National Youth Festival 2023 Highlights: ರಾಷ್ಟ್ರೀಯ ಯುವಜನೋತ್ಸವ: ಭಾಷಣ ಮುಗಿಸಿ ದೆಹಲಿಯತ್ತ ಹೊರಟ ಪ್ರಧಾನಿ ಮೋದಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 12, 2023 | 6:59 PM

ರಾಷ್ಟ್ರೀಯ ಯುವಜನೋತ್ಸವ 2023 ಉದ್ಘಾಟನೆ ಲೈವ್: ಇಂದು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

National Youth Festival 2023 Highlights: ರಾಷ್ಟ್ರೀಯ ಯುವಜನೋತ್ಸವ: ಭಾಷಣ ಮುಗಿಸಿ ದೆಹಲಿಯತ್ತ ಹೊರಟ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ

Hubballi Youth Festival 2023 Inauguration Live Updates: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇದೇ ಪ್ರಥಮ ಬಾರಿಗೆ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಇಂದು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇಂದು ಮಧ್ಯಾಹ್ನ 3.40 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಸ್ವಾಗತಿಸಲಿದ್ದಾರೆ. ಬಳಿಕ 3.45 ರಿಂದ 4 ಗಂಟೆವರೆಗೂ ಮೋದಿ ರೋಡ್ ಶೋ‌ ನಡೆಸಲಿದ್ದಾರೆ. ಏರ್‌ಪೋರ್ಟ್‌ನಿಂದ ಗೋಕುಲ್ ರಸ್ತೆ, ಅಕ್ಷಯ ಪಾರ್ಕ್, ಹೊಸೂರ್ ಸರ್ಕಲ್, ಐಬಿ ಸರ್ಕಲ್, ದೇಶಪಾಂಡೆ ನಗರ, ಕೋರ್ಟ್ ಸರ್ಕಲ್ ಮೂಲಕ ಹುಬ್ಬಳ್ಳಿ ರೈಲ್ವೆ ಮೈದಾನಕ್ಕೆ ಮೋದಿ ಎಂಟ್ರಿ ಕೊಡಲಿದ್ದಾರೆ. ಸಂಜೆ 4 ಗಂಟೆ ವೇಳೆಗೆ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ನಂತರ ಯುವಸಮೂಹವನ್ನು ಉದ್ದೇಶಿಸಿ ಮಾತನಾಡಿ, ಸಂಜೆ 5.35 ಕ್ಕೆ ಹುಬ್ಬಳ್ಳಿ ಏರ್‌ಪೋರ್ಟ್‌ನಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.

LIVE NEWS & UPDATES

The liveblog has ended.
  • 12 Jan 2023 06:18 PM (IST)

    National Youth Festival 2023 Live: ಏರ್​ಪೋರ್ಟ್​ನತ್ತ ತೆರಳಿದ ಪ್ರಧಾನಿ ಮೋದಿ

    ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಿ ಯುವ ಸಮೂಹವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ  ಭಾಷಣ ನಂತರ ವೇದಿಕೆಯಲ್ಲಿ ಕೈಬೀಸಿದರು. ಬಳಿಕ ಹುಬ್ಬಳ್ಳಿ ಏರ್​ಪೋರ್ಟ್​ನತ್ತ ತೆರಳಿದರು. ಪ್ರಧಾನಿ ಮೋದಿನ್ನು ರಾಜ್ಯಪಾಲ ಗೆಹ್ಲೋಟ್,​ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೀಳ್ಕೊಟ್ಟರು.

  • 12 Jan 2023 06:13 PM (IST)

    National Youth Festival 2023 Live: ವಿಜ್ಞಾನ, ತಂತ್ರಜ್ಞಾನದಲ್ಲಿ ನಮ್ಮ ಹೆಣ್ಣುಮಕ್ಕಳು ಉನ್ನತ ಸಾಧನೆ

    ಹುಬ್ಬಳ್ಳಿ: ಮಹಿಳಾ ಶಕ್ತಿ ರಾಷ್ಟ್ರಶಕ್ತಿಯನ್ನು ಜಾಗೃತವಾಗಿ ಇಟ್ಟಿದೆ. ಭಾರತದ ಮಹಿಳೆಯರು ಫೈಟರ್ ಜೆಟ್ ಹಾರಿಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನದಲ್ಲಿ ನಮ್ಮ ಹೆಣ್ಣುಮಕ್ಕಳು ಉನ್ನತ ಸಾಧನೆ ಮಾಡಿದ್ದಾರೆ. 21ನೇಯ ಶತಮಾನವನ್ನು ಭಾರತದ ಶತಮಾನ ಮಾಡಬೇಕಿದೆ. ವಿಶ್ವದ ಆಧುನಿಕ ದೇಶಗಳಿಗಿಂತಲೂ ಭಾರತ ಮುಂದೆ ಸಾಗಬೇಕಿದೆ. ಬರುವ ಕೆಲ ವರ್ಷಗಳಲ್ಲಿ ನಮ್ಮ ಜಗತ್ತು ಸಂಪೂರ್ಣ ಬದಲಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

  • 12 Jan 2023 06:03 PM (IST)

    National Youth Festival 2023 Live: ಯುವಕರಿಗಾಗಿ ಭವ್ಯ ಭವಿಷ್ಯವನ್ನು ನಾವು ರೂಪಿಸಿದ್ದೇವೆ

    ಹುಬ್ಬಳ್ಳಿ: ಕಳೆದ 8 ವರ್ಷಗಳಲ್ಲಿ ಯುವಕರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ. ಯುವಕರಿಗಾಗಿ ಭವ್ಯ ಭವಿಷ್ಯವನ್ನು ನಾವು ರೂಪಿಸಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಯಶಸ್ವಿಯಾಗಿ ಸಾಗುತ್ತಿದೆ. ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಯುವ ಶಕ್ತಿ. ಎಲ್ಲಾ ರಂಗಗಳಲ್ಲಿಯೂ ಸಕಾರಾತ್ಮಕ ಬೆಳವಣಿಗೆ ಆಗುತ್ತಿದೆ. ಭಾರತದ ಸ್ಟಾರ್ಟ್‌ಅಪ್‌ಗಳಿಗೆ ಹಣ ಹರಿದು ಬರುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

  • 12 Jan 2023 05:53 PM (IST)

    National Youth Festival 2023 Live: ಯುವಕರಿಗೆ ಇದೊಂದು ಐತಿಹಾಸಿಕ ಕ್ಷಣ

    ಹುಬ್ಬಳ್ಳಿ: ಯುವಕರಿಗೆ ಇದೊಂದು ಐತಿಹಾಸಿಕ ಕ್ಷಣ. ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಸಕಾಲ. ಹಲವು ಜಾಗತಿಕ ಉದ್ಯಮಗಳು ಭಾರತದತ್ತ ನೋಡುತ್ತಿವೆ. ರನ್‌ವೇ ರೆಡಿ ಇದೆ, ನೀವು ಟೇಕಾಫ್‌ ಆಗುವುದೊಂದೇ ಬಾಕಿ. ಭಾರತ ಒಂದು ಯುವ ದೇಶ. ಯುವಕರ ದೊಡ್ಡ ಪಡೆ, ಯುವ ಶಕ್ತಿ ನಮ್ಮ ದೇಶದಲ್ಲಿದೆ. ದೇಶದ ಬೆಳವಣಿಗೆಗೆ ಯುವ ಶಕ್ತಿ ಅಡಿಪಾಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

