Train Cancel: ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ವಿಶೇಷ ರೈಲು 2 ದಿನ ರದ್ದು

|

Updated on: Apr 03, 2024 | 9:35 AM

ನೈಋತ್ಯ ರೈಲ್ವೆ ಬೆಂಗಳೂರು ವಲಯದಲ್ಲಿ ಸುರಕ್ಷತಾ ಕಾಮಗಾರಿ ಕೈಗೊಂಡಿರುವ ಕಾರಣ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಕೆಲವು ರೈಲುಗಳನ್ನು ಭಾಗಶಃ ರದ್ದುಗಳಿಸಲಾಗಿದೆ. ಹಾಗಿದ್ದರೆ ಯಾವ ಯಾವ ರೈಲುಗಳು ರದ್ದಾಗಿವೆ ಇಲ್ಲಿದೆ ಮಾಹಿತಿ...

Train Cancel: ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ವಿಶೇಷ ರೈಲು 2 ದಿನ ರದ್ದು
ರೈಲು
Follow us on

ಹುಬ್ಬಳ್ಳಿ, ಏಪ್ರಿಲ್​ 03: ನೈಋತ್ಯ ರೈಲ್ವೆ (SWR) ಬೆಂಗಳೂರು ವಲಯದಲ್ಲಿ ಸುರಕ್ಷತಾ ಕಾಮಗಾರಿ ಕೈಗೊಂಡಿರುವ ಕಾರಣ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ (Hubballi-Bengaluru Train Cancel). ಇನ್ನು ಕೆಲವು ರೈಲುಗಳನ್ನು ಭಾಗಶಃ ರದ್ದುಗಳಿಸಲಾಗಿದೆ. ವಂದೇ ಭಾರತ ರೈಲಿನ ಸಮಯವನ್ನು ಪರಿಷ್ಕರಿಸಲಾಗಿದೆ. ಹಾಗಿದ್ದರೆ ಯಾವ ಯಾವ ರೈಲುಗಳು ರದ್ದಾಗಿವೆ ಇಲ್ಲಿದೆ ಮಾಹಿತಿ…

ರದ್ದುಗೊಂಡಿರುವ ರೈಲುಗಳು:

ರೈಲು ಸಂಖ್ಯೆ 07339/07340 ಶ್ರೀ ಸಿದ್ಧಾರೂಢ ಸ್ವಾಮಿ (SSS) ಹುಬ್ಬಳ್ಳಿ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು ಮಧ್ಯೆ ಸಂಚರಿಸುವ ಎಸ್​ಎಸ್​ಎಸ್​ ಹುಬ್ಬಳ್ಳಿ ವಿಶೇಷ ರೈಲು ಏಪ್ರಿಲ್​ 6 ಮತ್ತು 7 ರಂದು ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 06255 ಕೆಎಸ್​ಆರ್​ ಬೆಂಗಳೂರು-ಮೈಸೂರು ಮೆಮು ವಿಶೇಷ ಮತ್ತು ರೈಲು ಸಂಖ್ಯೆ 06650 ಮೈಸೂರು KSR ಬೆಂಗಳೂರು ಮೆಮು ವಿಶೇಷ ರೈಲು ಏಪ್ರಿಲ್ 7 ಮತ್ತು 8 ರಂದು ರದ್ದುಪಡಿಸಲಾಗಿದೆ.

ಇದನ್ನೂ ಓದಿ:  Vande Bharat Express: 10 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಭಾಗಶಃ ರದ್ದು ಗೊಂಡಿರುವ ರೈಲುಗಳು

ರೈಲು ಸಂಖ್ಯೆ 17391/17392 ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರಿನ ಯಶವಂತಪುರ ನಡುವೆ ಸಂಚರಿಸುವ ರೈಲು ಏಪ್ರಿಲ್​ 7, 8 ಮತ್ತು 9 ರಂದು ಭಾಗಶಃ ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 06243 ಬೆಂಗಳೂರು ಹೊಸಪೇಟೆ ಮತ್ತು ರೈಲು ಸಂಖ್ಯೆ 06244 ಹೊಸಪೇಟೆ- ಬೆಂಗಳೂರು ರೈಲು ಏಪ್ರಿಲ್ 7, 8 ಮತ್ತು 9 ರಂದು ಭಾಗಶಃ ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 16512 ಕೆಎಸ್​​ಆರ್​ ಬೆಂಗಳೂರು-ಕಣ್ಣೂರು ರೈಲು ಏಪ್ರಿಲ್​ 7 ಮತ್ತು 8 ರಂದು ಕೆಎಸ್​ಆರ್​ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದುಪಡಿಸಲಾಗಿದೆ.

ರೈಲುಗಳ ಸಮಯ ಪರಿಷ್ಕೃತ

ರೈಲು ಸಂಖ್ಯೆ 20661 ಕೆಎಸ್​ಆರ್​ ಬೆಂಗಳೂರು ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಏಪ್ರಿಲ್​ 8 ರಂದು ಕೆಎಸ್​ಆರ್​ ಬೆಂಗಳೂರಿನಿಂದ 30 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ.

ರೈಲು ಸಂಖ್ಯೆ 16591 ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಮೈಸೂರು ಹಂಪಿ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 8 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ 90 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ.

ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು ನಿಂದ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ಅನ್ನು ಏಪ್ರಿಲ್ 8 ಮತ್ತು 9 ರಂದು ಕ್ರಮವಾಗಿ ಕೆಎಸ್‌ಆರ್ ಬೆಂಗಳೂರಿನಿಂದ 30 ನಿಮಿಷ ಮತ್ತು 75 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:05 am, Wed, 3 April 24