ಹೊಸ ವರ್ಷಾಚರಣೆಗೆ ಸಜ್ಜಾದ ಹುಬ್ಬಳ್ಳಿ: ಮೋಜು ಮಸ್ತಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸ್​ ಇಲಾಖೆ

|

Updated on: Dec 31, 2023 | 8:02 AM

ಕೊರೊನಾ ಭೀತಿಯ ನಡುವೆಯೂ ನಗರದ ಜನರು ಅದ್ಧೂರಿಯಾಗಿ ಹೊಸ ವರ್ಷಾಚರಣೆಗೆ ಸಜ್ಜಾಗಿದ್ದಾರೆ. ಹುಬ್ಬಳ್ಳಿಯ ಅನೇಕ ಹೋಟೆಲ್‌ ಮತ್ತು ರೆಸ್ಟೋರೆಂಟ್​ಗಳು ವಿವಿಧ ಥೀಮ್‌ಗಳೊಂದಿಗೆ ಸ್ಮರಣೀಯ ಈವೆಂಟ್‌ಗಳನ್ನು ಆಯೋಜಿಸುತ್ತಿವೆ. ಮತ್ತು ಈವೆಂಟ್​ಗಳಲ್ಲಿ ಪಾಲ್ಗೊಳ್ಳುವವರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗೇ ಪೊಲೀಸ್​ ಇಲಾಖೆ ಕೂಡ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೊಸ ವರ್ಷಾಚರಣೆಗೆ ಸಜ್ಜಾದ ಹುಬ್ಬಳ್ಳಿ: ಮೋಜು ಮಸ್ತಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸ್​ ಇಲಾಖೆ
ಹುಬ್ಬಳ್ಳಿ-ಧಾರವಾಡ ಕಮಿಷನರ್​​ ಕಛೇರಿ
Follow us on

ಹುಬ್ಬಳ್ಳಿ, ಡಿಸೆಂಬರ್​ 31: ಕೊರೊನಾ ಭೀತಿಯ ನಡುವೆಯೂ ನಗರದ ಜನರು ಅದ್ಧೂರಿಯಾಗಿ ಹೊಸ ವರ್ಷಾಚರಣೆಗೆ ಸಜ್ಜಾಗಿದ್ದಾರೆ. ಹುಬ್ಬಳ್ಳಿಯ (Hubballi) ಅನೇಕ ಹೋಟೆಲ್‌ (Hotel) ಮತ್ತು ರೆಸ್ಟೋರೆಂಟ್​ಗಳು (Restaurant) ವಿವಿಧ ಥೀಮ್‌ಗಳೊಂದಿಗೆ ಸ್ಮರಣೀಯ ಈವೆಂಟ್‌ಗಳನ್ನು ಆಯೋಜಿಸುತ್ತಿವೆ. ಮತ್ತು ಈವೆಂಟ್​ಗಳಲ್ಲಿ ಪಾಲ್ಗೊಳ್ಳುವವರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಕೆಲವು ಹೋಟೆಲ್‌ಗಳು ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸದಿರಲು ನಿರ್ಧರಿಸಿವೆ.

ಹೊಸ ವರ್ಷಾಚರಣೆಗೆ ನಗರ ಪೊಲೀಸರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ರಾತ್ರಿ 10 ಗಂಟೆಯ ನಂತರ ಯಾವುದೇ ಸಂಗೀತ ಕಾರ್ಯಕ್ರಮ ನಡೆಸಬಾರದು. ಮತ್ತು ಎಲ್ಲಾ ಆಚರಣೆಗಳು ರಾತ್ರಿ 12 ಗಂಟೆಯೊಳಗೆ ಮುಕ್ತಾಯಗೊಳ್ಳಬೇಕು ಎಂದು ಹೊಟೇಲ್​, ಬಾರ್​, ರೆಸ್ಟೋರೆಂಟ್​​ ಮತ್ತು ಪಬ್​ಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಸೂಚಿಸಿದ್ದಾರೆ.

ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸುವ ಸಂಪ್ರದಾಯವನ್ನು ಮುಂದುವರಿಸಲು ಮತ್ತು ಅದನ್ನು ಸ್ಮರಣೀಯವಾಗಿಸಲು ನಗರದ ಕೆಲವು ಹೋಟೆಲ್‌ಗಳು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಹುಬ್ಬಳ್ಳಿಯ ದಿ ಫರ್ನ್ ರೆಸಿಡೆನ್ಸಿಯ ಮಾರಾಟ ವ್ಯವಸ್ಥಾಪಕ ಮಹಾಂತೇಶ ಕುಲಕರ್ಣಿ ಅವರು ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಕೊಲ್ಲಾಪುರ ಮತ್ತು ಇತರ ಸ್ಥಳಗಳಿಂದ ವೃತ್ತಿಪರ ಗಾಯಕರನ್ನು ಕರೆಸಿದ್ದಾರೆ. ಮತ್ತು ದಂಪತಿಗಳಿಗಾಗಿ ಕೈಗೆಟಗುವ ದರದಲ್ಲಿ ಗಾಲಾ ಡಿನ್ನರ್ ಅನ್ನು ಸಹ ನೀಡುತ್ತಿದ್ದೇವೆ ಎಂದು ಹೇಳಿದರು.