  • 12 Jan 2023 05:48 PM (IST)

    National Youth Festival 2023 Live: ದೇಶದ ಭವಿಷ್ಯ ಯುವಕರ ಮೇಲೆ ನಿಂತಿದೆ: ಪ್ರಧಾನಿ ಮೋದಿ

    ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ ಆರಂಭಿಸಿದ್ದು, ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲಬೇಡಿ. ಯುವಕರಿಗೆ ಸ್ವಾಮಿ ವಿವೇಕಾನಂದರವರು ಪ್ರೇರಣೆ ಆಗಿದ್ದಾರೆ. ಮೈಸೂರು ಮಹಾರಾಜರು ಚಿಕಾಗೋ ಯಾತ್ರೆಗೆ ಸಹಾಯ ಮಾಡಿದ್ದರು. ಸ್ವಾಮಿ ವಿವೇಕಾನಂದರು ಯುವಕರೇ ದೇಶದ ಭವಿಷ್ಯ ಎಂದಿದ್ದರು. ಚಿಕ್ಕ ವಯಸ್ಸಿನಲ್ಲೇ ಸ್ವಾಮಿ ವಿವೇಕಾನಂದರು ಸಾಧನೆ ಮಾಡಿದ್ದರು. ಬ್ರಿಟಿಷರ ಸೇನೆ ವಿರುದ್ಧ ಸಂಗೊಳ್ಳಿ ರಾಯಣ್ಣ ಯುದ್ಧ ಸಾರಿದ್ದರು. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದು. ದೇಶವನ್ನು ಮುನ್ನಡೆಸುವುದು ಯುವಕರ ಕರ್ತವ್ಯ. ದೇಶದ ಭವಿಷ್ಯ ಯುವಕರ ಮೇಲೆ ನಿಂತಿದೆ ಎಂದು ಹೇಳಿದರು.

  • 12 Jan 2023 05:44 PM (IST)

    National Youth Festival 2023 Live: ಸಿದ್ದೇಶ್ವರ ಸ್ವಾಮೀಜಿರವರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ

    ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅದ್ದೂರಿ ಚಾಲನೆ ನೀಡಿದರು. ಯುವ ಸಮೂಹವನ್ನು ಉದ್ದೇಶಿಸಿ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಸಿದ್ದೇಶ್ವರ ಸ್ವಾಮೀಜಿರವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

  • 12 Jan 2023 05:36 PM (IST)

    National Youth Festival 2023 Live: ಯುವಸಮೂಹವನ್ನು ಉದ್ದೇಶಿಸಿ ಪ್ರಧಾನ ಮೋದಿ ಭಾಷಣ

    ಹುಬ್ಬಳ್ಳಿ: ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಯುವಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಗಣ್ಯರಿಗೆ, ಹಲವು ಮಠಗಳಿಗೆ ನನ್ನ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಭಾಷಣ ಆರಂಭಿಸಿದರು.

  • 12 Jan 2023 05:31 PM (IST)

    National Youth Festival 2023 Live: ಇತಿಹಾಸ ಸೃಷ್ಟಿಸಿದ ಮೋದಿ ರೋಡ್ ಶೋ

    ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ರೋಡ್ ಶೋ ಮಾಡಿಯಿತು. ಸುಮಾರು ಒಂದು ಗಂಟೆ ನಡೆದ ಶೋನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗಿ ಆಗಿದ್ದರು. ಈ ಮೂಲಕ ಮೋದಿ ರೋಡ್ ಶೋ ಇತಿಹಾಸ ಸೃಷ್ಟಿಸಿದೆ.

  • 12 Jan 2023 05:23 PM (IST)

    National Youth Festival 2023 Live: ಏಲಕ್ಕಿ ಹಾರ ಹಾಕಿ ಪ್ರಧಾನಿ ಮೋದಿ ಸನ್ಮಾನಿಸಿದ ಸಿಎಂ ಬೊಮ್ಮಾಯಿ

    ಹುಬ್ಬಳ್ಳಿ: ನಗರದ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವ ವೇದಿಕೆಯಲ್ಲಿ ಪ್ರಧಾನಿ ಮೋದಿರವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸನ್ಮಾನ ಮಾಡಿದರು. ಏಲಕ್ಕಿ ಹಾರ, ಬಿದರಿ ಕಲೆಯಲ್ಲಿ ಅರಳಿದ ವಿವೇಕಾನಂದ ಮೂರ್ತಿ, ಗರಗ-ಬೆಂಗೇರಿಯಲ್ಲಿ ತಯಾರಿಸಿದ ರಾಷ್ಟ್ರಧ್ವಜ ಗಿಫ್ಟ್ ನೀಡಲಾಗಿದೆ.

  • 12 Jan 2023 05:16 PM (IST)

    National Youth Festival 2023 Live: 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆ

    ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ. ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆದು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ದೇಶದಲ್ಲಿ ಶೇಕಡಾ 40ಕ್ಕೂ ಹೆಚ್ಚು ಯುವಕರು ಇರುವ ದೇಶ. ಯುವ ಸಮೂಹಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆ ಜಾರಿ ಮಾಡಲಾಗಿದೆ ಎಂದು ಹೇಳಿದರು.

  • 12 Jan 2023 05:12 PM (IST)

    National Youth Festival 2023 Live: ಮೋದಿಗೆ ಅಭಿನಂದನೆ ಸಲ್ಲಿಸಿದ ಪ್ರಲ್ಹಾದ್​ ಜೋಶಿ

    ಹುಬ್ಬಳ್ಳಿ: ಯುವಜನೋತ್ಸವದಲ್ಲಿ ಪ್ರಲ್ಹಾದ್​ ಜೋಶಿ ಭಾಷಣ ಮಾಡಿದ್ದು, ಮೋದಿ ಆಶೀರ್ವಾದದಿಂದ ನಾವು ಇಲ್ಲಿ ಅನೇಕ ಅಭಿವೃದ್ಧಿ ಮಾಡಿದ್ದೇವೆ. ಮೋದಿ ಆಶೀರ್ವಾದದಿಂದ II T ಸಿಕ್ಕಿದೆ,IIIT ಸಿಕ್ಕಿದೆ. ನಾವು ಇಲ್ಲಿಂದ ನೇರವಾಗಿ ದೆಹಲಿಗೆ ಹೋಗ್ತೀವಿ.  ನಾನು ಇಲ್ಲಿಗೆ ಬಂದಿರೋದಕ್ಕೆ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

  • 12 Jan 2023 05:09 PM (IST)

    National Youth Festival 2023 Live: ಯುವಕರಿಗಾಗಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆ ಜಾರಿ

    ಹುಬ್ಬಳ್ಳಿ: ಕೇಂದ್ರ ಸಚಿವ ಅನುರಾಗ್ ಠಾಕೂರ್‌ ಮಾತನಾಡಿ, ದೇಶದ ವಿವಿಧೆಡೆಯಿಂದ ಯುವಕರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಸ್ಟಾರ್ಟಪ್‌ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ ಯೋಜನೆ ಸೇರಿ, ಯುವಕರಿಗಾಗಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆ ಜಾರಿ ಮಾಡಿದೆ. ಜಿ20 ಶೃಂಗಸಭೆ ಅಧ್ಯಕ್ಷತೆಯನ್ನು ಭಾರತ ವಹಿಸುತ್ತಿದೆ. ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.

