ದೇಶದಲ್ಲಿ ಒಬಿಸಿ ಸಮುದಾಯಕ್ಕೆ ಬಹಳ ಅನ್ಯಾಯ ಆಗುತ್ತಿದೆ: ಶಾಸಕ ಅರವಿಂದ್ ಬೆಲ್ಲದ್
ಸಂವಿಧಾನದಲ್ಲಿ ಜಾತಿ ಆಧಾರಿತ ಮೀಸಲಾತಿ ನೀಡಬೇಕೆಂದಿದೆ. ಆದರೆ ಒಬಿಸಿಗೆ ಅನ್ಯಾಯ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಧಾರವಾಡ: ದೇಶದಲ್ಲಿ ಒಬಿಸಿ (OBC) ಸಮುದಾಯಕ್ಕೆ ಬಹಳ ಅನ್ಯಾಯ ಆಗುತ್ತಿದೆ. ಸಂವಿಧಾನದಲ್ಲಿ ಜಾತಿ ಆಧಾರಿತ ಮೀಸಲಾತಿ ನೀಡಬೇಕೆಂದಿದೆ. ಒಬಿಸಿಗೆ ಅನ್ಯಾಯ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದಾರೆ. ಕಾಂಗ್ರೆಸ್ಸಿಗರು ಮುಸ್ಲಿಮರ ಓಲೈಕೆಗಾಗಿ ಮೀಸಲಾತಿ ನೀಡಿದ್ದಾರೆ. ಒಬಿಸಿಗೆ ಆಗಿರುವ ಅನ್ಯಾಯ ಸರಿ ಮಾಡುವ ಸಮಯ ಬಂದಿದೆ ಎಂದು ಮುಸ್ಲಿಮರ ಮೀಸಲಾತಿ ತೆಗೆಯಬೇಕೆಂಬ ಆಗ್ರಹ ಕೇಳಿಬರುತ್ತಿರುವ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ್ (Arvind Bellad) ಪ್ರತಿಕ್ರಿಯಿಸಿದರು.
ಸಂವಿಧಾನದಲ್ಲಿ ಜಾತಿ ಆಧಾರಿತ ಬೇಕೋ, ಧರ್ಮ ಆಧಾರಿತ ಮೀಸಲಾತಿ ಬೇಕೋ ಅನ್ನೋದು ಚರ್ಚೆಯಾಗಿದೆ. ಸಂವಿಧಾನದಲ್ಲಿ ಜಾತಿ ಅಧಾರಿತ ಮೀಸಲಾತಿ ನೀಡಬೇಕು ಅನ್ನೋದಿದೆ. ಅದರ ಪ್ರಕಾರ ಮೀಸಲಾತಿ ಕೊಡಬೇಕು. ಕಾಂಗ್ರೆಸ್ ಅಲ್ಪ ಸಂಖ್ಯಾತರ ಒಲೈಕೆಗಾಗಿ ಓಬಿಸಿಗೆ ಅನ್ಯಾಯ ಮಾಡಿ ಮುಸ್ಲಿಂಗೆ ಮೀಸಲಾತಿ ನೀಡಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅನೇಕ ದುಡ್ಡು ಕೊಡತ್ತೆ. ಅಲ್ಪಸಂಖ್ಯಾತ ಇಲಾಖೆಯಿಂದ ಹಣ ಬರತ್ತೆ. ನನಗೆ ಅನಸಿದ ಹಾಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳತ್ತೆ. ನಾನು ಈಗಾಗಲೇ ಮೀಸಲಾತಿ ತಗೆಯಲು ಡಿಮ್ಯಾಂಡ್ ಇಟ್ಟಿದೀನಿ. ನಮ್ಮ ನಾಯಕರು ಸ್ಪಂದಿಸುತ್ತಾರೆ ಅನ್ನೋ ಭರವಸೆ ಇದೆ ಎಂದು ಹೇಳಿದರು.
ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ, ಉಳಿದಿದ್ದು ವರಿಷ್ಠರಿಗೆ ಬಿಟ್ಟದ್ದು
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದ ಕುರಿತು ಮಾತನಾಡಿದ ಅವರು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ, ಉಳಿದಿದ್ದು ವರಿಷ್ಠರಿಗೆ ಬಿಟ್ಟದ್ದು. ನನಗೀಗ 52 ವರ್ಷ, ಇನ್ನೂ 23 ವರ್ಷ ಅವಕಾಶ ಇದೆ. ಸಚಿವ ಸ್ಥಾನದ ಬಗ್ಗೆ ಬಹಳ ತಲೆಕೆಡಿಸಿಕೊಳ್ಳುವುದು ಬೇಡ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ, ಮೇಲಿನವರು ಎಲ್ಲ ನೋಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:54 pm, Sun, 23 October 22