ಕೊರೊನಾ ಹರಡುವುದನ್ನು ತಡೆಯಲು ಪೊಲೀಸ್ ಇಲಾಖೆ ಮತ್ತು ಸರ್ಕಾರ ವಿಧಿಸಿರುವ ಷರತ್ತುಗಳನ್ನು ಪಾಲಿಸುತ್ತೇವೆ. ನಮ್ಮ ಹೊಟೇಲ್​​ನಲ್ಲಿ ಲೈವ್ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ರುಚಿಕರವಾದ ಆಹಾರವನ್ನು ನೀಡುತ್ತಿದ್ದೇವೆ ಎಂದು ಹುಬ್ಬಳ್ಳಿ ಡೆನಿಸನ್ಸ್ ಹೊಟೇಲ್​ ವ್ಯವಸ್ಥಾಪಕ ಅರುಣ್ ಸವದತ್ತಿ ಹೇಳಿದರು.

ಇದನ್ನೂ ಓದಿ: ಹೊಸ ವರ್ಷಾಚರಣೆ: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳು ಹೀಗಿವೆ

ಧಾರವಾಡದ ಮಯೂರ್ ಆದಿತ್ಯ ರೆಸಾರ್ಟ್‌ನ ರಾಜೇಶಕುಮಾರ ಝಾ ಮಾತನಾಡಿ, ಹೊಸ ವರ್ಷಾಚರಣೆಯ ಅಂಗವಾಗಿ ಡಿಸೆಂಬರ್ 31 ರಂದು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಬೆಂಗಳೂರಿನ ಕಲಾವಿದರು ಹಾಗೂ ಸ್ಥಳೀಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಅನಿಯಮಿತ ಆಹಾರ ಮತ್ತು ಪಾನೀಯಗಳ ಜೊತೆಗೆ ಗ್ರಾಹಕರನ್ನು ರಂಜಿಸಲು ನಾವು ಡಿಜೆ ಕಾರ್ಯಕ್ರಮವನ್ನು ಸಹ ಆಯೋಜಿಸಿದ್ದೇವೆ. ನಾವು ಈಗಾಗಲೇ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ ಮತ್ತು ಪೊಲೀಸರು ಸೂಚಿಸಿದ ಇತರ ಸುರಕ್ಷತಾ ಕ್ರಮಗಳನ್ನು ಸಹ ಅನುಸರಿಸುತ್ತೇವೆ. ಕೊರೊನಾ ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಹೊಟೇಲ್​​ನಲ್ಲಿ 400 ಜನರಿಗೆ ಮಾತ್ರ ಅವಕಾಶ ನೀಡಿದ್ದೇವೆ ಹೇಳಿದರು.

ಹೊಸ ವರ್ಷದ ಆಚರಣೆ ನಿಮಿತ್ಯ ನಾವು ಈ ಹಿಂದೆ ಡಿಜೆ ನೈಟ್, ಕುಟುಂಬ ಕೂಟಗಳು ಮತ್ತು ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಿದ್ದೆವು, ಆದರೆ ಪೊಲೀಸ್ ಇಲಾಖೆ ಹೊರಡಿಸಿದ ಹೊಸ ಮಾರ್ಗಸೂಚಿಗಳನ್ನು ಅನುಸರಿಸಿ ನಾವು ಆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೇವೆ. ಪೊಲೀಸರ ಮಾರ್ಗಸೂಚಿಗಳ ಪ್ರಕಾರ ನಾವು ಈಗ ಆಹಾರದ ಜೊತೆಗೆ ಸಾಮಾನ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ ಎಂದು ಹನ್ಸ್ ಹೋಟೆಲ್‌ನ ಅಜಯ್ ಹಂಡಾ ಹೇಳಿದರು.

ರಾತ್ರಿ 10 ಗಂಟೆಗೆ ಸಂಗೀತ ಕಾರ್ಯಕ್ರಮಗಳನ್ನು ಮುಗಿಸಿ ಮಧ್ಯರಾತ್ರಿಯೊಳಗೆ ಎಲ್ಲಾ ಚಟುವಟಿಕೆಗಳನ್ನು ಮುಗಿಸುವಂತೆ ಹೋಟೆಲ್ ಮಾಲೀಕರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಈಗಾಗಲೆ ಹುಬ್ಬಳ್ಳಿ-ಧಾರವಾಡದ ಎಲ್ಲ ಹೊಟೇಲ್​ಗಳಿಗೆ ಸೂಚನೆ ನೀಡಲಾಗಿದೆ. ಡಿಸೆಂಬರ್ 31 ರಂದು ಹೊಟೇಲ್​ ಬಂದ್​ ಮಾಡಲು 30 ನಿಮಿಷ ಹೆಚ್ಚಿನ ಸಮಯ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:02 am, Sun, 31 December 23