  • 12 Jan 2023 05:05 PM (IST)

    National Youth Festival 2023 Live: ರಾಷ್ಟ್ರೀಯ ಯುವಜನೋತ್ಸವಕ್ಕೆ ಮೋದಿ ಚಾಲನೆ

    ಹುಬ್ಬಳ್ಳಿ: ಜಿಲ್ಲೆಯ ರೈಲ್ವೆ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವವನ್ನು ರಿಮೋರ್ಟ್ ಒತ್ತುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

  • 12 Jan 2023 04:47 PM (IST)

    National Youth Festival 2023 Live: ರೋಡ್‌ಶೋ ವೇಳೆ ಭದ್ರತಾಲೋಪ: ಮೋದಿ ಬಳಿ ಓಡಿ ಬಂದ ಬಾಲಕ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ ವೇಳೆ ಭದ್ರತಾಲೋಪ ಜರುಗಿದ್ದು, ಭದ್ರತೆಯನ್ನು ಮೀರಿ ಪ್ರಧಾನಿ ಮೋದಿ ಸಮೀಪಕ್ಕೆ ಬಾಲಕ ತೆರಳಿದ್ದಾನೆ. ರೋಡ್‌ಶೋ ವೇಳೆ ಪ್ರಧಾನಿಗೆ ಹಾರ ಹಾಕಲು ಬಾಲಕ ಯತ್ನಿಸಿದ್ದು, ಈ ವೇಳೆ ಬಾಲಕನಿಂದ ಪ್ರಧಾನಿ ಮೋದಿ ಹೂವಿನ ಹಾರ ಪಡೆದರು. ಬಳಿಕ ಬಾಲಕನನ್ನು ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದರು.

  • 12 Jan 2023 04:10 PM (IST)

    National Youth Festival 2023 Live: ಪ್ರಧಾನಿ ಮೋದಿ ನೋಡಲು ಫುಟ್ ಪಾತ್​ನಲ್ಲಿ ಕಾದು ನಿಂತಿ ಜನ

    ಹುಬ್ಬಳ್ಳಿ: ಪ್ರಧಾನಿ ಮೋದಿ ನೋಡಲು ಫುಟ್ ಪಾತ್​ನಲ್ಲಿ ಜನರು ಕಾದು ನಿಂತಿದ್ದಾರೆ. ನಗರದ ನ್ಯೂ ಕಾಟನ್ ಮಾರ್ಕೆಟ್ ಸರ್ಕಲ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವಕರು ಭಾಗಿ ಆಗಿದ್ದು, ತಮ್ಮ ನೆಚ್ಚಿನ ನಾಯಕನನ್ನು ನೋಡಲು ಆಗಮಿಸಿದ್ದಾರೆ.

  • 12 Jan 2023 04:04 PM (IST)

    National Youth Festival 2023 Live: ಯುವಜನೋತ್ಸವದ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ

    ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿದ್ದು, ಯುವಜನೋತ್ಸವದ ವೇದಿಕೆಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಮೈದಾನದಲ್ಲಿ ನೆರೆದಿದ್ದವರತ್ತ ಕೈಬೀಸಿದರು. ಮೋದಿ ಮೋದಿ ಎಂದು ಘೋಷಣೆ ಕೂಗಿದ ಯುವಸಮೂಹ.

  • 12 Jan 2023 03:44 PM (IST)

    National Youth Festival 2023 Live: ಕಾರು ನಿಲ್ಲಿಸಿ ಜನರತ್ತ ಕೈಬೀಸಿದ ಪ್ರಧಾನಿ ಮೋದಿ

    ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹುಬ್ಬಳ್ಳಿ ಏರ್​ಪೋರ್ಟ್​ನಿಂದ ರೈಲ್ವೆ ಮೈದಾನದತ್ತ ಮೋದಿ ಪ್ರಯಾಣ ಆರಂಭಿಸಿದ್ದು, ಮಾರ್ಗಮಧ್ಯೆ ಕಾರು ನಿಲ್ಲಿಸಿ ಜನರತ್ತ ಕೈಬೀಸಿದರು. ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್ ನೀಡಿದರು.

  • 12 Jan 2023 03:25 PM (IST)

    National Youth Festival 2023 Live: ರಾಷ್ಟ್ರೀಯ ಯುವಜನೋತ್ಸವ ಚಾಲನೆಗೆ ಕೌಂಟ್ ಡೌನ್

    ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವ ಚಾಲನೆಗೆ ಕೌಂಟ್ ಡೌನ್ ಶುರುವಾಗಿದ್ದು, ನೆಹರು ಮೈದಾನ ಬಹುತೇಕ ಆಸನಗಳು ಫುಲ್ ಆಗಿವೆ. ಸುಮಾರು 30 ಸಾವಿರ ಆಸನಗಳು ಫುಲ್ ಆಗಿದ್ದು, ಮೋದಿ ನೋಡಲು ಯುವ ಸಮೂಹ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು, ಬಿಜೆಪಿ ಕಾರ್ಯಕರ್ತರು ಯುವಜನೋತ್ಸವಕ್ಕೆ ಆಗಮಿಸಿದ್ದಾರೆ. 4 ಗಂಟೆಗೆ ಯುವಜನೋತ್ಸವಕ್ಕೆ ಮೋದಿ ಚಾಲನೆ ನೀಡಲಿದ್ದಾರೆ.

  • 12 Jan 2023 02:54 PM (IST)

    National Youth Festival 2023 Live: ದೆಹಲಿಯಿಂದ ಹುಬ್ಬಳ್ಳಿಯತ್ತ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ

    ದೆಹಲಿಯಿಂದ ಹುಬ್ಬಳ್ಳಿಯತ್ತ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ ಆರಂಭಿಸಿದ್ದು, ಮಧ್ಯಾಹ್ನ 3.45ಕ್ಕೆ ಹುಬ್ಬಳ್ಳಿ ತಲುಪಲಿದ್ದಾರೆ. ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಮೋದಿಯನ್ನು ರಾಜ್ಯಪಾಲರು ಸ್ವಾಗತಿಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕೂಡ ಇರಲಿದ್ದಾರೆ.

  • 12 Jan 2023 02:49 PM (IST)

    National Youth Festival 2023 Live: ಉತ್ತರ ಕರ್ನಾಟಕ್ಕೆ ಪ್ರಧಾನಿ ಮೋದಿ ಬೂಸ್ಟರ್ ಡೋಸ್ ಇದ್ದಂತೆ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸುವುದು ಒಂದು ರೀತಿ ಇಡಿ ಉತ್ತರ ಕರ್ನಾಟಕ್ಕೆ ಬೂಸ್ಟರ್ ಡೋಸ್ ಇದ್ದಂತೆ ಎಂದು ನಗರದಲ್ಲಿ ಮೋದಿ ಅಭಿಮಾನಿಯೊಬ್ಬರು ಹೇಳಿದರು. ಪ್ರಧಾನಿ ಬರುವಿಗಾಗಿ ಅವರ ಫೋಟೋಗಳನ್ನ ಹಿಡಿದುಕೊಂಡು ಮೋದಿ ಮೋದಿ ಎಂದು ಜೈಕಾರ ಹಾಕುತ್ತಿರುವ ಜನ. ಹುಬ್ಬಳ್ಳಿ‌ನಗರದ ದೇಶಪಾಂಡೆ ನಗರದಲ್ಲಿ ಇರುವ ಜಿಲ್ಲಾ ಬಿಜೆಪಿ ಕಚೇರಿ ಎದುರು ಬಿಸಿಲಿನಲ್ಲಿ ಪ್ರಧಾನಿ ಬರುವಿಗಾಗಿ ಕಾಯ್ದು ನಿಂತ ಜನ.

