ಧಾರವಾಡ: ಸರ್ಕಾರಿ ಬಸ್ನ ಚಾಸಿ ಕಟ್ ಆಗಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದ ಘಟನೆ ಸೋಮವಾರ (ಆಗಸ್ಟ್ 16) ಧಾರವಾಡ ತಾಲೂಕಿನ ವನಹಳ್ಳಿ ಬಳಿ ನಡೆದಿದೆ. ಧಾರವಾಡದಿಂದ ಮೊರಬ ಗ್ರಾಮಕ್ಕೆ ತೆರಳುತ್ತಿದ್ದಾಗ ಬಸ್ ಅಪಘಾತ ಸಂಭವಿಸಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯ ಆಗಿದೆ. ಅದೃಷ್ಟವಷಾತ್ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಏಕಾಏಕಿ ಕಾರು ಸ್ಫೋಟಗೊಂಡು ವ್ಯಕ್ತಿ ಸಜೀವ ದಹನವಾದ ದಾರುಣ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳೆ ಗ್ರಾಮದ ಬಳಿ ಇಂದು (ಆಗಸ್ಟ್ 16) ನಡೆದಿದೆ. ಮರಳೆ ಗ್ರಾಮದ ಬಳಿ ಕಾರು ಸ್ಫೋಟಗೊಂಡು ದುರಂತ ಸಂಭವಿಸಿದೆ. ಕೆಎ 51, ಪಿ 3384 ನೋಂದಣಿ ಕಾರು ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ವಸ್ತುಗಳು ಸುಮಾರು 50 ಮೀಟರ್ ದೂರಕ್ಕೆ ಬಿದ್ದಿದೆ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಫೋಟದ ತೀವ್ರತೆಗೆ ಕಾರಿನಲ್ಲಿದ್ದ ವಸ್ತುಗಳು ಸಹಿತ ಕಾರಿನ ಭಾಗಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ. ಕಾರ್ ಸ್ಫೋಟದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಾರ್ ಏಕಾಏಕಿ ಹೇಗೆ ಸ್ಫೋಟವಾಯಿತು, ಅದು ಯಾವ ಕಾರ್ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕಾರ್ನಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟಿರುವುದು ತಿಳಿದುಬಂದಿದೆ. ಆದರೆ, ವ್ಯಕ್ತಿಯ ಪರಿಚಯದ ಬಗ್ಗೆಯೂ ಮಾಹಿತಿ ಲಭಿಸಿಲ್ಲ. ಪ್ರಕರಣವು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಶಿವಮೊಗ್ಗ: ಹೊತ್ತಿಉರಿದ ಬೆಂಜ್ ಕಾರ್
ಆಕಸ್ಮಿಕ ಬೆಂಕಿಯಿಂದ ಬೆಂಜ್ ಕಾರ್ ಒಂದು ಹೊತ್ತಿ ಉರಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದ ಸಮೀಪ ಭಾನುವಾರ (ಆಗಸ್ಟ್ 15) ನಡೆದಿತ್ತು. ಆಕಸ್ಮಿಕ ಬೆಂಕಿಯಿಂದಾಗಿ ಕಾರು ರಸ್ತೆಯಲ್ಲೇ ಹೊತ್ತಿ ಉರಿದಿತ್ತು. ಶಿವಮೊಗ್ಗದ ಮುರಳಿ ಎಂಬವರಿಗೆ ಸೇರಿದ ಬೆಂಜ್ ಕಾರು ಅಗ್ನಿಗೆ ಆಹುತಿ ಆಗಿತ್ತು. ಗುಳಿಗುಳಿ ಶಂಕರ ದೇಗುಲದಿಂದ ಹಿಂದಿರುಗುವಾಗ ಘಟನೆ ಸಂಭವಿಸಿತ್ತು. ಅದೃಷ್ಟವಶಾತ್ ಕಾರಿನಲ್ಲಿ ಇದ್ದ ಇಬ್ಬರು ಕೂಡ ಅಪಾಯದಿಂದ ಪಾರಾಗಿದ್ದರು. ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಕೊಪ್ಪಳದಲ್ಲಿ ಎರಡು ಲಾರಿಗಳ ನಡುವೆ ಅಪಘಾತ; ಲಾರಿಗಳ ನಡುವಲ್ಲಿ ಸಿಕ್ಕಿಕೊಂಡ ನಾಲ್ವರು
Published On - 6:36 pm, Mon, 16 August 21