ಹುಬ್ಬಳ್ಳಿ, ಅ.09: ಹಳೆಯ ಚಿನ್ನಾಭರಣ ತೊಳೆದುಕೊಡುವ ನೆಪದಲ್ಲಿ 1.45 ಲಕ್ಷ ರೂಪಾಯಿ ಮೌಲ್ಯದ ಆಭರಣ ಪಡೆದು ಮಹಿಳೆಗೆ ವಂಚನೆ ಮಾಡಿರುವ ಘಟನೆ ನಡೆದಿದೆ. ನಗರದ ಜೋಳದ ಓಣಿಯ ಮಹಿಳೆ ಶ್ವೇತಾ ಖೋಡೆಗೆ ಇಬ್ಬರು ಅಪರಿಚಿತರು ವಂಚಿಸಿದ್ದಾರೆ. ಮಧ್ಯಾಹ್ನ ಮನೆಯ ಹತ್ತಿರ ಬಂದ ಅಪರಿಚಿತರು ಮಹಿಳೆಗೆ ಹಳೆಯ ಬಂಗಾರ ತೊಳೆದುಕೊಡುವುದಾಗಿ ನಂಬಿಸಿದ್ದಾರೆ. ಚಿನ್ನ ಹೊಳಪು ಮಾಡಿಕೊಡುವ ನೆಪದಲ್ಲಿ ನಾಲ್ಕು ತೊಲೆ ಮಂಗಳಸೂತ್ರ, ಒಂದು ತೊಲೆ ಚಿನ್ನದ ಸರ ಪಡೆದು ಪರಾರಿಯಾಗಿದ್ದಾರೆ. ಚಿನ್ನ ಕಳೆದುಕೊಂಡ ಮಹಿಳೆ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೊದಲು ತಾಮ್ರದ ಚೊಂಬು, ಕಾಲು ಚೈನ್ ತೊಳೆದುಕೊಟ್ಟು ನಂಬಿಕೆ ಬರುವಂತೆ ಮಾಡಿದ ಖದೀಮರು ನಂತರ ನಾಲ್ಕೂವರೆ ತೊಲ ಆಭರಣ ಪಡೆದು ಕುಕ್ಕರ್‌ನಲ್ಲಿ ಹಾಕಿ ಕುದಿಸಲು ಹೇಳಿದ್ದಾರೆ. ಬಂಗಾರ ಕಪ್ಪಾಗಿದ್ದರಿಂದ ಅದಕ್ಕೆ ಅರಿಶಿಣ ಪುಡಿ ಮತ್ತು ಬಿಳಿ ಪೌಡರ್ ಹಾಕಿ ಕೊಟ್ಟು ಕುದಿಸಿ ಎಂದು ಹೇಳಿ ಆಭರಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ಜೋಳದ ಓಣಿಯ ಶಂಕರ ಖಠಾವಕರ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದ ಶ್ವೇತಾ ಖೋಡೆ ಎಂಬ ಮಹಿಳೆಯನ್ನು ನಂಬಿಸಿ ಖದೀಮರು ಆಭರಣ ದೋಚಿದ್ದಾರೆ. ಮನೆಯಲ್ಲಿ ತಾಯಿ ಶ್ವೇತಾ ಹಾಗೂ ಮಗಳು ಇದ್ದ ಸಂದರ್ಭ ನೋಡಿ ವಂಚನೆ ನಡೆದಿದೆ. ವಂಚಕರ ಚಲನವಲನ ಸಿಸಿ ಟಿವಿ ಕ್ಯಾಮಾರಾದಲ್ಲಿ ಸರೆಯಾಗಿದೆ.
ಇದನ್ನೂ ಓದಿ: ಚಿಕ್ಕಜಾಲ ಬಳಿಯ ಡೆಕಾಥ್ಲಾನ್ ಪಾರ್ಕಿಂಗ್ ಲಾಟ್ನಲ್ಲಿ ಕಳ್ಳತನ; ಕಾರಿನ ಗ್ಲಾಸ್ ಒಡೆದು ಹಣ, ಬೆಲೆ ಬಾಳುವ ವಸ್ತು ಕದ್ದ ಖದೀಮರು
ಆತ್ಮಹತ್ಯೆ ಕತೆ ಕಟ್ಟಲು ಹೋಗಿದ್ದ ತಂದೆ-ಮಗ ಅರೆಸ್ಟ್
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಕೋಟ್ರೇಶ್ ಹಾಗೂ ಕಾವ್ಯಾ ಅನ್ನೋ ಅಣ್ಣತಂಗಿ ಮನೆಯಲ್ಲೇ ಹೆಣವಾಗಿದ್ರು. ಕಾವ್ಯಾ ಪತಿ ನಂದೀಶ್ ಮಾವ ಜಾತಪ್ಪೆ ನಿನ್ನೆ ಬೆಳಗ್ಗೆ ಚಿಗಟೇರಿ ಪೊಲೀಸ್ ಠಾಣೆಗೆ ಹೋಗಿದ್ರು. ನನ್ನ ಪತ್ನಿ ಹಾಗೂ ಬಾಮೈದಾ ವಿಷ ಸೇವಿಸಿ ಸೂಸೈಡ್ ಮಾಡಿಕೊಂಡಿದ್ದಾರೆ ಅಂತಾ ದೂರು ನೀಡಲು ಮುಂದಾಗಿದ್ರು. ಆದ್ರೆ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡ್ತಿದ್ದಂತೆ ಇಲ್ಲೇನೋ ಆಗಿದೆ ಅನ್ನೋ ಡೌಟ್ ಶುರುವಾಗಿತ್ತು. ಆಗ ವಿಚಾರ ಬಯಲಾಗಿದ್ದು ಡಬಲ್ ಮರ್ಡರ್ ರಹಸ್ಯ ತೆರೆದುಕೊಂಡಿದೆ.ತನ್ನ ತಾಯಿಯನ್ನ ಕೊಲ್ಲೋದನ್ನ ನೋಡಿದ ಪುಟ್ಟ ಮಗ, ಎಲ್ಲವನ್ನೂ ಪೊಲೀಸರಿಗೆ ವಿವರಿಸಿದ್ದ. ತಂದೆ ಹಾಗೂ ನನ್ನ ತಾತನೇ ತಾಯಿಯನ್ನ ಕೊಂದಿದ್ದಾರೆ ಅನ್ನೋದನ್ನ ತಿಳಿಸಿದ್ದಾನೆ. ಇದರಿಂದ ತಂದೆ-ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