AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಜಾಲ ಬಳಿಯ ಡೆಕಾಥ್ಲಾನ್ ಪಾರ್ಕಿಂಗ್​ ಲಾಟ್​ನಲ್ಲಿ ಕಳ್ಳತನ; ಕಾರಿನ‌ ಗ್ಲಾಸ್ ಒಡೆದು ಹಣ, ಬೆಲೆ ಬಾಳುವ ವಸ್ತು ಕದ್ದ ಖದೀಮರು

ಚಿಕ್ಕಜಾಲ ಬಳಿಯ ಡೆಕಾಥ್ಲಾನ್ ಪಾರ್ಕಿಂಗ್​ ಲಾಟ್​ನಲ್ಲಿ ಕಳ್ಳತನ ನಡೆದಿದೆ. ಶಮಿಕ್ ಕುಟುಂಬದೊಂದಿಗೆ ನಿನ್ನೆ ರಾತ್ರಿ ಶಾಪಿಂಗ್​ಗೆ ಬಂದಿದ್ದರು. ಈ ವೇಳೆ‌ ಕಾರು ನಿಲ್ಲಿಸಿ ಹೋಗಿದ್ದಾಗ ಕಾರಿನ ಹಿಂಬದಿ ಗ್ಲಾಸ್ ಒಡೆದು ಕಳ್ಳತನ ಮಾಡಲಾಗಿದೆ. 50 ಸಾವಿರ ನಗದು, 5 ಲಕ್ಷ ಮೌಲ್ಯದ ಆ್ಯಪಲ್ ಲ್ಯಾಪ್ ಟಾಪ್, ಮೊಬೈಲ್ ಮತ್ತು ಹ್ಯಾಂಡ್ ಬ್ಯಾಗ್ ಕಳ್ಳತನವಾಗಿದೆ.

ಚಿಕ್ಕಜಾಲ ಬಳಿಯ ಡೆಕಾಥ್ಲಾನ್ ಪಾರ್ಕಿಂಗ್​ ಲಾಟ್​ನಲ್ಲಿ ಕಳ್ಳತನ; ಕಾರಿನ‌ ಗ್ಲಾಸ್ ಒಡೆದು ಹಣ, ಬೆಲೆ ಬಾಳುವ ವಸ್ತು ಕದ್ದ ಖದೀಮರು
ಡೆಕಾಥ್ಲಾನ್ ಪಾರ್ಕಿಂಗ್​ ಲಾಟ್​ನಲ್ಲಿ ಕಳ್ಳತನ
ನವೀನ್ ಕುಮಾರ್ ಟಿ
| Updated By: ಆಯೇಷಾ ಬಾನು|

Updated on:Oct 09, 2023 | 10:30 AM

Share

ದೇವನಹಳ್ಳಿ, ಅ.09: ಚಿಕ್ಕಜಾಲ ಬಳಿಯ ಡೆಕಾಥ್ಲಾನ್ (Decathlon )ಪಾರ್ಕಿಂಗ್​ ಲಾಟ್​ನಲ್ಲಿ ಕಳ್ಳತನ ನಡೆದಿದೆ. ಕಾರು ನಿಲ್ಲಿಸಿ ಶಾಪಿಂಗ್​ಗೆ ಹೋಗಿದ್ದ ವೇಳೆ ಕಳ್ಳರು ಕೈ ಚಳಕ ತೋರಿಸಿದ್ದಾರೆ. ಕಾರಿನ‌ ಗ್ಲಾಸ್ ಒಡೆದು ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ (Theft) ಮಾಡಿದ್ದಾರ. ಶಮಿಕ್ ಎಂಬುವವರಿಗೆ ಸೇರಿದ ಕಾರಿನಲ್ಲಿದ್ದ ವಸ್ತುಗಳು ಕಳ್ಳತನವಾಗಿದೆ. ಶಮಿಕ್ ಕುಟುಂಬದೊಂದಿಗೆ ನಿನ್ನೆ ರಾತ್ರಿ ಶಾಪಿಂಗ್​ಗೆ ಬಂದಿದ್ದರು. ಈ ವೇಳೆ‌ ಕಾರು ನಿಲ್ಲಿಸಿ ಹೋಗಿದ್ದಾಗ ಕಾರಿನ ಹಿಂಬದಿ ಗ್ಲಾಸ್ ಒಡೆದು ಕಳ್ಳತನ ಮಾಡಲಾಗಿದೆ. 50 ಸಾವಿರ ನಗದು, 5 ಲಕ್ಷ ಮೌಲ್ಯದ ಆ್ಯಪಲ್ ಲ್ಯಾಪ್ ಟಾಪ್, ಮೊಬೈಲ್ ಮತ್ತು ಹ್ಯಾಂಡ್ ಬ್ಯಾಗ್ ಕಳ್ಳತನವಾಗಿದೆ. ಚಿಕ್ಕ ಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳು ಅರೆಸ್ಟ್

