ಅವರೆಲ್ಲರೂ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ನೌಕರಿ ಮಾಡಿ ಇನ್ನೇನು ನಿವೃತ್ತಿಯಾದ (transport corporation retired employees) ಬಳಿಕ ನೆಮ್ಮದಿ ಜೀವನ ಕಳೆಯಬೇಕು ಅಂದುಕೊಂಡಿದ್ದರು. ಆದ್ರೆ ನಿವೃತ್ತ ನೌಕರರ ಕನಸಿಗೆ ರಾಜ್ಯ ಸರ್ಕಾರ (Karnataka government) ತಣ್ಣೀರೆರಚಿದೆ. ನಿವೃತ್ತಿ ನಂತರದ ಆರ್ಥಿಕ ಸೌಲಭ್ಯ (Salary Perks) ನೀಡದೇ ಸತಾಯಿಸುತ್ತಿದೆ. ಇದರಿಂದ ನೊಂದ 5 ಸಾವಿರಕ್ಕೂ ಹೆಚ್ಚು ನಿವೃತ್ತರು ಬೃಹತ್ ಪ್ರತಿಭಟನೆಯ ಹಾದಿ ತುಳಿದಿದ್ದಾರೆ.
ನಿವೃತ್ತಿ ಬಳಿಕ ಬಾರದ ಆರ್ಥಿಕ ಸೌಲಭ್ಯ… ಮತ್ತೊಂದೆಡೆ ಸೌಲಭ್ಯಗಳು ಬಾರದ ಹಿನ್ನೆಲೆಯಲ್ಲಿ ಮನೆ ಮುನ್ನಡೆಸುವ ಚಿಂತೆಯಲ್ಲಿರೋ ನಿವೃತ್ತ ನೌಕರರು… ಇವುಗಳ ಮಧ್ಯೆ ತಮಗೆ ನ್ಯಾಯಯುತವಾಗಿ ಬರಬೇಕಾದ ಹಿಂಬಾಕಿ (ಅರಿಯರ್ಸ್) ಸೇರಿದಂತೆ ಇತರೆ ಸೌಲಭ್ಯ ಪಡೆದುಕೊಳ್ಳಲು ಕಚೇರಿ ಅಲೆದಾಡುತ್ತ ತಮ್ಮ ನಿವೃತ್ತಿಯ ಬದುಕನ್ನು ಸವೆಸುತ್ತಿರುವ ರಾಜ್ಯದ ನಾಲಕ್ಕೂ ಸಾರಿಗೆ ನಿಗಮಗಳ 5 ಸಾವಿರಕ್ಕೂ ಹೆಚ್ಚು ನಿವೃತ್ತರು ರೋಸಿ ಹೋಗಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ 2016 ರಲ್ಲಿ ಶೇ.15 ರಷ್ಟು ವೇತನ ಪರಿಷ್ಕರಣೆ ಮಾಡಲಾಗಿತ್ತು. ಇದರನ್ವಯ ನಾಲ್ಕು ವರ್ಷದ ಬಳಿಕ ಅಂದರೆ 2020ಕ್ಕೆ ಮಾಡಬೇಕಿದ್ದ ವೇತನ ಪರಿಷ್ಕರಣೆಯನ್ನು 2023ಕ್ಕೆ ಮಾಡಲಾಗಿದೆ. ಇದರಿಂದ 2023 ಕ್ಕೆ ನಿವೃತ್ತರಾದ ನೌಕರರಿಗೆ ಅನ್ಯಾಯವಾಗಿದೆ ಎಂಬುದು ಹಲವರ ಆರೋಪ. ಸಂಸ್ಥೆಯ ಈ ತಲೆಬುಡ ಇಲ್ಲದ ನಿರ್ಧಾರದಿಂದ 5 ಸಾವಿರ ನಿವೃತ್ತ ಸಾರಿಗೆ ಸಂಸ್ಥೆ ಸಿಬ್ಬಂದಿ ತಮಗೆ ಬರಬೇಕಾದ ಹಿಂಬಾಕಿಗಾಗಿ ಪರಿತಪಿಸುತ್ತಿದ್ದಾರೆ ಎನ್ನುತ್ತಾರೆ ಆರ್ ಎಸ್ ಕುಲಕರ್ಣಿ, ನೌಕರರ ಕ್ಷೇಮಾಭಿವೃದ್ಧಿ ಸಂಘಟನಾ ಕಾರ್ಯದರ್ಶಿ.