  • 12 Jan 2023 02:41 PM (IST)

    National Youth Festival 2023 Live: ಪ್ರಧಾನಿ ನರೇಂದ್ರ ಮೋದಿ‌ ಹುಬ್ಬಳ್ಳಿ ಆಗಮನಕ್ಕೆ ಕ್ಷಣಗಣನೆ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ‌ ಹುಬ್ಬಳ್ಳಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೋದಿಗೆ ಹುಬ್ಬಳ್ಳಿಯ ಶ್ರೇಯಾ ಎಂಬ ಪಿಯುಸಿ ಓದುತ್ತಿರುವ ಯುವತಿಯಿಂದ ಪ್ರಧಾನಿ ಮೋದಿ ಹಾಗೂ ತಾಯಿಯ ವಿಶೇಷ ಪೇಟಿಂಗ್​ ಸಿದ್ದ ಪಡಿಸಿದ್ದಾರೆ. ನಮ್ಮ ಹುಬ್ಬಳ್ಳಿಗೆ ಪ್ರಧಾನಿ ಬರುತ್ತಿರುವುದು ನನಗೆ ಖುಷಿ ಎಂದು ಶ್ರೇಯಾ ಹೇಳಿದ್ದಾರೆ.

  • 12 Jan 2023 12:51 PM (IST)

    National Youth Festival 2023 Live: ಕ್ಷೇತ್ರವಾರು ಜನರು ಬರಲು ಕಾರ್ಯಕರ್ತರಿಗೆ ಬಿಜೆಪಿ ಮುಖಂಡರ ಸೂಚನೆ

    ಹುಬ್ಬಳ್ಳಿ ಆಗಮಿಸೋ ಮಾರ್ಗ ಮಧ್ಯೆ ಕ್ಷೇತ್ರವಾರು ಜನರು ಬರಲು ಕಾರ್ಯಕರ್ತರಿಗೆ ಬಿಜೆಪಿ ಮುಖಂಡರು ಸೂಚನೆ ನೀಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊರಗಡೆ ಸರ್ಕಲ್ ನಲ್ಲಿ ಅಳ್ನಾವರ ಕ್ಷೇತ್ರದ ಕಾರ್ಯಕರ್ತರು ಬರಲು ಸೂಚನೆ ನೀಡಲಾಗಿದೆ. ನೆಹರೂ ನಗರದಲ್ಲಿ ಹು-ಧಾ ಪಶ್ಚಿಮ ಕ್ಷೇತ್ರದ ಕಾರ್ಯಕರ್ತರು, ಅಕ್ಷಯ ಪಾರ್ಕ್ ಬಳಿ ಕುಂದಗೋಳ ಕ್ಷೇತ್ರದ ಕಾರ್ಯಕರ್ತರು, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಬಳಿ ಸವಣೂರ ಕ್ಷೇತ್ರದ ಕಾರ್ಯಕರ್ತರು, ಹೊಸೂರ್ ಸರ್ಕಲ್ ಬಳಿ ಮುಂಡಗೋಡ ಕ್ಷೇತ್ರದ ಕಾರ್ಯಕರ್ತರು, ಕೋರ್ಟ್ ಸರ್ಕಲ್ ಬಳಿ ಶಿಗ್ಗಾಂವಿ ಕ್ಷೇತ್ರದ ಕಾರ್ಯಕರ್ತರು ಬರಲು ಸೂಚಿಸಲಾಗಿದೆ. ಮೋದಿ ಬರೋ ಮಾರ್ಗ ಮಧ್ಯೆ ವಿಧಾನಸಭಾ ವಾರು ಕಾರ್ಯಕರ್ತರು ಬರೋಕೆ ಮುಖಂಡರು‌ ತಿಳಿಸಿದ್ದಾರೆ.

  • 12 Jan 2023 12:40 PM (IST)

    National Youth Festival 2023 Live: ಕಲಾ ತಂಡದಿಂದ ರಿಹರ್ಸಲ್ ಶುರು

    ಯುವ ಕಲಾ ತಂಡಗಳಿಂದ ರಿಹರ್ಸಲ್ ಶುರುವಾಗಿದೆ. ವೇದಿಕೆ ಮುಂಭಾಗದಲ್ಲಿ ಮಾರ್ಚ್ ಫಾಸ್ಟ್ ಅಬ್ಬರ ಜೋರಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ 28 ರಾಜ್ಯ ಹಾಗೂ 6 ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಉತ್ತರ ಕರ್ನಾಟಕದ ಡೊಳ್ಳು, ಜಗ್ಗಲಗೆ ಇತ್ಯಾದಿ ಕಲಾ ಪ್ರದರ್ಶನಕ್ಕೂ ಅವಕಾಶ ನೀಡಲಾಗಿದೆ. ಹೀಗಾಗಿ ಒಂದೇ ವೇದಿಕೆಯಲ್ಲಿ ದೇಶದ ಕಲೆ, ಸಂಸ್ಕೃತಿಗಳ ಅನಾವರಣಗೊಳ್ಳಲಿದೆ.

  • 12 Jan 2023 12:36 PM (IST)

    National Youth Festival 2023 Live: ಗಮನ ಸೆಳೆಯುತ್ತಿದೆ ತರಹೇವಾರಿ ಭಕ್ಷ್ಯ

    26ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ತರಹೇವಾರಿ ಭಕ್ಷ್ಯಗಳು ಗಮನ ಸೆಳೆಯುತ್ತಿವೆ. ಕೃಷಿ ವಿವಿ ಆವರಣದಲ್ಲಿ ಅಡುಗೆ ಸಿದ್ಧವಾಗುತ್ತಿದೆ.

    ಇಂದಿನ ಮೆನು: ಮಧ್ಯಾಹ್ನ: ಬೆಂಡಿ ಮಸಾಲ, ಪನ್ನೀರ್ ಮಟ್ಟರ್, ದಾಲ್ ಮಖಾನಿ, ಗೋಧಿ ರೋಟಿ/ತವಾ ರೋಟಿ, ಕುಲ್ಚಾ, ತಂದೂರಿ ರೋಟಿ, ಪಲಾವ್, ಅನ್ನ, ಕ್ಯಾರೇಟ್ ಹಲ್ವಾ:

    ಸಂಜೆ: ತರಕಾರಿ ಮಿಶ್ರಣದ ಪಕೋಡ, ಕುಕೀಸ್, ಕಾಫಿ ಟೀ:

    ರಾತ್ರಿ: ಮಟನ್, ಮೇಥಿಮಟರ್ ಮಲೈ, ಪನ್ನೀರ್ ಹರಿಯಾಲಿ, ಚಪಾತಿ, ಬೇಬಿ ನಾನ್, ತಂದೂರಿ ರೋಟಿ, ದೋಸೆ, ಸಾಲಡ್, ಪಾಸ್ತಾ, ಟೊಮೊಟೋ ರೈಸ್, ಜಿಲೇಬಿ ರಬ್ಡಿ