ಮಂಡ್ಯದ ಮದ್ದೂರು ತಾಲೂಕಿನ ಚುಂಚೇಗೌಡನದೊಡ್ಡಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬೆಸಗರಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹೇಶ್, ಗೋವಿಂದ ಬಂಧಿತ ಆರೋಪಿಗಳು. ಬಂಧಿತರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, 2 ಬೈಕ್​ಗಳು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ದೇಹವನ್ನು ಕಾಲುವೆಗೆ ಎಸೆದಿದ್ದ ಮೂವರು ಪೊಲೀಸರ ಅಮಾನತು

ಮನೆಗಳ ಬೀಗ ಮುರಿದು ಚಿನ್ನ, ಬೆಳ್ಳಿ, ನಗದು ದೋಚಿದ ಕಳ್ಳರು

ಹಾಸನ ನಗರದ ಸರ್ಕಾರಿ ಪಶು ವೈದ್ಯಕೀಯ ಕಾಲೇಜಿನ ಸಿಬ್ಬಂದಿಗಳ ವಸತಿ ಸಂಕೀರ್ಣದಲ್ಲಿ ಸರಣಿ ಕಳ್ಳತನ ನಡೆದಿದೆ. ಮೂರು ಮನೆಗಳ ಬೀಗ ಮುರಿದು ಚಿನ್ನ, ಬೆಳ್ಳಿ, ನಗದು ದೋಚಲಾಗಿದೆ. ಸಹಾಯಕ ಪ್ರಾಧ್ಯಾಪಕ ಚೇತನ್, ಗ್ರಂಥಪಾಲಕರಾದ ವಿಜಯಲಕ್ಷ್ಮಿ ಹಾಗೂ ಅಡುಗೆ ಭಟ್ಟರಾದ ಗಣೇಶ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.

ಮಧ್ಯರಾತ್ರಿ ಸಿನಿಮೀಯ ಸ್ಟೈಲಲ್ಲಿ ಮುಸುಕು ಧರಿಸಿ ಬಂದಿರುವ ಮೂವರು ಖದೀಮರು, ಯಾರೂ ಇಲ್ಲದ ಮನೆಗಳನ್ನು ಗುರುತಿಸಿ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಒಟ್ಟು 60 ಗ್ರಾಂ ಚಿನ್ನ, 340 ಗ್ರಾಂ ಬೆಳ್ಳಿ ಹಾಗೂ 13 ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ಮಾಡಿದ ನಂತರ ಚಪ್ಪಲಿ ಹಾಗೂ ಬಟ್ಟೆಗಳನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದು ಮೂರನೇ ಬಾರಿಗೆ ಪಶು ವೈದ್ಯಕೀಯ ಕಾಲೇಜಿನ ಸಿಬ್ಬಂದಿಗಳ ವಸತಿ ಸಂಕೀರ್ಣದಲ್ಲಿ ಕಳ್ಳತನ ನಡೆದಿದೆ. ಇದುವರೆಗೂ ಪೊಲೀಸರಿಗೆ ಕಳ್ಳರು ಸಿಕ್ಕಿಲ್ಲ. ವಸತಿ ಸಂಕೀರ್ಣದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಪೋಲಿಸರು‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:05 am, Mon, 9 October 23