ಹುಬ್ಬಳ್ಳಿ ನ.03: ದಾಂಪತ್ಯದಲ್ಲಿ ಕಲಹ ಮೂಡಿದ್ದು, ಪೊಲೀಸರ (Police) ಸಂಧಾನಕ್ಕೆ ಒಪ್ಪದೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟಿಲಿಂಗೇಶ್ವರ ನಗರದಲ್ಲಿ ನಡೆದಿದೆ. ನಿಖಲ್ (28) ಆತ್ಮಹತ್ಯೆ ಮಾಡಿಕೊಂಡ ಪತಿ. 11 ತಿಂಗಳ ಹಿಂದೆ ನಿಖಿಲ್ ಮತ್ತು ಪ್ರೀತಿ ವಿವಾಹವಾಗಿತ್ತು (Marriage). ಆದರೆ ದಂಪತಿ ನಡುವೆ ಆರಂಭದಿಂದಲೂ ಸಾಮರಸ್ಯ ಮೂಡದೆ ವೈಮನಸ್ಸು ಬೆಳೆದು ನಿತ್ಯ ಜಗಳವಾಡುತ್ತಿದ್ದರು. ಇದರಿಂದಾಗಿ ಪ್ರೀತಿ ತವರು ಮನೆಗೆ ಹೋಗಿದ್ದಳು.
ಗುರುವಾರ (ನ.02) ಪ್ರೀತಿ ಮತ್ತು ಕುಟುಂಬಸ್ಥರು ನಿಖಿಲ್ನನ್ನು ಕೇಶ್ವಾಪುರ ಠಾಣೆಗೆ ಕರೆಯಿಸಿದ್ದರು. ಠಾಣೆಯಲ್ಲಿ ಪೊಲೀಸರು ನಿಖಲ್ಗೆ ಮಾನಿಸಕವಾಗಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಕೇಶ್ವಾಪುರ ಪೊಲೀಸರು ನಿಖಲ್ಗೆ ಒಂದೇ ದಿನದಲ್ಲಿ 2 ಲಕ್ಷ ರೂ. ನೀಡುವಂತೆ ತಾಕೀತು ಮಾಡಿದ್ದರು. ಇದರಿಂದ ಮನನೊಂದು ಮನೆಗೆ ಬಂದ ನಿಖಿಲ್, ಇಂದು (ನ.03) ಬೆಳಗಿನ ಜಾವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೊಪ್ಪಳ: ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿ ಹಾಗೂ ಭ್ರೂಣ ಮೃತಪಟ್ಟಿರುವ ಘಟನೆ ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಅರಳಿಹಳ್ಳಿ ಗ್ರಾಮದ ನಿವಾಸಿ ಅಂಬಿಕಾ ಯಮನೂರಪ್ಪ (30) ಮೃತ ಗರ್ಭಿಣಿ. ಸೂಕ್ತ ಸಮಯದಲ್ಲಿ ಸಿಜೇರಿಯನ್ ಮಾಡದಿದ್ದರಿಂದ ಭ್ರೂಣ ಸಾವಿಗೀಡಾಗಿದೆ. ಇನ್ನು ಭ್ರೂಣ ಹೆರಿಗೆಗೆ ಮುನ್ನವೇ ಮೃತಪಟ್ಟಿದ್ದರೂ ಸಿಬ್ಬಂದಿ ಹೊರತೆಗೆದಿರಲಿಲ್ಲ. ಆಸ್ಪತ್ರೆಗೆ ವೈದ್ಯರು ಬಾರದೆ ನರ್ಸ್‌ಗಳಿಗೆ ಜವಾಬ್ದಾರಿ ವಹಿಸಿರುವ ಆರೋಪ ಕೇಳಿಬಂದಿದೆ. ಅಂಬಿಕಾ ಸ್ಥಿತಿ ಕೈ ಮೀರಿದಾಗ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಿದ್ದರು.
ಅಂಬಿಕಾ ಅವರಿಗೆ ಮೂರು ಹೆರಿಗೆ ನಾರ್ಮಲ್ ಆಗಿತ್ತು, ನಾಲ್ಕನೇ ಹೆರಿಗೆಗಾಗಿ ಬಂದಿದ್ದರು. ನಾರ್ಮಲ್ ಹೆರಿಗೆ ಆಗುತ್ತೆ ಎಂದು ನಿರ್ಲಕ್ಷ್ಯ ವಹಿಸಿದ್ದೇ ಅಂಬಿಕಾ ಸಾವಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಜೇರಿಯನ್ ಮಾಡದೇ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋವಿದೆ. ತಾಲೂಕು ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Fri, 3 November 23