  • 12 Jan 2023 12:08 PM (IST)

    National Youth Festival 2023 Live: ಹುಬ್ಬಳ್ಳಿಗೆ ಸಿಎಂ ಬೊಮ್ಮಾಯಿ ಆಗಮನ

    ಹುಬ್ಬಳ್ಳಿ ಏರ್​​ಪೋರ್ಟ್​​ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಟಿವಿ9 ಜೊತೆ ಮಾತನಾಡಿದ್ದು, ಮೊದಲ ಬಾರಿ ಉ-ಕ ಭಾಗದಲ್ಲಿ ಯುವಜನೋತ್ಸನ ನಡೆಯುತ್ತಿದೆ. ಯುವಕರಿಗೆ ಕೌಶಲ್ಯ ತರಬೇತಿ ನೀಡಿದರೆ ದೇಶ ಕಟ್ಟಬಹುದು. ನೂತನ ಶಿಕ್ಷಣ ನೀತಿಯಿಂದ ಮೂರೇ ವರ್ಷಗಳಲ್ಲಿ ಎರಡು ಪದವಿ ಪಡೆಯಬಹುದು. ಕೇಂದ್ರ ಸರ್ಕಾರ ಈಗಾಗಲೇ ಯುವಕರಿಗಾಗಿ ಮುದ್ರಾ, ಖೇಲೋ ಇಂಡಿಯಾ ಯೋಜನೆ ಜಾರಿಗೆ ತಂದಿದೆ. ಮೋದಿ ಬರುತ್ತಿರುವುದರಿಂದ ಯುವಕರಲ್ಲಿ ಉತ್ಸಾಹ ಹೆಚ್ಚಾಗಲಿದೆ ಎಂದರು.

  • 12 Jan 2023 11:35 AM (IST)

    National Youth Festival 2023 Live: ದೇಶದ ಭವಿಷ್ಯದ ಬಗ್ಗೆ ಮೂಡಿರುವ ವಿಶ್ವಾಸ ಇಂದು ವ್ಯಕ್ತವಾಗಲಿದೆ

    ಹುಬ್ಬಳ್ಳಿ-ಧಾರವಾಡದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಸಂಬಂಧ ಹುಬ್ಬಳ್ಳಿಯಲ್ಲಿ ಟಿವಿ9ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಬರುತ್ತಿದ್ದಾರೆ. ನಾವು 25 ಸಾವಿರ ವಿದ್ಯಾರ್ಥಿಗಳ ನೋಂದಣಿ ಟಾರ್ಗೆಟ್ ಇಟ್ಟಿದ್ದೆವು. ಆದರೆ ವಿದ್ಯಾರ್ಥಿಗಳ ಸಂಖ್ಯೆ 50 ಸಾವಿರ ದಾಟಿದೆ. ಮೋದಿ ಹೋಗುವ ರಸ್ತೆಗಳಲ್ಲೂ ಲಕ್ಷಾಂತರ ಜನ‌ ಬರುತ್ತಿದ್ದಾರೆ. ದೇಶದ ಭವಿಷ್ಯದ ಬಗ್ಗೆ ಮೂಡಿರುವ ವಿಶ್ವಾಸ ಇಂದು ವ್ಯಕ್ತವಾಗಲಿದೆ. ಮಾರ್ಗಮಧ್ಯೆ ಜನರಿಗೆ ಮೋದಿ ಶುಭಕೋರುವ ಸಾಧ್ಯತೆ ಇದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಬಹಳಷ್ಟು ಒಳ್ಳೆಯದಾಗಿದೆ. ಕರ್ನಾಟಕ & ಉತ್ತರ ಕರ್ನಾಟಕಕ್ಕೆ ಬಹಳಷ್ಟು ಅನುಕೂಲವಾಗಿದೆ. ಫೆಬ್ರವರಿ, ಮಾರ್ಚ್​​ನಲ್ಲಿ ಮತ್ತೆ ಐಐಟಿ ಉದ್ಘಾಟನೆಗೆ ಬರ್ತಿದ್ದಾರೆ. ರಾಜಕೀಯ ಱಲಿಗೆ ಮತ್ತೊಮ್ಮೆ ಹುಬ್ಬಳ್ಳಿ-ಧಾರವಾಡಕ್ಕೆ ಬರ್ತಾರೆ ಎಂದು ಮಾಹಿತಿ ನೀಡಿದರು.

  • 12 Jan 2023 11:21 AM (IST)

    National Youth Festival 2023 Live: ವೇದಿಕೆಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳು

    ರಾಷ್ಟ್ರೀಯ ಯುವಜನೋತ್ಸವ ಹಿನ್ನಲೆ ವಿದ್ಯಾರ್ಥಿಗಳು ವೇದಿಕೆಗೆ ಆಗಮಿಸುತ್ತಿದ್ದಾರೆ. ರಾಜ್ಯದ ನಾನಾ ಭಾಗದಿಂದ ವೇಷ ಭೂಷಣದೊಂದಿಗೆ ವೇದಿಕೆಯತ್ತ ಕಲಾ ತಂಡಗಳು ಕೂಡ ಆಗಮಿಸಿವೆ.

  • 12 Jan 2023 11:02 AM (IST)

    National Youth Festival 2023 Live: ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಅಪರಿಚಿತ ವಾಹನ ಪತ್ತೆ

    ಪ್ರಧಾನಿ‌ ಮೋದಿ ಸಂಚರಿಸುವ ಮಾರ್ಗದಲ್ಲಿ ಅಪರಿಚಿತ ವಾಹನ ಪತ್ತೆಯಾಗಿದೆ. ಹೊಸೂರ್ ಕ್ರಾಸ್ ನಲ್ಲಿ ಅಪರಿಚಿತ ಕಾರ್ ನಿಂತಿದೆ. ಕಳೆದ ಎರಡು ದಿನಗಳಿಂದ ಈ ಕಾರ್ ಇಲ್ಲೆ ಇದೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿದೆ. ವೋಲ್ಕ್ಸ್ ವ್ಯಾಗನ್ ಕಂಪನಿಯ ಎಂ ಎಚ್ 10, ಸಿಎ 6984 ಮಹಾರಾಷ್ಟ್ರ ರಾಜ್ಯದ ನೊಂದಣಿ ಹೊಂದಿರುವ ಕಾರ್ ಇದಾಗಿದೆ. ಕಾರು ನೋಡಿ ಪೊಲೀಸರು ಅನುಮಾನಗೊಂಡಿದ್ದು ಟ್ರಾಫಿಕ್ ಪೊಲೀಸರು ಕಾರನ್ನು ಬೇರೆಡೆ ಶಿಫ್ಟ್ ಮಾಡಿದ್ದಾರೆ.

  • 12 Jan 2023 10:52 AM (IST)

    National Youth Festival 2023 Live: ಹುಬ್ಬಳ್ಳಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್​ಎಎಲ್​ನಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ 26ನೇ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಮಾನ ಏರಿದ್ದಾರೆ.

