ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ

ದಕ್ಷಿಣ ರೈಲ್ವೆಯ ಕಾರ್ಯಾಚರಣಾ ನಿರ್ಬಂಧಗಳಿಂದಾಗಿ, 07355/07356 ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ವಿಸ್ತರಿಸಲಾಗಿದೆ. ರೈಲು ಈಗ ರಾಮನಾಥಪುರಂನಲ್ಲಿ ನಿಲ್ಲಲಿದೆ. ಪ್ರಸ್ತುತ ಸಮಯ ಮತ್ತು ನಿಲುಗಡೆಗಳು ಬದಲಾಗಿಲ್ಲ. ಹೆಚ್ಚುವರಿಯಾಗಿ ನಾಲ್ಕು ಟ್ರಿಪ್​ ರೈಲು ಸಂಚರಿಸಲಿದೆ ನೈಋತ್ಯ ರೈಲ್ವೆ ವಲಯ ತಿಳಿಸಿದೆ.

ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ
ಹುಬ್ಬಳ್ಳಿ ರೈಲು ನಿಲ್ದಾಣ
Updated By: ವಿವೇಕ ಬಿರಾದಾರ

Updated on: Jul 15, 2025 | 11:03 PM

ಹುಬ್ಬಳ್ಳಿ, ಜುಲೈ 15: ದಕ್ಷಿಣ ರೈಲ್ವೆಯಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, 07355/07356 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ (Hubballi-Rameswaram Train) ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲಿನ ಸಂಚಾರದ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ (South Western Railway). ಈ ವಿಶೇಷ ರೈಲು ತನ್ನ ಹಿಂದಿನ ನಿಗದಿತ ನಿಲ್ದಾಣವಾದ ರಾಮೇಶ್ವರಂ ಬದಲಿಗೆ ರಾಮನಾಥಪುರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ ಮತ್ತು ಅಲ್ಲಿಂದಲೇ ವಾಪಸ್​ ಬರಲಿದೆ. ಆದಾಗ್ಯೂ, ಈ ರೈಲುಗಳು ಪ್ರಸ್ತುತ ಸಮಯ ಮತ್ತು ನಿಲುಗಡೆಗಳೊಂದಿಗೆ ಸಂಚಾರವನ್ನು ಮುಂದುವರಿಸಲಿವೆ.

ಈ ಹಿಂದೆ ಜುಲೈ 26ರವರೆಗೆ ಸಂಚರಿಸಬೇಕಿದ್ದ, 07355 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು, ಈಗ ಆಗಸ್ಟ್ 9 ರಿಂದ 30 ರವರೆಗೆ ಹೆಚ್ಚುವರಿಯಾಗಿ ನಾಲ್ಕು ಟ್ರಿಪ್ ಸಂಚರಿಸಲಿದೆ. ಈ ರೈಲು ಈಗ ರಾಮೇಶ್ವರಂ ಬದಲು ರಾಮನಾಥಪುರಂ ನಿಲ್ದಾಣದಲ್ಲಿ ತನ್ನ ಸಂಚಾರವನ್ನು ಮೊಟಕುಗೊಳಿಸಲಿದೆ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಕರ್ನಾಟಕದ ಈ ಭಾಗದಿಂದ ಸಿಕಂದರಾಬಾದ್, ಹೈದರಾಬಾದ್​ಗೆ ವಿಶೇಷ ರೈಲು

ಅದೇ ರೀತಿ, ಈ ಹಿಂದೆ ಜುಲೈ 27ರವರೆಗೆ ಸಂಚರಿಸಬೇಕಿದ್ದ, 07356 ಸಂಖ್ಯೆಯ ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು, ಈಗ ಆಗಸ್ಟ್ 10 ರಿಂದ 31 ರವರೆಗೆ ಹೆಚ್ಚುವರಿಯಾಗಿ ನಾಲ್ಕು ಟ್ರಿಪ್ ಸಂಚರಿಸಲಿದೆ. ಈ ರೈಲು ಈಗ ರಾಮೇಶ್ವರಂ ಬದಲು ರಾಮನಾಥಪುರಂ ನಿಲ್ದಾಣದಿಂದ ಸಂಚಾರವನ್ನು ಪ್ರಾರಂಭಿಸಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