ಸಾಂಪ್ರದಾಯಿಕ ಉಡುಗೆಗೆ ಮಾತ್ರ ಎಂಟ್ರಿ, ಕಾಫಿನಾಡಿನಲ್ಲಿ ಬಿಂಡಿಗ ದೇವಿರಮ್ಮನ ದೇವಾಲಯದ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ
Muzrai department: ಸಾಂಪ್ರದಾಯಿಕ ಉಡುಗೆ ಧರಿಸದೆ ದೇವಾಲಯಕ್ಕೆ ಬರುವ ಭಕ್ತರಿಗೆ ದೇವಾಲಯದ ಒಳಗೆ ನಿಷೇಧ ಹೇರಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ಬಿಂಡಿಗ ದೇವೀರಮ್ಮ ದೇವಾಲಯಕ್ಕೆ ದೀಪಾವಳಿ ದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಚಿಕ್ಕಮಗಳೂರು, ಆಗಸ್ಟ್ 5: ಚಿಕ್ಕಮಗಳೂರು ತಾಲೂಕಿನ (Chikkamagaluru Taluk) ಮಲ್ಲೇನಹಳ್ಳಿಯಲ್ಲಿರುವ ಪ್ರಸಿದ್ಧ ಬಿಂಡಿಗ ದೇವಿರಮ್ಮನ ದೇವಾಲಯದಲ್ಲಿ(Bindiga Deviramma Temple) ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಸಾಂಪ್ರದಾಯಿಕ ಉಡುಗೆ ಧರಿಸಿ ದೇವಾಲಯಕ್ಕೆ ಬರುವಂತೆ ದೇವಾಲಯ ಅಡಳಿತ ಮಂಡಳಿ ಸೂಚಿಸಿದೆ. ಸಾಂಪ್ರದಾಯಿಕ ಉಡುಗೆ ಧರಿಸದೆ ದೇವಾಲಯಕ್ಕೆ ಬರುವ ಭಕ್ತರಿಗೆ ದೇವಾಲಯದ ಒಳಗೆ ನಿಷೇಧ ಹೇರಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ (Muzrai department) ಸೇರಿರುವ ಬಿಂಡಿಗ ದೇವೀರಮ್ಮ ದೇವಾಲಯಕ್ಕೆ ದೀಪಾವಳಿ ದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಬಿಂಡಿಗ ದೇವೀರಮ್ಮ ಬೆಟ್ಟಕ್ಕೆ ರಾಜ್ಯ ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಬಿಂಡಿಗ ದೇವಾಲಯ ಮತ್ತು ಬೆಟ್ಟಕ್ಕೆ ಬರುವವರಿಗೆ ವಸ್ತ್ರ ಸಂಹಿತೆ ರೂಲ್ಸ್ ಹಾಕಲಾಗಿದೆ.
ಇನ್ನು ಭಕ್ತರು ದೇವಾಲಯಕ್ಕೆ ಬೇಕಾಬಿಟ್ಟಿಯಾಗಿ ಬರುತ್ತಾರೆ. ಹೆಣ್ಣು ಮಕ್ಕಳು ಟೈಟ್ ಜೀನ್ಸ್, ಸ್ಕರ್ಟ್, ಶಾರ್ಟ್ಸ್ ಧರಿಸಿ ಬರುತ್ತಾರೆ. ಹಾಗೂ ಪುರುಷರು ನೈಟ್ ಪ್ಯಾಟ್, ಶಾರ್ಟ್ ಧರಿಸಿ ಬರುತ್ತಾರೆ. ಇದರಿಂದ ದೇವಾಲಯದ ಭಕ್ತಿಯ ವಾತವರಣ ಹಾಳಾಗುತ್ತಿದೆ ಎಂದು ಈ ಹಿಂದೆಯೇ ಕೆಲ ಸಂಘಟನೆಗಳು ವಾದಿಸಿದ್ದವು. ಸದ್ಯ ಈಗ ಸಿದ್ಧ ಬಿಂಡಿಗ ದೇವಿರಮ್ಮನ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಅಲ್ಲದೆ ಅನೇಕ ದೇವಾಲಯಗಳ ಕಮಿಟಿಗಳು ಈ ಕಾನೂನನ್ನು ಈಗಾಗಲೇ ಜಾರಿ ಮಾಡಿವೆ. ಪ್ರಸಿದ್ಧ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಇದೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