  • 12 Jan 2023 10:51 AM (IST)

    National Youth Festival 2023 Live: ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತನ್ನ ಸುಪರ್ದಿಗೆ ಪಡೆದ ಎಸ್​​ಪಿಜಿ

    ಇಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಎಸ್​​ಪಿಜಿ ತನ್ನ ಸುಪರ್ದಿಗೆ ಪಡೆದಿದೆ. ಏರ್​​ಪೋರ್ಟ್​ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್​​​​​ ಕೈಗೊಳ್ಳಲಾಗಿದೆ. ಪ್ರಧಾನಿ ಆಗಮಿಸುವ ಒಂದು ಗಂಟೆ ಮುನ್ನ ರಸ್ತೆ ಸಂಚಾರ ಬಂದ್​​​​ ಮಾಡಲಾಗುತ್ತೆ.

    ಹಾಗೂ ಹುಬ್ಬಳ್ಳಿಯ ಹೊಸೂರ ವೃತ್ತಕ್ಕೆ ಭದ್ರತೆ ತಪಾಸಣೆಗೆ ಎಸ್‌ಪಿ ಲೋಕೇಶ್ ಮತ್ತು ಇಬ್ಬರು ಡಿಸಿಪಿಗಳು ಭೇಟಿ ನೀಡಿದ್ದಾರೆ. ಮೋದಿ ಮಾರ್ಗದ ಮಧ್ಯೆ ಬರುವ ಮುಖ್ಯ ವೃತ್ತ ಹೊಸೂರ ಸರ್ಕಲ್ ಅಲ್ಲಿ ಸಾವಿರಾರು ಜನ ಜಮಾವಣೆ ಆಗುವ ಸಾಧ್ಯತೆ ಇದೆ. ಹೀಗಾಗಿ ಬ್ಯಾರಿಕೇಡ್ ಸೇರಿದಂತೆ ಬಂದೋಬಸ್ತ್ ವ್ಯವಸ್ಥೆ ಪರಿಶೀಲನೆಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

  • 12 Jan 2023 10:44 AM (IST)

    National Youth Festival 2023 Live: 600 ಬಾಣಸಿಗರಿಂದ ಅಡುಗೆ ತಯಾರಿ

    600 ಬಾಣಸಿಗರಿಂದ ಅಡುಗೆ ತಯಾರಿ ಕಾರ್ಯ ನಡೆಯುತ್ತಿದೆ. ಆಲೂ ಪರೋಟಾ, ಜಾಮೂನು, ಚಿತ್ರನ್ನ, ಆಮ್ಲೆಟ್ ಸೇರಿ ಬಗೆ ಬಗೆಯ ಭಕ್ಷ್ಯಗಳ ಸಿದ್ಧತೆ ಮುಂದುವರೆದಿದೆ. ಹಗಲು ರಾತ್ರಿಯನ್ನದೇ ಬಾಣಸಿಗರು ಅಡುಗೆ ತಯಾರಿಯಲ್ಲಿ ತೊಡಗಿದ್ದಾರೆ. ಬೆಂಗಳೂರು ಮೂಲದ ಬಾಣಸಿಗರು ಧಾರವಾಡ ಕೃಷಿ ವಿವಿ ಆವರಣದಲ್ಲಿ ಅಡುಗೆ ತಯಾರಿ ಮಾಡುತ್ತಿದ್ದಾರೆ.

  • 12 Jan 2023 10:40 AM (IST)

    National Youth Festival 2023 Live: ಧಾರವಾಡಕ್ಕೆ ಬಂದ ಅತಿಥಿಗಳಿಗೆ ಬಗೆ ಬಗೆಯ ಉಪಹಾರ

    ರಾಷ್ಟ್ರೀಯ ಯುವ ಜನೋತ್ಸವ ಹಿನ್ನೆಲೆ ಧಾರವಾಡಕ್ಕೆ ಬಂದ ಅತಿಥಿಗಳಿಗೆ ಬಗೆ ಬಗೆಯ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಕೃಷಿ ವಿವಿ ಆವರಣದಲ್ಲಿ ಹತ್ತಾರು ಕೌಂಟರ್‌ಗಳ ನಿರ್ಮಾಣ ಮಾಡಲಾಗಿದೆ. ಪ್ರತಿನಿಧಿಗಳು ಕ್ಯೂನಲ್ಲಿ ನಿಂತು ಉಪಹಾರ ಪಡೆಯುತ್ತಿದ್ದಾರೆ. ಮಲ್ಲಿಗೆ ಇಡ್ಲಿ, ಉದ್ದಿನ ವಡೆ, ಸಾಂಬಾರು-ಚಟ್ನಿ, ಶ್ಯಾವಿಗೆ ಉಪ್ಪಿಟ್ಟು, ಆಲೂ ಪರೋಟಾ, ಬ್ರೇಡ್-ಜಾಮ್, ಬೇಯಿಸಿದ ಮೊಟ್ಟೆ, ಆಮ್ಲೆಟ್, ಚಹಾ-ಕಾಫಿ ವ್ಯವಸ್ಥೆ ಮಾಡಲಾಗಿದೆ.

  • 12 Jan 2023 10:35 AM (IST)

    National Youth Festival 2023 Live: ಮೋದಿ ತೆರಳುವ ರಸ್ತೆಗಳೆಲ್ಲ ಫುಲ್ ಕ್ಲೀನ್

    ಹುಬ್ಬಳ್ಳಿಯಲ್ಲಿನ ರಸ್ತೆಗಳು ಫುಲ್ ಕ್ಲೀನ್ ಆಗುತ್ತಿವೆ. ನಗರದ ಭಗತಸಿಂಗ್ ಸರ್ಕಲ್, ಹೊಸುರ್ ಸರ್ಕಲ್ ಹಾಗೂ ಟ್ರಾಫಿಕ್ ಪೋಲಿಸ್ ಸ್ಟೆಶನ್ ಸರ್ಕಲ್ ನಲ್ಲಿ ಮೋದಿ ಸ್ವಾಗತಕ್ಕೆ ದೊಡ್ಡ ಬ್ಯಾನರ್ ಅಳವಡಿಕೆ‌ ಮಾಡಲಾಗಿದೆ. ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದ ವರೆಗೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಬ್ಯಾರಿಕೇಡ್ ಅಳವಡಿಸಿ ಹೊರ ಭಾಗದಲ್ಲಿ ನಿಂತುಕೊಂಡು ಮೋದಿ ಅವರನ್ನ ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಒಟ್ಟು ಹತ್ತು ಕಡೆಗಳಲ್ಲಿ ಮೋದಿ ಜನರತ್ತ ಕೈ ಬೀಸಲಿದ್ದಾರೆ. ಕಾರಿನಿಂದ ಇಳಿದು ಮೋದಿ ಜನರತ್ತ ಕೈ ಬೀಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ.

