ಲಿ ತಮ್ಮ ಇಷ್ಟಾರ್ಥಗಳು ಈಡೇರುತ್ತದೆಯಂತೆ.

ಇದನ್ನೂ ಓದಿ:ಬಂಗಾರದ ಲೇಪನ ಪಡೆಯುತ್ತಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯ

‘ಕ್ರೈಂ ಹಂಟರ್’ ಸಂಪಾದಕ ರಮೇಶ್​ ಭಟ್​ ಜಕ್ಕೊಳ್ಳಿಯವರ ಸಹಾಯ

ಈ ದಿವ್ಯ ಸನ್ನಿಧಿಯ ಸುತ್ತಮುತ್ತಲೂ ಏನೂ ಇಲ್ಲದ ಕಾಡು ಅದಾಗ್ಯೂ ಒಂದಷ್ಟು ಸ್ಥಳೀಯ ಆಸ್ತಿಕ ಭಕ್ತರು ಯೋಚಿಸಿ, ದಿಕ್ಕು ಕಾಣದ ಪರಿಸ್ಥಿತಿಯಲ್ಲಿರುವಾಗ ಸ್ಥಳೀಯರೇ ಆದ ‘ಕ್ರೈಂ ಹಂಟರ್’ ಸಂಪಾದಕ ರಮೇಶ ಜಕ್ಕೊಳಿಯವರ ಸಹಾಯ ಸಹಕಾರವನ್ನು ಸರ್ವಭಕ್ತಾದಿಗಳು ಬಯಸಿದರು. ಆದಾಗಲೇ ಈ ಉದ್ಭವ ಗಣಪತಿಯ ದಿವ್ಯ ಸನ್ನಿಧಿಯ ಕುರಿತಂತೆ ಸ್ವ ಅನುಭವ ಪೂರ್ಣ ಮಹತ್ವವನ್ನು ಅರಿತ ಸಂಪಾದಕ ರಮೇಶ ಭಟ್ಟ, ಸುತ್ತ ಮುತ್ತಲಿನ ಇನ್ನಷ್ಟು ಭಕ್ತಾದಿಗಳನ್ನು ಸಂಘಟಿಸಿ ಈ ಸ್ಥಳಕ್ಕೊಂದು ವ್ಯವಸ್ಯೆಯನ್ನ ಕಲ್ಪಿಸಲೇಬೇಕೆಂಬ ಹೃದಯಾಂತರಾಳದ ಸತ್ಸಂಕಲ್ಪದೊಂದಿಗೆ ಸರ್ವರ ಸಹಕಾರದೊಂದಿಗೆ ಈ ದೇವಕ್ಕೆ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸುವ ಸಂಕಲ್ಪ ಕೈಗೊಂಡ ಬೆನ್ನಲ್ಲೇ ಸ್ಥಳೀಯರ ಆಸ್ತಿಕ ಮಹಾಶಯರ, ದಾನಿಗಳ ಸಹಕಾರದೊಂದಿಗೆ ಸನ್ನಿಧಿಯ ಸುತ್ತಲೂ ಕಂಪೌಂಡ್‌, ನೆಲಹಾಸು ಮತ್ತು ದೇವರಿಗೆ ಚಿಕ್ಕ ಮೇಲ್ಛಾವಣಿಯ ಕಾಮಗಾರಿಯನ್ನ ಭಕ್ತರ ಸಹಾಯದಿಂದ ನೆರವೇರಿಸಿದ್ದಾರೆ.

ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಆಗಮಿಸುತ್ತಿರುವ ಭಕ್ತರು

ಪ್ರತಿನಿತ್ಯ ನೂರಾರು ಭಕ್ತರು, ಈ ದಿವ್ಯ ಗಣಪನ ಸನ್ನಿಧಿಗೆ ಸಂದರ್ಶಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕೋರಿ ಹರಕೆ, ಹೇಳಿಕೆ ಕಟ್ಟಿಕೊಳ್ಳುತ್ತಿರುವುದು ಸಾಮಾನ್ಯ ಸಂಗತಿ, ಕಳೆದ ವರ್ಷದಿಂದಲೇ ಇಲ್ಲಿ ಹೋಮ-ಹವನ ಇತ್ಯಾದಿ ದೇವತಾ ವಿನಿಯೋಗಗಳು ನಡೆಯುತ್ತಿದ್ದು, ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆಯುತ್ತಿರುವುದು ಈ ಸನ್ನಿಧಿಯ ಮಹಿಮೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ:ಕೊಟ್ಟೂರು ತರಳಬಾಳು ಹುಣ್ಣಿಮೆ: ಈಗ ಕುರುಕ್ಷೇತ್ರ ಧರ್ಮ ಕ್ಷೇತ್ರ ಆಗಿದೆ ಎಂದ ಶಿವಾಚಾರ್ಯ ಶ್ರೀ

ಒಟ್ಟಾರೆ ಈ ಉದ್ಭವ ಗಣಪನ ಸನ್ನಿಧಿಯಲ್ಲಿ ಅತ್ಯದ್ಭುತ ಅಗೋಚರ ಶಕ್ತಿಗಳಿವೆ ಎಂಬ ಅಸಾಧಾರಣವಾದ ಅಪ್ಪಟ ನಂಬಿಕೆ. ಈ ಸನ್ನಿಧಿಗೆ ನಡೆದುಕೊಳ್ಳುತ್ತಿರುವ ಅಪಾರ ಭಕ್ತಾದಿಗಳ ಮನದಾಳದಲ್ಲಿ ದಟ್ಟವಾಗಿ ಬೇರೂರಿದೆ. ಆದಷ್ಟು ಬೇಗ ಈ ಸನ್ನಿಧಿಯಲ್ಲಿ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಅತಿ ತ್ವರಿತವಾಗಿ ನಡೆದು, ಧಾರ್ವಿುಕ ಕಾರ್ಯಕ್ರಮಗಳು ಅಭೂತಪೂರ್ವವಾಗಿ ನಡೆಯಲಿ ಎಂಬುದು ಇಲ್ಲಿನ ಭಕ್ತಾಧಿಗಳ ಆಶಯವಾಗಿದೆ.

ಇನ್ನಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?