ದಾವಣಗೆರೆ: ಹೊಸ ವರ್ಷಕ್ಕೆ ಕೇಕ್ ಶೋ, ಕೇಕ್ನಲ್ಲಿ ಮೂಡಿಬಂದ ದೆಹಲಿ ಸಂಸತ್ ಭವನ
250 ಕೆಜಿ ಐಶಿನ್ ಸಕ್ಕರೆ, ಐದು ಕೆಜಿ ಜಿಲೇಟಿಯನ್, 300 ಮೊಟ್ಟೆ, ಐದು ಕೆಜಿ ಗ್ಲೇಜ್ ಬಳಸಿ ಇಲ್ಲಿ ಕೇಕ್ ತಯಾರಿಸಲಾಗಿದೆ. ಈ ಕೇಕ್ ಮಾದರಿ ತಯಾರು ಮಾಡಲು 30 ದಿನ ತೆಗೆದುಕೊಂಡಿದ್ದು, ನೂತನ ಸಂಸತ್ ಭವನ ಕೇಕ್ ಕಲಾಕೃತಿಯನ್ನ ನೋಡಲು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ದಾವಣಗೆರೆ, ಡಿ.31: ಹೊಸ ವರ್ಷಾಚರಣೆಗೆ (New Year) ಬೆಣ್ಣೆ ನಗರಿ ದಾವಣಗೆರೆ (Davanagere) ಸಜ್ಜಾಗಿದೆ. ಹೊಸ ವರ್ಷವನ್ನು ವಿನೂತನವಾಗಿ ಬರಮಾಡಿಕೊಳ್ಳಬೇಕೆಂದು ಕೇಕ್ ಪ್ಯಾಲೇಸ್ವೊಂದು ಕೇಕ್ ಶೋ (Cake Show) ಆಯೋಜಿಸಿದೆ. ಈ ಕೇಕ್ ಶೂನಲ್ಲಿ ಐತಿಹಾಸಿಕ ಸಂಸತ್ ಭವನದ ಕೇಕ್ ಮಾದರಿಯನ್ನು ನಿರ್ಮಿಸಲಾಗಿದ್ದು ಜನರು ಫುಲ್ ಖುಷ್ ಆಗಿದ್ದಾರೆ. ಸಂಸತ್ ಭವನ ವೀಕ್ಷಣೆಗೆ ಜನ ಮುಗಿಬಿದ್ದಿದ್ದಾರೆ.
ದಾವಣಗೆರೆಯ ಗಾಂಧಿ ಸರ್ಕಲ್ ಬಳಿ ಇರುವ ಕೇಕ್ ಪ್ಯಾಲೇಸ್ನಲ್ಲಿ ಕೇಕ್ ವೇಳ ಆಯೋಜಿಸಲಾಗಿದ್ದು ಹೊಸ ವರ್ಷ ಸಂಭ್ರಮದಲ್ಲಿರುವ ಜನರಿಗೆ ಹೊಸತನವನ್ನ ಕೇಕಿನಲ್ಲೆ ನೀಡಬೇಕು ಎಂಬ ಉದ್ದೇಶದಿಂದ ಹೋಟೆಲ್ ಮಾಲೀಕ ಮತ್ತು ಹತ್ತು ಜನ ಬಾಣಸಿಗರು ಸೇರಿ ಒಂದು ತಿಂಗಳ ಕಾಲ ನೂತನ ಸಂಸತ್ ಭವನ ನಿರ್ಮಾಣ ಮಾಡಿದ್ದಾರೆ. ಸಕ್ಕರೆಜೊತೆಗೆ ಸಕ್ಕರೆ ಜಡ್ಡುನಲ್ಲಿ ಭಾರೀ ಗಾತ್ರದ ಕೇಕ್ ಮಾಡಿದ್ದಾರೆ. ವಿಶೇಷವಾಗಿ 250 ಕೆಜಿ ಐಶಿನ್ ಸಕ್ಕರೆ, ಐದು ಕೆಜಿ ಜಿಲೇಟಿಯನ್, 300 ಮೊಟ್ಟೆ, ಐದು ಕೆಜಿ ಗ್ಲೇಜ್ ಬಳಸಿ ಇಲ್ಲಿ ಕೇಕ್ ತಯಾರಿಸಲಾಗಿದೆ. ಈ ಕೇಕ್ ಮಾದರಿ ತಯಾರು ಮಾಡಲು 30 ದಿನ ತೆಗೆದುಕೊಂಡಿದ್ದು, ನೂತನ ಸಂಸತ್ ಭವನ ಕೇಕ್ ಕಲಾಕೃತಿಯನ್ನ ನೋಡಲು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಕ್ರಿಸ್ಮಸ್ಗೆ ಬೆಂಗಳೂರಿನಲ್ಲಿ ಕೇಕ್ ಶೋ ಆಯೋಜನೆ: ವಿಭಿನ್ನ ಶೈಲಿಯ ಕೇಕ್ ಸವಿದು ಎಂಜಾಯ್ ಮಾಡಿ
ನೂತನ ಸಂಸತ್ ಭವನದ ಜೊತೆಗೆ ವೆಡ್ಡಿಂಗ್ ಕೇಕ್, ಬೇಬಿ ಡಾಲ್, ಗಿಟಾರ್, ವಿವಿಧ ಹಣ್ಣಿನ ಮಾದರಿಯ ಸಾವಿರಾರು ಕೇಕ್ ಗಳನ್ನು ತಯಾರು ಮಾಡಲಾಗಿದ್ದು ಜನರು ಕೇಕ್ಗಳ ಮಾದರಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಐದು ದಿನಗಳ ಕಾಲ ಕೇಕ್ ಪ್ರದರ್ಶನಕ್ಕೆ ಇಡಲಾಗಿದ್ದು, ಇದನ್ನು ನೋಡಲು ಮಹಿಳೆಯರು ಮಕ್ಕಳು ಎನ್ನದೆ ಎಲ್ಲಾ ವರ್ಗದ ಜನರು ಆಗಮಿಸಿ ಸಂತೇಬೆನ್ನೂರು ಪುಷ್ಕರಣಿಯ ಜೊತೆಯ ವಿವಿಧ ಕೇಕ್ ಮಾದರಿಗಳನ್ನು ನೋಡಿ ಖುಷಿ ಪಡ್ತಿದ್ದಾರೆ.
2023 ಹೊಸ ವರ್ಷವನ್ನು ವಿನೂತನವಾಗಿ ಆಚರಣೆ ಮಾಡಲು ಸಜ್ಜಾಗಿದ್ದಾರೆ. ಬೆಣ್ಣೆನಗರಿ ದಾವಣಗೆರೆಯಲ್ಲಿ ಆಯೋಜಿಸಿರುವ ಕೇಕ್ ಕಲಾ ಕೃತಿಗಳು ಜನರನ್ನು ಆಕರ್ಷಿಸುತ್ತಿದ್ದು ಜನರು ಕೇಕ್ ಮಾದರಿಗಳೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡ್ತಾಯಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:45 am, Sun, 31 December 23