Also read: ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಮಾರಾಮಾರಿ
ಅಲ್ಲದೆ, ತಮ್ಮ ಇಡೀ ಜೀವನವನ್ನು ನಿಗಮದ ಅಭಿವೃದ್ಧಿಗೆ ಸವೆಸಿರುವ ನಿವೃತ್ತ ನೌಕರರು, ವೇತನ ಪರಿಷ್ಕರಣೆ ವಿಚಾರದಲ್ಲಿ ತಾರತಮ್ಯ ಮಾಡಿರುವ ಸರ್ಕಾರದ ವಿರುದ್ಧ ಬೀದಿಗಿಳಿದು ಅಸಮಾಧಾನ ಹೊರ ಹಾಕಲಿದ್ದಾರೆ. ಸದ್ಯ ಕಾರ್ಯ ನಿರ್ವಹಿಸುತ್ತಿರು ಸಾರಿಗೆ ಸಂಸ್ಥೆ ನೌಕರರಿಗೆ ಶೇ. 15 ರಷ್ಟು ವೇತನ ಪರಿಷ್ಕರಣೆ ನೀಡಿರುವ ಸರ್ಕಾರ, ನಿವೃತ್ತರಿಗೆ ಕೊಡಬೇಕಾದ ಅರಿಯರ್ಸ್ ಮರೆಯಿತೆ ಎಂಬ ಅನುಮಾನ ಕಾಡುತ್ತಿದೆ. ಇದೇ ವಿಚಾರವಾಗಿ ನಾಲಕ್ಕೂ ಸಾರಿಗೆ ನಿಗಮಗಳ ನಿವೃತ್ತ ನೌಕರರು ಇದೇ ಫೆಬ್ರವರಿ 20 ಮಂಗಳವಾರದಂದು ಪ್ರತಿಭಟನೆಗೆ ಯೋಜನೆ ರೂಪಿಸುತ್ತಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ಮೊದಲೇ ನಷ್ಟದಲ್ಲಿರುವ ಸಾರಿಗೆ ನಿಗಮಕ್ಕೆ ಹೊಸ ತಲೆನೋವು ಆರಂಭವಾಗಿದೆ. ನಿಯಮಾನುಸಾರ 2016 ಕ್ಕೆ ವೇತನ ಪರಿಷ್ಕರಣೆ ಆಗಿದೆ. ಇದಾದ ಬಳಿಕ 2020 ಕ್ಕೆ ಮತ್ತೆ ಪರಿಷ್ಕರಣೆ ಆಗಬೇಕಿತ್ತು. ಆದರೆ, 2020 ಕ್ಕೆ ವೇತನ ಪರಿಷ್ಕರಿಸದೇ ನೇರವಾಗಿ 2023ಕ್ಕೆ ವೇತನ ಪರಿಷ್ಕರಣೆ ಮಾಡಲಾಗಿದೆ. ಹೀಗಾಗಿ 8 ವರ್ಷ ವೇತನ ಪರಿಷ್ಕರಣೆ ಆಗಿಯೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಧ್ಯ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಶೇ. 25 ರಷ್ಟು ವೇತನ ಪರಿಷ್ಕರಣೆ ಆಗಿದೆ. ಆದ್ರೆ 2020 ರಿಂದ 2023 ಮಾರ್ಚ್ ವರೆಗೆ ನಿವೃತ್ತರಾದವರಿಗೆ ಹಾಲಿ ದಿನ ವರೆಗೂ ಹಿಂಬಾಕಿ ಕೊಡಬೇಕು ಎಂಬುದು ನಿವೃತ್ತರ ವಾದ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