ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮುಖ್ಯಮಂತ್ರಿ ಆಗಿದ್ದಾಗ ಬೇಕಾಬಿಟ್ಟಿಯಾಗಿ ಕಾಮಗಾರಿ ಮಂಜೂರು ಮಾಡಿದರು. ಆದರೆ ಈ ಕಾಮಗಾರಿಗೆ ಹಣಕಾಸು ಇಲಾಖೆಯ ಒಪ್ಪಿಗೆ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರ ಬಿಲ್ ಬಾಕಿ ಇರುವುದು ಕಳೆದ ಬಿಜೆಪಿ ಸರ್ಕಾರದ್ದು. ಈಗ ದುರುದ್ದೇಶದಿಂದ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಇದೆಲ್ಲ ಬಿಜೆಪಿ ಸರ್ಕಾರದ ರಾಡಿ. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಕಾಮಗಾರಿ ಬಾಕಿ ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.
ಬಿಜೆಪಿಯಿಂದ ‘ಪೇಸಿಎಸ್’ ಅಭಿಯಾನ ಕಾಂಗ್ರೆಸ್ ಪಕ್ಷದ ಕಾರ್ಬನ್ ಕಾಪಿ. ‘ಪೇ ಸಿಎಸ್’ಗೆ ಅರ್ಥವೇ ಇಲ್ಲ, ಜನರು ಇದನ್ನು ನಂಬುವುದಿಲ್ಲ. ಕಾಂಗ್ರೆಸ್ನವರು ಮಾಡಿದ್ದನ್ನೇ ಕಾಪಿ ಮಾಡುವುದಕ್ಕೆ ಹೊರಟಿದ್ದಾರೆ. ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷ ಬಳಿಕ ಕಾಂಗ್ರೆಸ್ ಅಭಿಯಾನ ಆರಂಭವಾಗಿತ್ತು. ಆದರೆ ಬಿಜೆಪಿಯವರು ಮೂರು ತಿಂಗಳಲ್ಲಿ ಅಭಿಯಾನ ಮಾಡುತ್ತಾರೆಂದರೇ ಇದಕ್ಕೆ ಅರ್ಥವಿಲ್ಲ. ಬಿಜೆಪಿಯಲ್ಲಿದ್ದಾಗ ಎಲ್ಲ ವಿಷಯಗಳನ್ನು ಕೋರ್ ಕಮಿಟಿಯಲ್ಲಿ ಹೇಳಿದ್ದೆ. ಹೊರಗಡೆ ಹೇಳೋಕೆ ಆಗದ ವಿಷಯಗಳನ್ನ ಹೇಳಿದ್ದೆ, ಆದರೆ ಅವರು ತಿಳಿದುಕೊಳ್ಳಲಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ: ವಿದ್ಯಾರ್ಥಿನಿಯರ ಅಶ್ಲೀಲ ಭಾವಚಿತ್ರ ಪೋಸ್ಟ್ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ
ಹಲಿಯಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದೆ. ನಮ್ಮ ಜೊತೆ ರಾಹುಲ್ ಗಾಂಧಿ ಮೂರು ಗಂಟೆ ಕಾಲ ಚರ್ಚಿಸಿದರು. ಲೋಕಸಭೆ ಚುನಾವಣೆಯಲ್ಲಿ ನಾವು ಹೇಗೆ ಗೆಲ್ಲಬೇಕೆಂಬುವುದರ ಕುರಿತು ಚರ್ಚೆಯಾಗಿದೆ. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ರಾಹುಲ್ ಗಾಂಧಿ ಅವರ ಜೊತೆ ಚರ್ಚಿಸಿದ್ದೇವೆ. ಯಾವ ಟಾಸ್ಕ್ ಕೊಟ್ಟಿಲ್ಲ, ಕೆಲ ವಿಚಾರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 15ರಿಂದ 20 ಸೀಟ್ ಗೆಲ್ಲುವ ಗುರಿ ಇದೆ ಎಂದರು.
ಬಿಜೆಪಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಭಾರತೀಯ ಜನತಾ ಪಕ್ಷ ಈಗ ಲೀಡರ್ ಲೆಸ್ ಪಾರ್ಟಿಯಾಗಿದೆ. ಮೂರು ತಿಂಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತಿಲ್ಲ. ಬಿಜೆಪಿ ದಯನೀಯ ಪರಿಸ್ಥಿತಿ ಬಗ್ಗೆಯೂ ಚರ್ಚೆ ಆಗಿದೆ. ಹೈಕಮಾಂಡ್ ನಾಯಕರ ಬಳಿ ನಾನು ಯಾವುದೇ ಷರತ್ತು ಹಾಕಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