  • 12 Jan 2023 10:30 AM (IST)

    National Youth Festival 2023 Live: ಪ್ರಧಾನಿ ಆಗಮಿಸುವ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಅಳವಡಿಕೆ

    ಪ್ರಧಾನಿ ಆಗಮಿಸುವ ಹಿನ್ನೆಲೆ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಅಳವಡಿಸಲಾಗಿದೆ. ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದ ವರೆಗೂ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಪ್ರಧಾನಿ ಮೋದಿ ಸಾಗುವ ಮಾರ್ಗದಲ್ಲಿ ಮಧ್ಯಾಹ್ನ 1 ಗಂಟೆಯಿಂದ ಸಂಜೆ 7 ಗಂಟೆ ವರೆಗೂ ಸಾರ್ವಜನಿಕರು, ವಾಹನ ಸವಾರರಿಗೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಬ್ಯಾರಿಕೇಡ್ ಅಳವಡಿಸಿ ಹೊರ ಭಾಗದಲ್ಲಿ ನಿಂತುಕೊಂಡು ಮೋದಿ ಅವರನ್ನ ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬ್ಯಾರಿಕೇಡ್ ಹಿಂಬದಿಯಲ್ಲಿ ಸಾರ್ವಜನಿಕರಿಗೆ ನಿಂತುಕೊಳ್ಳಲು ಅವಕಾಶ ಮಾಡಿಕೊಳ್ಳಲಾಗಿದೆ. 1 ಗಂಟೆಯ ನಂತರ ಯಾರು ಮೋದಿ ಸಂಚರಿಸುವ ಮಾರ್ಗದಲ್ಲಿ ಓಡಾಡದಂತೆ ಪೊಲೀಸರು ಕಟ್ಟೆಚ್ಚರವಹಿಸಲಿದ್ದಾರೆ.

  • 12 Jan 2023 10:25 AM (IST)

    National Youth Festival 2023 Live: ಹುಬ್ಬಳ್ಳಿಗೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

    ರಾಷ್ಟ್ರೀಯ ಯುವ ಜನೋತ್ಸವ ಹಿನ್ನೆಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ರಾಜ್ಯಪಾಲರನ್ನ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಜತೆಗೆ ರಾಜ್ಯಪಾಲರು ವೇದಿಕೆ ಹಂಚಿಕೊಳ್ಳಲಿದ್ದಾರೆ.

  • 12 Jan 2023 10:24 AM (IST)

    National Youth Festival 2023 Live: ಪ್ರಧಾನಿ ಮೋದಿಗೆ ಅಭಿಮಾನಿಯಿಂದ ವಿಶೇಷ ಸ್ವಾಗತ

    ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ರಂಗೋಲಿಯಲ್ಲಿ ಮೋದಿ ಅರಳಿದ್ದಾರೆ. ದಿನೇಶ್ ಚಿಲ್ಲಾಳ ಎಂಬ ಕಲಾವಿದನ ಕೈಚಳಕದಿಂದ ರಂಗೋಲಿಯಲ್ಲಿ ನಮೋ ಭಾವಚಿತ್ರ ಮೂಡಿಬಂದಿದೆ. ವೇದಿಕೆಯ ಮುಂಭಾಗದಲ್ಲಿಯೇ ಕಲಾವಿದ ದಿನೇಶ್ ಮೋದಿ ಚಿತ್ರ ಬಿಡಿಸಿದ್ದಾರೆ. 75 ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೋದಿಯವರು ಧರಿಸಿದ್ದ ಪೋಷಾಕಿನ ಚಿತ್ರ ರಂಗೋಲಿಯಲ್ಲಿ ಅರಳಿದೆ.

  • 12 Jan 2023 10:17 AM (IST)

    National Youth Festival 2023 Live: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ 2,900 ಪೊಲೀಸರಿಂದ ಭದ್ರತೆ

    ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ 2,900 ಪೊಲೀಸರಿಂದ ಭದ್ರತೆ ಇರಲಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್​ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗುತ್ತಿದೆ. 7 ಎಸ್​ಪಿಗಳು, 25 ಡಿವೈಎಸ್​ಪಿ, 60 ಪೊಲೀಸ್ ಇನ್ಸ್​ಪೆಕ್ಟರ್, 18 ಕೆಎಸ್​ಆರ್​ಪಿ ತುಕಡಿ, ನಗರ ಸಶಸ್ತ್ರ ಮೀಸಲು ಪಡೆ ನಿಯೋಜನೆ ಮಾಡಲಾಗಿದೆ. ಪ್ರಧಾನಿ ಸಂಚರಿಸುವ ಮಾರ್ಗದುದ್ದಕ್ಕೂ ಸಿಬ್ಬಂದಿ ನಿಯೋಜಿಸಿದ್ದು ರೈಲ್ವೆ ಮೈದಾನದ ಮುಖ್ಯ ವೇದಿಕೆ ಸುತ್ತಮುತ್ತ ಪೊಲೀಸ್ ಭದ್ರತೆ ಇರಲಿದೆ. ಬೆಳಗ್ಗೆ 10 ಗಂಟೆ ಬಳಿಕ ಕಾರ್ಯಕ್ರಮ ಸ್ಥಳಕ್ಕೆ ಜನರಿಗೆ ಪ್ರವೇಶವಕಾಶ ಇರಲಿದೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ಪಱಯ ಮಾರ್ಗ ಮಾಡಲಾಗಿದ್ದು ಯಾರಾದರೂ ಮನವಿ ಕೊಡಬೇಕಾದರೆ ಡಿಸಿ, ಆಯುಕ್ತರಿಗೆ ಸಲ್ಲಿಸಬೇಕು.

  • 12 Jan 2023 10:16 AM (IST)

    National Youth Festival 2023 Live: ಪ್ರಧಾನಿ ನರೇಂದ್ರ ಮೋದಿಗೆ ವಿಶಿಷ್ಟ ಉಡುಗೊರೆ ನೀಡಲು ಸಿದ್ಧತೆ

    ಹಾವೇರಿಯ ಏಲಕ್ಕಿ ಹಾರದಿಂದ ಪ್ರಧಾನಿ ನರೇಂದ್ರ ಮೋದಿಗೆ ಸನ್ಮಾನ ಮಾಡಿ ಗರಗ, ಬೆಂಗೇರಿಯಲ್ಲಿ ತಯಾರಾಗಿರುವ ರಾಷ್ಟ್ರಧ್ವಜಕ್ಕೆ ಟೀಕ್​​ ವುಡ್​​ನಿಂದ ಚೌಕಟ್ಟು ಹಾಕಿ ಮೋದಿಗೆ ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗೂ ಮುಖ್ಯವಾಗಿ ಬಿದರಿನ ಕಲೆಯಲ್ಲಿ ಅರಳಿದ ವಿವೇಕಾನಂದ ಮೂರ್ತಿ ನೀಡಲು ತಯಾರಿ ನಡೆದಿದೆ.

  • 12 Jan 2023 10:15 AM (IST)

    National Youth Festival 2023 Live: ವೇದಿಕೆಯಲ್ಲಿ ಪ್ರಧಾನಿ ಮೋದಿ ಸನ್ಮಾನಿಸಲಿರುವ ರಾಜ್ಯ ಬಿಜೆಪಿ ನಾಯಕರು

    ಪ್ರಧಾನಿ ಮೋದಿ ಇಂದು ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಲಿದ್ದಾರೆ. ಹುಬ್ಬಳ್ಳಿಯ ರೈಲ್ವೆ ಮೈದಾನದಿಂದ ಸಂಜೆ 4ಕ್ಕೆ ಪ್ರಧಾನಿ ವೇದಿಕೆಗೆ ಆಗಮಿಸುತ್ತಾರೆ. ಬಳಿಕ ರಾಜ್ಯ ಬಿಜೆಪಿ ನಾಯಕರು ವೇದಿಕೆಯಲ್ಲಿ ಪ್ರಧಾನಿ ಮೋದಿ ಸನ್ಮಾನಿಸುತ್ತಾರೆ. ಸಂಜೆ 4.08ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ವಾಗತ ಭಾಷಣ ಮಾಡುತ್ತಾರೆ. ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಿಎಂ ಬೊಮ್ಮಾಯಿ ಭಾಷಣ. ಸಂಜೆ 4.25ಕ್ಕೆ ರಾಜ್ಯಗಳ ಸಾಂಸ್ಕೃತಿಕ ತಂಡಗಳಿಂದ ಪಥಸಂಚಲನ. ಸಂಜೆ 4.45ಕ್ಕೆ ಕಾರ್ಯಕ್ರಮ ಉದ್ದೇಶಿಸಿ ಮೋದಿ ಮಾತನಾಡಲಿದ್ದು ಸಂಜೆ 5.15ಕ್ಕೆ ವೇದಿಕೆಯಿಂದ ನಿರ್ಗಮಿಸುತ್ತಾರೆ.

