AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: ಚಿನ್ನಾಭರಣ ತೊಳೆದುಕೊಡುವುದಾಗಿ ಹೇಳಿ 1.45 ಲಕ್ಷ ರೂ. ಮೌಲ್ಯದ ಆಭರಣ ಎಗರಿಸಿದ ಖದೀಮರು, ಮಹಿಳೆ ಕಂಗಾಲು

ಮನೆಯ ಹತ್ತಿರ ಬಂದ ಅಪರಿಚಿತರು ಮಹಿಳೆಗೆ ಹಳೆಯ ಬಂಗಾರ ತೊಳೆದುಕೊಡುವುದಾಗಿ ನಂಬಿಸಿದ್ದಾರೆ. ಚಿನ್ನ ಹೊಳಪು ಮಾಡಿಕೊಡುವ ನೆಪದಲ್ಲಿ ನಾಲ್ಕು ತೊಲೆ ಮಂಗಳಸೂತ್ರ, ಒಂದು ತೊಲೆ ಚಿನ್ನದ ಸರ ಪಡೆದು ಪರಾರಿಯಾಗಿದ್ದಾರೆ. ಚಿನ್ನ ಕಳೆದುಕೊಂಡ ಮಹಿಳೆ ಘಂಟಿಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹುಬ್ಬಳ್ಳಿ: ಚಿನ್ನಾಭರಣ ತೊಳೆದುಕೊಡುವುದಾಗಿ ಹೇಳಿ 1.45 ಲಕ್ಷ ರೂ. ಮೌಲ್ಯದ ಆಭರಣ ಎಗರಿಸಿದ ಖದೀಮರು, ಮಹಿಳೆ ಕಂಗಾಲು
ಚಿನ್ನ ತೊಳೆದುಕೊಡುವ ನೆಪದಲ್ಲಿ ಮನೆಗೆ ಬಂದ ಖದೀಮರು ಚಿನ್ನದ ಜೊತೆ ಎಸ್ಕೇಪ್ ಆಗಿದ್ದಾರೆ
TV9 Web
| Edited By: ಆಯೇಷಾ ಬಾನು|

Updated on: Oct 09, 2023 | 3:45 PM

Share

ಹುಬ್ಬಳ್ಳಿ, ಅ.09: ಹಳೆಯ ಚಿನ್ನಾಭರಣ ತೊಳೆದುಕೊಡುವ ನೆಪದಲ್ಲಿ 1.45 ಲಕ್ಷ ರೂಪಾಯಿ ಮೌಲ್ಯದ ಆಭರಣ ಪಡೆದು ಮಹಿಳೆಗೆ ವಂಚನೆ ಮಾಡಿರುವ ಘಟನೆ ನಡೆದಿದೆ. ನಗರದ ಜೋಳದ ಓಣಿಯ ಮಹಿಳೆ ಶ್ವೇತಾ ಖೋಡೆಗೆ ಇಬ್ಬರು ಅಪರಿಚಿತರು ವಂಚಿಸಿದ್ದಾರೆ. ಮಧ್ಯಾಹ್ನ ಮನೆಯ ಹತ್ತಿರ ಬಂದ ಅಪರಿಚಿತರು ಮಹಿಳೆಗೆ ಹಳೆಯ ಬಂಗಾರ ತೊಳೆದುಕೊಡುವುದಾಗಿ ನಂಬಿಸಿದ್ದಾರೆ. ಚಿನ್ನ ಹೊಳಪು ಮಾಡಿಕೊಡುವ ನೆಪದಲ್ಲಿ ನಾಲ್ಕು ತೊಲೆ ಮಂಗಳಸೂತ್ರ, ಒಂದು ತೊಲೆ ಚಿನ್ನದ ಸರ ಪಡೆದು ಪರಾರಿಯಾಗಿದ್ದಾರೆ. ಚಿನ್ನ ಕಳೆದುಕೊಂಡ ಮಹಿಳೆ ಘಂಟಿಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೊದಲು ತಾಮ್ರದ ಚೊಂಬು, ಕಾಲು ಚೈನ್ ತೊಳೆದುಕೊಟ್ಟು ನಂಬಿಕೆ ಬರುವಂತೆ ಮಾಡಿದ ಖದೀಮರು ನಂತರ ನಾಲ್ಕೂವರೆ ತೊಲ ಆಭರಣ ಪಡೆದು ಕುಕ್ಕರ್‌ನಲ್ಲಿ ಹಾಕಿ ಕುದಿಸಲು ಹೇಳಿದ್ದಾರೆ. ಬಂಗಾರ ಕಪ್ಪಾಗಿದ್ದರಿಂದ ಅದಕ್ಕೆ ಅರಿಶಿಣ ಪುಡಿ ಮತ್ತು ಬಿಳಿ ಪೌಡರ್ ಹಾಕಿ ಕೊಟ್ಟು ಕುದಿಸಿ ಎಂದು ಹೇಳಿ ಆಭರಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ಜೋಳದ ಓಣಿಯ ಶಂಕರ ಖಠಾವಕರ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದ ಶ್ವೇತಾ ಖೋಡೆ ಎಂಬ ಮಹಿಳೆಯನ್ನು ನಂಬಿಸಿ ಖದೀಮರು ಆಭರಣ ದೋಚಿದ್ದಾರೆ. ಮನೆಯಲ್ಲಿ ತಾಯಿ ಶ್ವೇತಾ ಹಾಗೂ ಮಗಳು ಇದ್ದ ಸಂದರ್ಭ ನೋಡಿ ವಂಚನೆ ನಡೆದಿದೆ. ವಂಚಕರ ಚಲನವಲನ ಸಿಸಿ ಟಿವಿ ಕ್ಯಾಮಾರಾದಲ್ಲಿ ಸರೆಯಾಗಿದೆ.

