ಮಾಂಜಾ ದಾರಕ್ಕೆ ಹುಬ್ಬಳ್ಳಿಯಲ್ಲಿ ಮಹಿಳೆ ಬಲಿ: ಸ್ಕೂಟಿಯಲ್ಲಿ ಹೋಗ್ತಿದ್ದ ಲ್ಯಾಬ್ ಟೆಕ್ನಿಷಿಯನ್ ಕುತ್ತಿಗೆ ಕಟ್

ಮಾಂಜಾ ದಾರ ದ್ವಿಚಕ್ರ ವಾಹನ ಸವಾರರು ಹಾಗೂ ಪಕ್ಷಿಗಳ ಪ್ರಾಣಕ್ಕೆ ಕುತ್ತು ತರುತ್ತಿದೆ. ಹೀಗಾಗಿಯೇ ರಾಜ್ಯದಲ್ಲಿ ಮಾಂಜಾ ದಾರ ಮಾರಾಟ ಮತ್ತು ಬಳೆಕೆಗ ಸರ್ಕಾರ ನಿಷೇಧ ಹೇರಿದೆ. ಆದ್ರೂ ಅನೇಕ ಕಡೆ ಮಾಂಜಾ ದಾರ ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಬೆಳಗಾವಿಯಲ್ಲಿ ಈ ಮಾಂಜಾ ದಾರಕ್ಕೆ ಇಬ್ಬರು ಬಲಿಯಾಗಿದ್ದಾರೆ. ಇದೀಗ ಹುಬ್ಬಳ್ಳಿಯಲ್ಲೂ ಸಹ ಮಹಿಳೆಯನ್ನು ಬಲಿಪಡೆದುಕೊಂಡಿದೆ.

ಮಾಂಜಾ ದಾರಕ್ಕೆ ಹುಬ್ಬಳ್ಳಿಯಲ್ಲಿ ಮಹಿಳೆ ಬಲಿ: ಸ್ಕೂಟಿಯಲ್ಲಿ ಹೋಗ್ತಿದ್ದ ಲ್ಯಾಬ್ ಟೆಕ್ನಿಷಿಯನ್ ಕುತ್ತಿಗೆ ಕಟ್
ವಿದ್ಯಾ (ಮೃತ ಮಹಿಳೆ)
Edited By:

Updated on: Oct 22, 2026 | 7:21 PM

ಹುಬ್ಬಳ್ಳಿ (ಅಕ್ಟೋಬರ್.22): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಾಳಿಪಟ ಹಾರಿಸಲು ಬಳಸುವ ಮಾರಕ ‘ಮಾಂಜಾ ದಾರ’ಕ್ಕೆ ಮತ್ತೊಂದು ಬಲಿಯಾಗಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ, ಅತಿಯಾದ ರಕ್ತಸ್ರಾವದಿಂದ ದಾರುಣವಾಗಿ ಮೃತಪಟ್ಟ ಘಟನೆ ಇಂದು (ಅಕ್ಟೋಬರ್ 22) ನಗರದ ಶಿವಶಂಕರ ಕಾಲೋನಿ ಬಳಿ ನಡೆದಿದೆ. ಹುಬ್ಬಳ್ಳಿಯ ಭರತ್ ನಗರದ ನಿವಾಸಿ, ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾ ಮಂಜುನಾಥ ಗೌಡರ (38) ಮೃತಪಟ್ಟ ದುರ್ದೈವಿ ಮಹಿಳೆಯಾಗಿದ್ದಾರೆ.

ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ವಿದ್ಯಾ ಇಂದು ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಮನೆಯಿಂದ ಸ್ಕೂಟಿ ಮೇಲೆ ಲ್ಯಾಬ್ ಹೊರಟ್ಟಿದ್ದಾರೆ. ಆದ್ರೆ, ಶಿವಶಂಕರ ಕಾಲೋನಿ ಬಳಿ ಹೋಗುತ್ತಿದ್ದಾಗ ಮಾಂಜಾ ದಾರ ವಿದ್ಯಾ ಕುತ್ತಿಗೆಗೆ ಸಿಲುಕಿದೆ. ಮಾಂಜಾ ದಾರ ಹರಿತವಾಗಿರುವುದರಿಂದ ವಿದ್ಯಾಳ‌ ಕುತ್ತಿಗೆ ಹರಿದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದ್ರೂ ಸ್ಥಳೀಯರು ವಿದ್ಯಾಳನ್ನು ಹುಬ್ಬಳ್ಳಿ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದ್ರೆ ವೈದ್ಯರು ವಿದ್ಯಾ ಮೃತಪಟ್ಟಿರುವುದು ಖಚಿತಪಡಿಸಿದ್ದಾರೆ. ಇನ್ನು ಮಾಂಜಾ ದಾರಕ್ಕೆ ಮಹಿಳೆ ಬಲಿಯಾಗಿದ್ದು ಕುಟುಂಬಸ್ಥರು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮಾಂಜಾ ದಾರ ಗಾಳಿಪಟದ ದಾರವಲ್ಲ, ಆಕಾಶದಲ್ಲಿ ತೂಗಾಡುವ ಯಮನ ಪಾಶ: ಇದು ಯಾವುದರಿಂದ ತಯಾರಾಗುತ್ತೆ? ಪಕ್ಷಿ, ಮನುಷ್ಯನಿಗೆ ಏಕೆ ಅಪಾಯಕಾರಿ?

ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ರೂ ಡೋಂಟ್ ಕೇರ್

ಈ ಡೇಂಜರಸ್​​ ಮಾಂಜಾ ದಾರಕ್ಕೆ ಕೆಲ ದಿನಗಳ ಹಿಂದೆ ಸಿಲುಕಿ ವ್ಯಕ್ತಿಯೋರ್ವ ಗಾಯಗೊಂಡಿದ್ದ. ಇದರಿಂದ ಎಚ್ಚೆತ್ತ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಕೆಲ ದಿನಗಳ ಹಿಂದಷ್ಟೇ ಕ್ರಮಕ್ಕೆ ಮುಂದಾಗಿದ್ದರು. ಅವಳಿ ನಗರದಲ್ಲಿ ಯಾರಾದ್ರು ಮಾಂಜಾ ದಾರ ಸಂಗ್ರಹ ಮಾಡುವದು, ಮಾರಾಟ ಮಾಡುವದು, ಮತ್ತು ಅದನ್ನು ಬಳಕೆ ಮಾಡಿದ್ರೆ ಅವರ ವಿರುದ್ದ ಕೇಸ್ ದಾಖಲಿಸುವ ಖಡಕ್ ಎಚ್ಚರಿಕೆ ನೀಡಿದ್ದರು. ಮಾಂಜಾ ದಾರ ಬಳಕೆ ಮಾಡಬಾರದು ಅನ್ನೋ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಕೂಡಾ ಮಾಡಿದ್ದರು. ಆದ್ರೂ ಸಹ ಹುಬ್ಬಳ್ಳಿ ಧಾರವಾಡ ದಲ್ಲಿ ಎಗ್ಗಿಲ್ಲದೇ ಮಾಂಜಾ ದಾರಾ ಮಾರಾಟ ಮತ್ತು ಬಳಕೆಯಾಗುತ್ತಿದೆ.

ಘಟನೆಗೆ ಕ್ಷಮೆಯಾಚಿಸಿದ ಆಯುಕ್ತ

ಕಳೆದ ತಿಂಗಳ ಹಿಂದಷ್ಟೇ ಹುಬ್ಬಳ್ಳಿ ಯಲ್ಲಿ ಮಾಂಜಾ ದಾರಕ್ಕೆ ಇಬ್ಬರು ಗಾಯಗೊಂಡಿದ್ದರು. ಇದೀಗ ಮಹಿಳೆ ಮಾಂಜಾ ದಾರಕ್ಕೆ ಸಿಲುಕಿ ಮೃತಪಟ್ಟಿರೋದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಹುಬ್ಬಳ್ಳಿ ಕೆ ಎಂ ಸಿ ಶವಾಗಾರಕ್ಕೆ ಆಗಮಿಸಿದ ಪೊಲೀಸ ಕಮಿಷನರ್ ಭೂಷಣ್ ಬೋರಸೆ, ಈ ಘಟನೆ ನಡೆದಿರುವುದು ನೋವು ತಂದಿದ್ದು, ಕ್ಷಮೆಯಾಚಿಸುತ್ತೇನೆ. ಮಾಂಜಾ ದಾರಕ್ಕೆ ಬ್ರೇಕ್ ಹಾಕಲು ಕಠೀಣ ಕ್ರಮ ಕೈಗೊಳ್ಳುತ್ತೇವೆ. ಯಾರು ಬಳಕೆ ಮಾಡುತ್ತಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ಬೀಳುತ್ತದೆ. ವಿದ್ಯಾರ್ಥಿಗಳು ಇರಲಿ, ಮಕ್ಕಳಿರಲಿ ಕೇಸ್ ಪಿಕ್ಸ್ ಎಂದು ಮತ್ತೊಮ್ಮೆ ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಮಾಂಜಾ ದಾರದಿಂದ ಮನುಷ್ಯರು, ಪಕ್ಷಿಗಳಲ್ಲದೇ, ಪರಿಸರದ ಮೇಲೆ ದುಷ್ಪರಿಣಾಮವಾಗುತ್ತಿದೆ. ಮಾಂಜಾ ದಾರವನ್ನು ಅಪಾಯಕಾರಿ ಕೆಮಿಕಲ್ ಮತ್ತು ಗಾಜಿನ ಪುಡಿ ಸೇರಿದಂತೆ ಕೆಲ ವಸ್ತುಗಳಿಂದ ತಯಾರಾ ಮಾಡಲಾಗುತ್ತದೆ. ಗಾಳಿಪಟವನ್ನು ಹಾರಿಸಲು ಹತ್ತಿ ದಾರವನ್ನು ಬಳಸಿದ್ರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದ್ರೆ ಹೆಚ್ಚಿನ ಜನರು ಮಾಂಜಾ ದಾರವನ್ನು ಬಳಕೆ ಮಾಡ್ತಿದ್ದಾರೆ. ಮಾಂಜಾ ದಾರದಿಂದ ತೊಂದರೆಗಳಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಹಿಂದೆಯೇ ಈ ಚೈನಿಸ್ ಮಾಂಜಾ, ಲೈಲಾನ್ ದಾರ ಮಾರಾಟಕ್ಕೆ ನಿಷೇಧಿಸಿದೆ. ಆದರೂ ಸಹ ಮಾರಾಟ ಮತ್ತು ಬಳಕೆಗೆ ಕಡಿವಾಣ ಬಿದ್ದಿಲ್ಲ. ಇನ್ನಾದರೂ ಕಟ್ಟು ನಿಟ್ಟಿನ ಕ್ರಮಕೈಗೊಂಡು ಈ ಹಂತಕ ಮಾಂಜಾ ದಾರವನ್ನು ಸಂಪೂರ್ವಾವಾಗಿ ನಿಲ್ಲಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಕಿಕ್ ಮಾಡಿ

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us