  • 12 Jan 2023 10:11 AM (IST)

    National Youth Festival 2023 Live: ಪ್ರಧಾನಿ ಮೋದಿ ಜತೆ 21 ಗಣ್ಯರಿಗೆ ಮಾತ್ರ ಅವಕಾಶ

    ವೇದಿಕೆಯಲ್ಲಿ ಪ್ರಧಾನಿ ಮೋದಿ ಜತೆ 21 ಗಣ್ಯರಿಗೆ ಮಾತ್ರ ಅವಕಾಶ ಇರಲಿದೆ. ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​, ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅನುರಾಗ್ ಸಿಂಗ್​ ಠಾಕೂರ್, ನಿಶಿತ್ ಪ್ರಮಾಣಿಕ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಕೆ.ಸಿ.ನಾರಾಯಣಗೌಡ, ಹಾಲಪ್ಪ ಆಚಾರ್, ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ್, ಸಿ.ಎಂ.‌ನಿಂಬಣ್ಣವರ್, ಅಬ್ಬಯ್ಯ ಪ್ರಸಾದ್​​, ಅಮೃತ್ ದೇಸಾಯಿ, ಕುಸುಮಾ ಶಿವಳ್ಳಿ, ಎಂಎಲ್​ಸಿ ಎಸ್.ವಿ.ಸಂಕನೂರ್, ಪ್ರದೀಪ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಂಗಲ್ ಲಾಡ್ಜಸ್ ರೆಸಾರ್ಟ್ಸ್ ಅಧ್ಯಕ್ಷ ರಾಜೇಶ್ ಕೋಟೆನ್ನವರ್​ಗೆ ಅವಕಾಶ ಸಿಕ್ಕಿದೆ.

  • 12 Jan 2023 10:10 AM (IST)

    National Youth Festival 2023 Live: ಕೇಸರಿಮಯವಾದ ಅವಳಿ ನಗರ

    ಯುವಜನೋತ್ಸವ ಕಾರ್ಯಕ್ರಮ ಹಿನ್ನೆಲೆ ನವ ವಧವಿನಂತೆ ಗೋಕುಲ ರಸ್ತೆ ಸಿಂಗಾರಗೊಂಡಿದೆ. ರಸ್ತೆಯ ಎರಡೂ ಬದಿಯಲ್ಲಿ ಜನ ಸಾಮಾನ್ಯರ ವೀಕ್ಷಣೆಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಶಿವಾಜಿ ಹಾಗೂ ಬಸವೇಶ್ವರ ಜಯಂತಿ ಉತ್ಸವ ಸಮಿತಿಯಿಂದ ಗೋಕುಲ್ ರಸ್ತೆಯಲ್ಲಿ ಮೋದಿ ಅವರ ವೀಕ್ಷಣೆಗಾಗಿ ಶಿವಾಜಿ ಮತ್ತು ಬಸವೇಶ್ವರ ಮೂರ್ತಿ ಇಡಲಾಗಿದೆ.

  • 12 Jan 2023 10:03 AM (IST)

    National Youth Festival 2023 Live: ಹುಬ್ಬಳ್ಳಿ ನಗರದ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಣೆ

    ಯುವಜನೋತ್ಸವ ಕಾರ್ಯಕ್ರಮ ಹಿನ್ನೆಲೆ ಹುಬ್ಬಳ್ಳಿ ನಗರದ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಪಿಯುಸಿ ಹಾಗೂ ಪದವಿ ಕಾಲೇಜುಗಳು ಎಂದಿನಂತೆ ನಡೆಯಲಿವೆ.

  • 12 Jan 2023 10:02 AM (IST)

    National Youth Festival 2023 Live: ಯುವಜನೋತ್ಸವ ಕಾರ್ಯಕ್ರಮಕ್ಕೆ 50 ಸಾವಿರ ಜನರು ನೋಂದಣಿ

    ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಸುಮಾರು 50 ಸಾವಿರ ಯುವಜನತೆ ಈ ಯುವಜನೋತ್ಸವ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದಾರಂತೆ. ಆದ್ರೆ ರೈಲ್ವೆ ಮೈದಾನದಲ್ಲಿ 25 ಸಾವಿರ ಜನರಿಗೆ ಮಾತ್ರ ಅವಕಾಶ ಇದೆ. ಅಕ್ಕಪಕ್ಕದ ಮೈದಾನದಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುತ್ತದೆ.

  • 12 Jan 2023 10:00 AM (IST)

    National Youth Festival 2023 Live: ಇಂದು ಮಧ್ಯಾಹ್ನ 3.40ಕ್ಕೆ ಹುಬ್ಬಳ್ಳಿ ಏರ್​ಪೋರ್ಟ್​ ಆಗಮಿಸುವ ಮೋದಿ

    ಇಂದು ಮಧ್ಯಾಹ್ನ 3.40 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಸ್ವಾಗತಿಸಲಿದ್ದಾರೆ. ಬಳಿಕ 3.45 ರಿಂದ 4 ಗಂಟೆವರೆಗೂ ಮೋದಿ ರೋಡ್ ಶೋ‌ ನಡೆಸಲಿದ್ದಾರೆ. ಏರ್‌ಪೋರ್ಟ್‌ನಿಂದ ಗೋಕುಲ್ ರಸ್ತೆ, ಅಕ್ಷಯ ಪಾರ್ಕ್, ಹೊಸೂರ್ ಸರ್ಕಲ್, ಐಬಿ ಸರ್ಕಲ್, ದೇಶಪಾಂಡೆ ನಗರ, ಕೋರ್ಟ್ ಸರ್ಕಲ್ ಮೂಲಕ ಹುಬ್ಬಳ್ಳಿ ರೈಲ್ವೆ ಮೈದಾನಕ್ಕೆ ಮೋದಿ ಎಂಟ್ರಿ ಕೊಡಲಿದ್ದಾರೆ. ಸಂಜೆ 4 ಗಂಟೆ ವೇಳೆಗೆ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ನಂತರ ಯುವಸಮೂಹವನ್ನು ಉದ್ದೇಶಿಸಿ ಮಾತನಾಡಿ, ಸಂಜೆ 5.35 ಕ್ಕೆ ಹುಬ್ಬಳ್ಳಿ ಏರ್‌ಪೋರ್ಟ್‌ನಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.

  • Published On - Jan 12,2023 9:54 AM

    Follow us
    ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
    ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
    ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
    ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
    ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
    ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
    ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
    ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
    70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
    70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
    ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
    ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
    ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
    ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
    ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
    ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
    ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
    ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
    ‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
    ‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್