ಇದನ್ನೂ ಓದಿ: ಚಿಕ್ಕಜಾಲ ಬಳಿಯ ಡೆಕಾಥ್ಲಾನ್ ಪಾರ್ಕಿಂಗ್​ ಲಾಟ್​ನಲ್ಲಿ ಕಳ್ಳತನ; ಕಾರಿನ‌ ಗ್ಲಾಸ್ ಒಡೆದು ಹಣ, ಬೆಲೆ ಬಾಳುವ ವಸ್ತು ಕದ್ದ ಖದೀಮರು

ಆತ್ಮಹತ್ಯೆ ಕತೆ ಕಟ್ಟಲು ಹೋಗಿದ್ದ ತಂದೆ-ಮಗ ಅರೆಸ್ಟ್

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಕೋಟ್ರೇಶ್‌ ಹಾಗೂ ಕಾವ್ಯಾ ಅನ್ನೋ ಅಣ್ಣತಂಗಿ ಮನೆಯಲ್ಲೇ ಹೆಣವಾಗಿದ್ರು. ಕಾವ್ಯಾ ಪತಿ ನಂದೀಶ್‌ ಮಾವ ಜಾತಪ್ಪೆ ನಿನ್ನೆ ಬೆಳಗ್ಗೆ ಚಿಗಟೇರಿ ಪೊಲೀಸ್‌ ಠಾಣೆಗೆ ಹೋಗಿದ್ರು. ನನ್ನ ಪತ್ನಿ ಹಾಗೂ ಬಾಮೈದಾ ವಿಷ ಸೇವಿಸಿ ಸೂಸೈಡ್‌ ಮಾಡಿಕೊಂಡಿದ್ದಾರೆ ಅಂತಾ ದೂರು ನೀಡಲು ಮುಂದಾಗಿದ್ರು. ಆದ್ರೆ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡ್ತಿದ್ದಂತೆ ಇಲ್ಲೇನೋ ಆಗಿದೆ ಅನ್ನೋ ಡೌಟ್‌ ಶುರುವಾಗಿತ್ತು. ಆಗ ವಿಚಾರ ಬಯಲಾಗಿದ್ದು ಡಬಲ್‌ ಮರ್ಡರ್‌ ರಹಸ್ಯ ತೆರೆದುಕೊಂಡಿದೆ.ತನ್ನ ತಾಯಿಯನ್ನ ಕೊಲ್ಲೋದನ್ನ ನೋಡಿದ ಪುಟ್ಟ ಮಗ, ಎಲ್ಲವನ್ನೂ ಪೊಲೀಸರಿಗೆ ವಿವರಿಸಿದ್ದ. ತಂದೆ ಹಾಗೂ ನನ್ನ ತಾತನೇ ತಾಯಿಯನ್ನ ಕೊಂದಿದ್ದಾರೆ ಅನ್ನೋದನ್ನ ತಿಳಿಸಿದ್ದಾನೆ. ಇದರಿಂದ ತಂದೆ-ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