ಹುಬ್ಬಳ್ಳಿ-ಧಾರವಾಡ: ನವನಗರದ ಕಿಮ್ಸ್ ಥೆರಪಿ ಸಂಶೋಧನಾ ಕೇಂದ್ರ ಸರ್ಕಾರದ ಒಂದು ಭಾಗ ಎಂದು ಆದೇಶ ಹೊರಡಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಹೇಳಿದರು. ಜಿಲ್ಲೆಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನೇರವಾಗಿ ಇಲ್ಲಿಗೆ ರೋಗಿಗಳನ್ನ ಕಳಿಸಲು ನಾನು ಆದೇಶ ಮಾಡುತ್ತೇನೆ. ಹುಬ್ಬಳ್ಳಿಯಲ್ಲಿ ಒಂದು ಸಂಸ್ಥೆ ಬೆಳೆದರೆ ಅದು ಅಕ್ಕ ಪಕ್ಕದ ಮೂರು ಜಿಲ್ಲೆಗಳಿಗೆ ಉಪಯೋಗವಾಗಲಿದೆ ಎಂದರು. ಡಾ.ಬಸವರಾಜ್ ನಾನು ಕ್ಲಾಸಮೇಟ್. ನಮ್ಮನ್ನ ಬಿಟ್ಟ ಹೋಗಿ ಅವನಿಗೆ ಚುಲೋ ಆಯ್ತು ಎಂದು ಭಾಷಣದ ವೇಳೆ ಮುಖ್ಯಮಂತ್ರಿಯವರು ನಗೆ ಚಟಾಕಿ ಹಾರಿಸಿದರಲ್ಲದೆ, ಬಸವರಾಜ್ ಇನ್ನು ಹೆಚ್ಚಿನ ಹಣ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಕಿಮ್ಸ್ ಥೆರಪಿ, ಸಂಶೋಧನಾ ಕೇಂದ್ರಕ್ಕೆ 5 ಕೋಟಿ ಕೊಡುತ್ತೇನೆ. ಕ್ಯಾನ್ಸರ್ ಆಸ್ಪತ್ರೆಗೆ ನಾವು ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ ಎಂದರು.
60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ಚಿಕಿತ್ಸೆ ನೀಡಲು ನಮ್ಮ ಸರ್ಕಾರ ಯೋಜನೆ ಜಾರಿಗೆ ತಂದಿದೆ. ಹುಟ್ಟು ಕಿವುಡರಿಗೆ ಕಾಕ್ಲೈಯರ್ ಇನಫ್ಲಾಂಟ್ ಯೋಜನೆ ಜಾರಿ ಮಾಡಲಾಗಿದ್ದು, ಇದಕ್ಕಾಗಿ 500 ಕೋಟಿ ಅನುದಾನ ಕೊಟ್ಟಿದ್ದೇವೆ. 437 ನಮ್ಮ ಕ್ಲಿನಿಕ್, 12 ಕಿಮೋಥೆರಪಿ ಸೆಂಟರ್ ಮಾಡಿದ್ದೇವೆ. ಡಯಾಲಿಸಸ್ಗಾಗಿ ಬಜೆಟ್ನಲ್ಲಿ ಹಣ ಕೊಟ್ಟಿದ್ದೇವೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. 12 ಕಡೆ ಕಿಮೋ ಥೆರಪಿ ಸೆಂಟರ್ ಮಾಡಿದ್ದೇವೆ. ಡಯಾಲಿಸಿಸ್ಗಾಗಿ ಬಜೆಟ್ನಲ್ಲಿ ಹಣ ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ: ಸ್ಯಾಂಟ್ರೋ ರವಿಗೆ ಸೇರಿದ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗಿದೆ: ಸಿಎಂ ಬೊಮ್ಮಾಯಿ
ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದೆ. ನಾಲ್ಕು ಹೊಸ ಮೆಡಿಕಲ್ ಕಾಲೇಜ್ ಬರಲಿವೆ. ಹುಬ್ಬಳ್ಳಿಗೆ ಜಯದೇವ್ ಇನಸ್ಟಿಟ್ಯೂಟ್ ಮಂಜೂರಾಗಿದೆ. ಮುಂದಿನ ತಿಂಗಳು ಹುಬ್ಬಳ್ಳಿ ಜಯದೇವ ಸಂಸ್ಥೆಯ ಅಡಿಗಲ್ಲು ಹಾಕುವ ಕಾರ್ಯಕ್ರಮ ಇದೆ. 250 ಕೋಟಿ ಹಣ ಸಾಲಲ್ಲ, ಹೆಚ್ಚಿನ ಹಣ ಕೊಡುತ್ತೇನೆ ಎಂದರು. ಅಲ್ಲದೆ ನಮ್ಮ ಸರ್ಕಾರ ಆರೋಗ್ಯ ವಿಚಾರದಲ್ಲಿ ಬಹಳ ಕೆಲಸ ಮಾಡಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