ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ 8 ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ವಿದ್ಯಾರ್ಥಿಗಳೆಂಬ ಕಾರಣಕ್ಕೆ 6 ಜನರಿಗೆ, ಅನಾರೋಗ್ಯ ಹಿನ್ನೆಲೆಯಲ್ಲಿ ಓರ್ವನಿಗೆ, ಚಾರ್ಜ್‌ಶೀಟ್ ಸಲ್ಲಿಸದ ಹಿನ್ನೆಲೆಯಲ್ಲಿ ಮತ್ತೊಬ್ಬನಿಗೆ ಹುಬ್ಬಳ್ಳಿಯ 4ನೇ ಹೆಚ್ಚುವರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವಿಜಯಪುರ, ಬೀದರ್ ಜಿಲ್ಲಾ ಕಾರಾಗೃಹದಲ್ಲಿದ್ದ 8 ಆರೋಪಿಗಳು ಜೈಲಿನಿಂದ ಹೊರ ಬಂದಿದ್ದಾರೆ.
ರಾತ್ರೋ ರಾತ್ರಿ ಹೊತ್ತಿ ಉರಿದ ಹುಬ್ಬಳ್ಳಿ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದೇ ಒಂದು ಪೋಸ್ಟ್ನಿಂದ ಗಲಭೆಯಾಗಿದೆ. ಏಪ್ರಿಲ್ 17ರ ಸಂಜೆ 7 ಗಂಟೆ ಸುಮಾರಿಗೆ ಯುವಕನೊಬ್ಬ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಮಾದರಿಯ ಪೋಸ್ಟ್ ಒಂದನ್ನ ಹಾಕ್ಕೊಂಡಿದ್ದ. ಕೆಲವೇ ಕ್ಷಣಗಳಲ್ಲಿ ಸ್ಟೇಟಸ್ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಮುಸ್ಲಿಂ ಸಮುದಾಯದ ಗ್ರೂಪ್ಗಳಲ್ಲಿ ಪೋಸ್ಟ್ ಶೇರ್ ಆಗಿದೆ. ಕೆಲವೇ ಕ್ಷಣಗಳಲ್ಲಿ ಕೆರಳಿದ ಉದ್ರಿಕ್ತರು ಮನಬಂದಂಗೆ ಕಲ್ಲೆಸೆದು ಹುಬ್ಬಳ್ಳಿಯಲ್ಲಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿದ್ರು. ರಾತ್ರಿ 10 ಗಂಟೆ ಸುಮಾರಿಗೆ ಹಳೇ ಹುಬ್ಬಳ್ಳಿ ಠಾಣೆ ಬಳಿ ಜಮಾಯಿಸಿ ಕಲ್ಲು ತೂರಾಟ ಆರಂಭಿಸಿದ್ರು. ಬಸ್ಗಳ ಮೇಲೂ ಕಲ್ಲು ತೂರಾಡಿದ್ರು. ಬಸ್ಗಳ ಗಾಜು ಪುಡಿ ಪುಡಿಯಾದ್ವು. ಅಷ್ಟೇ ಅಲ್ಲ, ಪೊಲೀಸರ ವಾಹನದ ಮೇಲೂ ಕಲ್ಲೆಸೆದ್ರು. ಉದ್ರಿಕ್ತರ ಪುಂಡಾಟಕ್ಕೆ ಪೊಲೀಸ್ ಜೀಪ್ಗಳು ಜಖಂ ಆಗಿವೆ.
ದುಷ್ಕರ್ಮಿಗಳ ಗುಂಪು ಆಸ್ಪತ್ರೆಯನ್ನ ಕೂಡ ಬಿಟ್ಟಿಲ್ಲ. ಹಳೇ ಹುಬ್ಬಳ್ಳಿಯ ಸಂಜೀವಿನಿ ಆಸ್ಪತ್ರೆ ಮೇಲೂ ಕಲ್ಲು ತೂರಿದ್ರು. ಏಕಾಏಕಿ ಆಸ್ಪತ್ರೆ ಬಳಿ ಜಮಾಯಿಸಿ ದಾಳಿ ನಡೆಸಿದ ಕಿಡಿಗೇಡಿಗಳು ಆಸ್ಪತ್ರೆ ಮುಂಭಾಗದ ಕಿಟಕಿ ಗಾಜು ಪುಡಿ ಪುಡಿ ಮಾಡಿದ್ರು. ಹುಬ್ಬಳ್ಳಿ ನಗರದ ಆಂಜನೇಯ ದೇಗುಲದ ಮೇಲೂ ಕಲ್ಲು ತೂರಿದ್ದು ಈ ಪರಿಣಾಮ ದೇವಸ್ಥಾನದ ಕಿಟಕಿ ಗಾಜು ಪುಡಿ ಪುಡಿಯಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:56 pm, Mon, 16 May 22