AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ರಾಜಕೀಯ ಚಟಕ್ಕಾಗಿ ದೇಶದ್ರೋಹಿಗಳ ಬೆಂಬಲಿಸಬೇಡಿ : ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ

ಸುಪ್ರೀಂ ಕೋರ್ಟ್ ತೀರ್ಪು ಬಂದರೂ ಸಹ ಮೊನ್ನೆ ಅಲ್ಲಿ ನಮ್ಮ ಗಣಪತಿಯನ್ನ ಕೂರಿಸಲು ಬಿಡಲಿಲ್ಲ. ಅದೇ ನಾಲ್ಕು ದಿನದ ನಂತರ ಬೇರೆ ಮೆರವಣಿಗೆ ಆಯ್ತು, ಅವರು ತಲ್ವಾರ್ ಇಟ್ರೂ ಕೇಳೋ‌ ಧೈರ್ಯ ಕಾಂಗ್ರೆಸ್ ಗೆ ಇಲ್ಲ. ನಿಮ್ಮ ರಾಜಕೀಯ ಚಟಕ್ಕಾಗಿ ದೇಶವನ್ನು ಒಡೆಯುವಂತಹ, ದೇಶ ವಿರೋಧಿ ಚಟುವಟಿಕೆ ಮಾಡುವಂತಹ ಈ ಜನರನ್ನು ನೀವು ಬೆಂಬಲಿಸಬೇಡಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪ್ರಲ್ಹಾದ ಜೋಶಿ ಖಡಕ್ ಸಂದೇಶ ರವಾನಿಸಿದರು.

ನಿಮ್ಮ ರಾಜಕೀಯ ಚಟಕ್ಕಾಗಿ ದೇಶದ್ರೋಹಿಗಳ ಬೆಂಬಲಿಸಬೇಡಿ : ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ
ನಿಮ್ಮ ರಾಜಕೀಯ ಚಟಕ್ಕಾಗಿ ದೇಶದ್ರೋಹಿಗಳ ಬೆಂಬಲಿಸಬೇಡಿ : ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ
ಸಾಧು ಶ್ರೀನಾಥ್​
|

Updated on:Oct 08, 2023 | 5:15 PM

Share

ಹುಬ್ಬಳ್ಳಿ : ಕಾಂಗ್ರೆಸ್ ನಾಯಕರೇ, ನಿಮ್ಮ ರಾಜಕೀಯ ಚಟಕ್ಕಾಗಿ ದೇಶವನ್ನು ಒಡೆಯುವ, ದೇಶ ವಿರೋಧಿ ಚಟುವಟಿಕೆ ಮಾಡುವಂತಹ ಜನರನ್ನ (Traitor) ಬೆಂಬಲಿಸಬೇಡಿ – ಹೀಗೆ ನೇರವಾಗಿ ಕೈ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Union Minister Pralhad Joshi). ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ (Congress) ಬಂದರೆ ಗಣಪತಿ ಕೂರಿಸಲಿಕ್ಕೆ ಬಹಳಷ್ಟು ನಿಬಂಧನೆಗಳನ್ನ ಹಾಕ್ತಾರೆ. ತುಷ್ಟೀಕರಣದ ರಾಜಕಾರಣಕ್ಕಾಗಿ (Appeasement) ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಪ್ರವೃತ್ತಿ ಮಾಡ್ತಾರೆ. ಕಾಂಗ್ರೆಸ್ ಪಕ್ಷದ ಈ ಪ್ರವೃತ್ತಿಯಿಂದಾಗಿ ಇಂದು ರಾಜ್ಯದಲ್ಲಿ ಈ ಸ್ಥಿತಿ ಬಂದಿದೆ.

1997ರಲ್ಲಿ ಈದ್ಗಾ ಮೈದಾನದಲ್ಲಿ ಸರಳವಾಗಿ ರಾಷ್ಟ್ರಧ್ವಜ ಹಾರಿಸಬಹುದಾಗಿತ್ತು. ಆದರೆ ಹಾಕಿದ ಧ್ವಜವನ್ನ ಅಂದು ಕೈ ಸರ್ಕಾರದವರು ಹರಿದು ಹಾಕಿದ್ರು‌. ಆದರೆ ನಾವು ಸುಪ್ರೀಂ ಕೋರ್ಟ್ ವರೆಗೂ ಹೋಗಿ ಹೋರಾಟ ಮಾಡಿ ನಮ್ಮ ರಾಷ್ಟ್ರಧ್ವಜವನ್ನು ಹಾರಿಸಿದೆವು. ಸುಪ್ರೀಂ ಕೋರ್ಟ್ ತೀರ್ಪು ಬಂದರೂ ಸಹ ಮೊನ್ನೆ ಅಲ್ಲಿ ನಮ್ಮ ಗಣಪತಿಯನ್ನ ಕೂರಿಸಲು ಬಿಡಲಿಲ್ಲ. ರಾತ್ರಿ ಎಲ್ಲಾ ಧರಣಿ ಮಾಡಬೇಕಾಯ್ತು. ಕೋರ್ಟ್ ಗೆ ಹೋಗಬೇಕಾಯ್ತು. ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿ ಪರ್ಮಿಷನ್ ಕೊಟ್ಟ ನಂತರ ಈದ್ಗಾ ಮೈದಾನದಲ್ಲಿ ನಾವು ಗಣಪತಿ ಕೂರಿಸಬೇಕಾಯ್ತು.

ಅದೇ ನಾಲ್ಕು ದಿನದ ನಂತರ ಬೇರೆ ಮೆರವಣಿಗೆ ಆಯ್ತು, ಅವರು ತಲ್ವಾರ್ ಇಟ್ರೂ ಕೇಳೋ‌ ಧೈರ್ಯ ಕಾಂಗ್ರೆಸ್ ನವರಿಗೆ ಇಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ಹೇಳಲು ಬಯಸ್ತೇನೆ, ನಿಮ್ಮ ರಾಜಕೀಯ ಚಟಕ್ಕಾಗಿ ದೇಶವನ್ನು ಒಡೆಯುವಂತಹ, ದೇಶ ವಿರೋಧಿ ಚಟುವಟಿಕೆ ಮಾಡುವಂತಹ ಈ ಜನರನ್ನು ನೀವು ಬೆಂಬಲಿಸಬೇಡಿ ಎಂದು ಪ್ರಲ್ಹಾದ ಜೋಶಿ ಖಡಕ್ ಸಂದೇಶ ರವಾನಿಸಿದ್ರು.

ಹೇಗೋ ಮಾಡಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರಬಹುದು, ಆದರೆ ಇಡೀ ದೇಶದಲ್ಲಿ ಈ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನಾಗಲಿಕ್ಕೂ ಅರ್ಹತೆ ಇಲ್ಲದಂತ ಸ್ಥಿತಿಯಲ್ಲಿ ಜನ ಕೂರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ತುಷ್ಟೀಕರಣ ಎಲ್ಲಿವರೆಗೆ ಬಂದಿದೆ ಅಂದ್ರೆ, ಎರಡು ವರ್ಷದ ಹಿಂದೆ ಹಳೇ ಹುಬ್ಬಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಯಾರೋ ಕಳ್ಳಕಾಕರನ್ನ ಹಿಡಿದರು ಅಂತ, ಯಾವುದೋ ಒಂದು ಸಮಾಜದವರನ್ನ ಹಿಡಿದರು ಅಂತ ಹೇಳಿ ರಾತ್ರೋರಾತ್ರಿ ನುಗ್ಗಿದ್ರು, ಪೊಲೀಸರನ್ನ ಹೊಡೆಯಲು ಪ್ರಯತ್ನ ಮಾಡಿದ್ರು, ಪೊಲೀಸರನ್ನ ಕೊಲ್ಲೋದಕ್ಕೆ ಪ್ರಯತ್ನ ಮಾಡಿದ್ರು. ಸುತ್ತಮುತ್ತಲಿನ ಅಂಗಡಿಗಳನ್ನ ಲೂಟಿ ಮಾಡಿದ್ರು. ಅವರ ಘೋಷಣೆ ಏನು..? ಪಾಕಿಸ್ತಾನ್ ಜಿಂದಾಬಾದ್ ಅಂತ. ಅವತ್ತು ಪೊಲೀಸ್ ಸ್ಟೇಷನ್ ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಹಾಕಿದವರ ಕೇಸನ್ನ ಹಿಂದಕ್ಕೆ ತೆಗೆದುಕೊಳ್ಳಬೇಕು ಎನ್ನುವಂತಹ ಈ ಡಿಕೆ ಶಿವಕುಮಾರ್ ಗೆ ಉತ್ತರವನ್ನ ಕೊಡಲೇಬೇಕು ಅಂತ ಪ್ರಲ್ಹಾದ ಜೋಶಿ ಹೇಳಿದರು.

ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರವಾಗಿ ಹರಿಹಾಯ್ದ ಪ್ರಲ್ಹಾದ ಜೋಶಿ, ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ, ಭಯೋತ್ಪಾದಕರಿಗೆ ಬೆಂಬಲ ಕೊಡೋರಿಗೆ ಜಿಂದಾಬಾದ್ ಅಂತ ಘೋಷಣೆ ಹಾಕಿದವರ ಕೇಸ್ ವಾಪಸ್ ಪಡೀತೀರಿ ಅಂತೀರಲ್ಲಾ ನಾಚಿಕೆ ಆಗಲ್ವಾ ನಿಮಗೆ? ಅಂತ ಕಟುವಾಗಿ ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಕೇಂದ್ರ ಸಚಿವರು, ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಬಂದ ನಂತರ ದೇಶ ಸುಭದ್ರವಾಗಿದೆ. ಈ ಹಿಂದೆ ಎಲ್ಲೆಂದರೆಲ್ಲಿ ಬಾಂಬ್ ಸಿಡಿಯುತ್ತಿತ್ತು, ಆದರೆ ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಬಂದ ನಂತರ ಆ ವಾತವರಣ ಇಲ್ಲ‌. ಇದು ನರೇಂದ್ರ ಮೋದಿ ಸರ್ಕಾರದ ಸಾಮರ್ಥ್ಯ ಎಂದು ಹೇಳಿದರು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Sun, 8 October 23

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