ಹು-ಧಾ ಮಹಾನಗರ ಪಾಲಿಕೆ ಸಭೆಯಲ್ಲಿ ಗಲಾಟೆ: ಗೌನ್ ​ತೆಗೆದು ಸಭೆಗೆ ಹಾಜರಾದ ಮೇಯರ್​; ಆಡಳಿತ-ಪ್ರತಿಪಕ್ಷದ ನಡುವೆ ವಾಗ್ಯುದ್ಧ

| Updated By: ವಿವೇಕ ಬಿರಾದಾರ

Updated on: Sep 30, 2022 | 2:41 PM

ಮೇಯರ್​ ಗೌನ್ ವಿಚಾರವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಭೆಯಲ್ಲಿ ಪಾಲಿಕೆ ಸದಸ್ಯರ ನಡುವೆ ಗಲಾಟೆಯಾಗಿದೆ.

ಹು-ಧಾ ಮಹಾನಗರ ಪಾಲಿಕೆ ಸಭೆಯಲ್ಲಿ ಗಲಾಟೆ: ಗೌನ್ ​ತೆಗೆದು ಸಭೆಗೆ ಹಾಜರಾದ ಮೇಯರ್​; ಆಡಳಿತ-ಪ್ರತಿಪಕ್ಷದ ನಡುವೆ ವಾಗ್ಯುದ್ಧ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
Follow us on

ಧಾರವಾಡ: ಮೇಯರ್ (Mayor)​ ಗೌನ್ ವಿಚಾರವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubli Dharwad Municipal Corporation) ಸಭೆಯಲ್ಲಿ, ಪಾಲಿಕೆ ಸದಸ್ಯರ ನಡುವೆ ಗಲಾಟೆಯಾಗಿದೆ. ಗಲಾಟೆ ವೇಳೆ ಕಾಂಗ್ರೆಸ್​ ಸದಸ್ಯರು ಮೇಯರ್ ಬಾರಿಸೋ ಗಂಟೆಯನ್ನು ಕಿತ್ತುಕೊಂಡಿದ್ದಾರೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಂದು ಪಾಲಿಕೆ ಸದಸ್ಯರ ಸಭೆ ನಡೆದಿದೆ. ಸಭೆಯಲ್ಲಿ ಮೇಯರ್ ಈರೇಶ ಅಂಚಟಗೇರಿ ಮೇಯರ್ ಗೌನ್ ಧರಿಸಿರಲಿಲ್ಲ. ಈ ಸಂಬಂಧ ವಿವಾದ ಆರಂಭವಾಗಿದೆ. ಆಗ ಮೇಯರ್​ ಸಭೆಯನ್ನು ಅನಿರ್ಧಾಷ್ಟವದಿಗೆ ಮುಂದೂಡಿದ್ದಾರೆ.

ಸಭೆ ಮರು ಆರಂಭಗೊಂಡ ನಂತರವು ಮೇಯರ್ ಗೌನ್ ಧರಿಸದೇ ಬಂದ್ದಿದ್ದರು. ಇದಕ್ಕೆ ಪ್ರತಿಪಕ್ಷಗಳ ಸದಸ್ಯರು ಮೇಯರ್ ಈರೇಶ ಅಂಚಟಗೇರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಯರ್​ ಸಭೆ ನಡೆಸಲು ಮುಂದಾದಾಗ, ಕಾಂಗ್ರೆಸ್​ ಸದಸ್ಯರು ಸಭೆ ನಡೆಸೋಣ ಮೊದಲು ಗೌನ್ ಯಾಕೆ ಹಾಕಿಲ್ಲ ಅಂತ ಚರ್ಚೆ ಮಾಡಿ. ಚರ್ಚೆಯ ನಂತರ ಬೇಕಿದ್ದರೆ ಗೌನ್ ತೆಗೆಯಿರಿ ಅಂತ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡದಿದ್ದಾರೆ.

ಇದರಿಂದ ಕುಪಿತಗೊಂಡ ಮೇಯರ್ ಅಂಚಟಗೇರಿ ಸಭೆಯನ್ನು ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಲು ಗಂಟೆ ಬಾರಿಸಲು ಮುಂದಾದ ವೇಳೆ, ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಮೇಯರ್ ಬಾರಿಸೋ ಗಂಟೆ ಕಿತ್ತುಕೊಂಡಿದ್ದಾರೆ. ಈ ವೇಳೆ ಸಿಟ್ಟಾದ ಮೇಯರ್ ಈರೇಶ್ ಅಂಚಟಗೇರಿ, ಗಂಟೆ ಕಿತ್ತುಕೊಂಡು ಹೋದ ನಿರಂಜನ್​ರನ್ನು ಸಭೆಯಿಂದ ಹೊರಹಾಕುವಂತೆ ಸೂಚಿಸಿದ್ದಾರೆ.

ನಂತರ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಕಾಂಗ್ರೆಸ್ ಸದಸ್ಯರು ಗಂಟೆ ವಾಪಸ್ ಕೊಟ್ಟಿದ್ದಾರೆ. ಕೊನೆಗೆ ಮೇಯರ್ ಅನಿರ್ದಿಷ್ಟಾವಧಿಗೆ ಸಭೆ ಮುಂದೂಡಿ ಎದ್ದುಹೋದರು. ಮೇಯರ್ ಕ್ರಮಕ್ಕೆ ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದ್ದು, ಗೌನ್ ಯಾಕೆ ತೆಗದರು ಅಂತ ಉತ್ತರ ಕೊಡೋವರೆಗೂ ಬಿಡಲ್ಲ ಅಂತ ಪಟ್ಟು ಹಿಡದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:41 pm, Fri, 30 September 22