AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಕ್ಕೆ ಜೈನಮುನಿ 10 ದಿನಗಳ ಡೆಡ್‌ಲೈನ್: ಜೈನ ಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೆ ಸುವರ್ಣಸೌಧ ಮುಂದೆ ದೇಹತ್ಯಾಗ ಎಚ್ಚರಿಕೆ

ರಾಜ್ಯದಲ್ಲಿ ಜೈನ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಜೈನಮುನಿ ಗುಣಧರನಂದಿ ಶ್ರೀಗಳು ಆಗ್ರಹಿಸಿದ್ದಾರೆ. 10 ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ಬೆಳಗಾವಿಯ ಸುವರ್ಣಸೌಧದ ಎದುರು ಅನ್ನ-ನೀರು ತ್ಯಜಿಸಿ 'ಸಲ್ಲೇಖನ ವ್ರತ' ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜೈನ ಸಮುದಾಯದ ನಿರ್ಲಕ್ಷ್ಯ, ದೌರ್ಜನ್ಯಗಳ ವಿರುದ್ಧ ಇದು ನಿರ್ಣಾಯಕ ಹೋರಾಟವಾಗಿದೆ.

ಸರ್ಕಾರಕ್ಕೆ ಜೈನಮುನಿ 10 ದಿನಗಳ ಡೆಡ್‌ಲೈನ್: ಜೈನ ಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೆ ಸುವರ್ಣಸೌಧ ಮುಂದೆ ದೇಹತ್ಯಾಗ ಎಚ್ಚರಿಕೆ
ಡಿಕೆಶಿ ಮತ್ತು ಜೈನ್ ಮುನಿ Image Credit source: Tv9 kannada
ಸಂಜಯ್ಯಾ ಚಿಕ್ಕಮಠ
| Edited By: |

Updated on:Oct 27, 2026 | 8:21 PM

Share

ಹುಬ್ಬಳ್ಳಿ , ಅ,27: ರಾಜ್ಯದಲ್ಲಿ ಜೈನ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಜೈನ ಸಮುದಾಯವು ಸರ್ಕಾರದ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಧುಮುಕಿದೆ. ಮುಂದಿನ 10 ದಿನಗಳ ಒಳಗಾಗಿ ಸರ್ಕಾರ ಜೈನ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಘೋಷಿಸದಿದ್ದರೆ ಬೆಳಗಾವಿಯ ಸುವರ್ಣಸೌಧದ ಎದುರು ಅನ್ನ, ನೀರು ತೊರೆದು ‘ಸಲ್ಲೇಖನ ವ್ರತ’ ಕೈಗೊಂಡು ದೇಹತ್ಯಾಗ ಮಾಡುವುದಾಗಿ ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥದ ಶ್ರೀ ಗುಣಧರನಂದಿ ಜೈನಮುನಿ ಮಹಾರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​​ ಅವರಿಗೆ ಸುದೀರ್ಘ ಪತ್ರ ಬರೆದಿರುವ ಜೈನಮುನಿಗಳು, ವರೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಹಕ್ಕುಗಳಿಗಾಗಿ ಹಮ್ಮಿಕೊಂಡಿರುವ ಹೋರಾಟದ ರೂಪುರೇಷೆಯನ್ನು ಪ್ರಕಟಿಸಿದ್ದಾರೆ.

ಅಲ್ಪಸಂಖ್ಯಾತ ನಿಗಮದಿಂದ ಪ್ರತ್ಯೇಕತೆ – ಜೈನ ಸಮುದಾಯದ ಪ್ರಮುಖ ಬೇಡಿಕೆಗಳು

ರಾಜ್ಯದಲ್ಲಿ ಸಣ್ಣ ಸಣ್ಣ ಸಮುದಾಯಗಳಿಗೆ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವ ಸರ್ಕಾರ, ರಾಜ್ಯದಲ್ಲಿ ಬರೋಬ್ಬರಿ 20 ಲಕ್ಷ ಮತದಾರರಿರುವ ಜೈನ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಗುಣಧರನಂದಿ ಶ್ರೀಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೈನ ಬಸದಿಗಳು ಹಾಗೂ ಮುನಿಗಳ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅನ್ಯಾಯ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಜೈನ ಮುನಿಗಳು ಪಾದಯಾತ್ರೆ (ಸಂಚಾರ) ನಡೆಸುವ ಸಂದರ್ಭದಲ್ಲಿ ರಾತ್ರಿ ವೇಳೆ ತಂಗಲು ಸರ್ಕಾರಿ ಶಾಲೆಗಳಲ್ಲಿ ಅಧಿಕೃತ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 99 ಲಕ್ಷ ವೋಟ್ ಡಿಲೀಟ್: ಫಾರ್ಮ್ 7 ವಿವಾದಕ್ಕೆ ವಿಪಕ್ಷಗಳು ಕಾರಣ ಎನ್ನುವುದು ಸ್ಪಷ್ಟ ಎಂದ ಡಿಕೆಶಿ

ನವೆಂಬರ್ 15 ರಿಂದ ಪಾದಯಾತ್ರೆ ಹಾಗೂ ಸುವರ್ಣಸೌಧ ಮುತ್ತಿಗೆ:

ಮೊದಲು ಜೈನ ಮತದಾರರು ಹೆಚ್ಚಿರುವ ಕ್ಷೇತ್ರಗಳ ಶಾಸಕರನ್ನು ಭೇಟಿಯಾಗಿ, ಹೋರಾಟಕ್ಕೆ ಬೆಂಬಲ ನೀಡುವ ಬಗ್ಗೆ ಅವರ ನಿಲುವು ಸ್ಪಷ್ಟಪಡಿಸುವಂತೆ ಒತ್ತಾಯಿಸಲಾಗುವುದು. ಲಕ್ಷಾಂತರ ಜೈನ ಸಮುದಾಯದ ಜನರೊಂದಿಗೆ ಚಿಕ್ಕೋಡಿಯಿಂದ ಬೆಳಗಾವಿ ಸುವರ್ಣಸೌಧದವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು. ಬೆಳಗಾವಿ ಸುವರ್ಣಸೌಧದ ಎದುರು ಅನ್ನ, ನೀರು ಸಂಪೂರ್ಣವಾಗಿ ತ್ಯಜಿಸಿ ‘ಸಲ್ಲೇಖನ ವ್ರತ’ ಕೈಗೊಳ್ಳುವ ಮೂಲಕ ಪ್ರಾಣತ್ಯಾಗ ಮಾಡಲಾಗುವುದು ಎಂದು ಜೈನಮುನಿಗಳು ಎಚ್ಚರಿಸಿದ್ದಾರೆ. ಜೈನ ಸಮುದಾಯದ ಈ ಹೋರಾಟದ ಎಚ್ಚರಿಕೆಗೆ ಹೇಗೆ ಸ್ಪಂದಿಸಲಿದೆ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Tue, 27 October 26

Follow Us
ಸಂಜಯ್ಯಾ ಚಿಕ್ಕಮಠ
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
99 ಲಕ್ಷ ವೋಟ್ ಡಿಲೀಟ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
99 ಲಕ್ಷ ವೋಟ್ ಡಿಲೀಟ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಧನ್ವೀರ್ ವಿವಾದ: ದರ್ಶನ್ ನೋಡಲು ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಧನ್ವೀರ್ ವಿವಾದ: ದರ್ಶನ್ ನೋಡಲು ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!