ಹುಬ್ಬಳ್ಳಿ: ಭಾರತದ ರಸ್ತೆಗಳನ್ನು ಅಮೆರಿಕ ರಸ್ತೆಗಳ ರೀತಿಯಲ್ಲಿ ಮಾಡ್ತೇವೆ. ನಮ್ಮ ಸರ್ಕಾರದಲ್ಲಿ ಹಣಕಾಸಿನ ತೊಂದರೆಯಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೂ ನಾನು ವಚನ ನೀಡುತ್ತೇನೆ. ಖರ್ಗೆ ಕ್ಷೇತ್ರಕ್ಕೂ 5 ಸಾವಿರ ಕೋಟಿ ಕಾಮಗಾರಿ ನೀಡ್ತೇನೆ. ನಾನೇ ಖುದ್ದು ಕಲಬುರಗಿಗೆ ಬಂದು ಶಿಲನ್ಯಾಸ ಮಾಡುತ್ತೇನೆ ಎಂದು ಹುಬ್ಬಳ್ಳಿಯ ರಸ್ತೆ ಶಿಲನ್ಯಾಸ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಇಂದು (ಫೆಬ್ರವರಿ 28) ಹೇಳಿಕೆ ನೀಡಿದ್ದಾರೆ. 13 ಸಾವಿರ ಕೋಟಿ ವೆಚ್ಚದ ಕಾಮಗಾರಿ ಲೋಕಾರ್ಪಣೆ, ಹುಬ್ಬಳ್ಳಿಯ ರಸ್ತೆ ಶಿಲನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಚಿಂತನೆ ಕಾರ್ಯಗತ ಮಾಡುತ್ತಿರುವುದು ನಿತಿನ್ ಗಡ್ಕರಿ. ನಿಮ್ಮ ಕಾಳಜಿಯಿಂದ ಇಷ್ಟೆಲ್ಲ ಕಾರ್ಯ ನಡೆಯುತ್ತಿದೆ. ರಸ್ತೆಯಲ್ಲಿ ನಡೆಯುತ್ತಿರುವ ಸಾವುನೋವುಗಳಿಗೆ ನಿತಿನ್ ಗಡ್ಕರಿ ಮುಕ್ತಿ ಕೊಟ್ಟಿದ್ದಾರೆ. ಹಲವಾರು ಕಾಮಗಾರಿಗೆ ಚಾಲನೆ ನೀಡಿದ್ದಕ್ಕೆ ಧನ್ಯವಾದ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಡಿಪಿಆರ್ಗೆ ಸಿಎಂ ಮನವಿ ಮಾಡಿದ್ದಾರೆ. ಕೈಗಾದಿಂದ ಇರಕಲ್ ರಸ್ತೆ ಕಾಮಗಾರಿ ಬೇಗ ಮಾಡಿ ಎಂದು ನಿತಿನ್ ಗಡ್ಕರಿಗೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಈ ರಸ್ತೆ ಅಗಲೀಕರಣಕ್ಕೆ ಬಹಳ ತಾಂತ್ರಿಕ ತೊಂದರೆಯಿತ್ತು. ಆದ್ರೆ ಪ್ರಲ್ಹಾದ್ ಜೋಶಿಯವರ ಒತ್ತಾಯಕ್ಕೆ ಮಂಜೂರು ಮಾಡಿದ್ದೇವೆ. ಹುಬ್ಬಳ್ಳಿಯ ಫ್ಲೈಓವರ್ ಕಾಮಗಾರಿ ಶ್ರೇಯಸ್ಸು ಜೋಶಿಗೆ ಎಂದು ಪ್ರಹ್ಲಾದ್ ಜೋಶಿಯನ್ನು ಕೇಂದ್ರ ಸಚಿವ ಗಡ್ಕರಿ ಹಾಡಿಹೊಗಳಿದ್ದಾರೆ. ಅಲ್ಲದೇ ಸಿಎಂ ನೀಡಿದ ಕೆಲ ಯೋಜನೆಗಳನ್ನು ಮಂಜೂರು ಮಾಡುವುದಾಗಿ ವೇದಿಕೆಯಲ್ಲೇ ಘೋಷಣೆ ಮಾಡಲಾಗಿದೆ. ಈ ವೇಳೆ ಸಚಿವ ಗಡ್ಕರಿ ಬಳಿ ಬಂದು ಖರ್ಗೆ ಮಾತನಾಡಿದ್ದಾರೆ. ಇವರ ಕೆಲಸ ಮಾಡ್ತೀರಿ, ನಮ್ಮ ಕೆಲಸನೂ ಮಾಡಿ ಎಂದು ಖರ್ಗೆ ಕೇಳಿಕೊಂಡಿದ್ದಾರೆ.
ಗಡ್ಕರಿಯವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಂಗೆ ಬಹಳ ವಿಶೇಷ ಅನಿಸುತ್ತೆ. ನಿತೀನ್ ಗಡ್ಕರಿ ಒರ್ವ ಅಭಿವೃದ್ಧಿ ಪರ ಇರೋ ವ್ಯಕ್ತಿ. ಅಂತವರ ಬಗ್ಗೆ ನಾನು ಯಾವಾಗಲೂ ಮೆಚ್ಚುಗೆ ವ್ಯಕ್ತಪಡಿಸುತ್ತೆನೆ. ನಾನು ಕೂಡಾ ಅಭಿವೃದ್ಧಿ ಪರ ಇರೋ ವ್ಯಕ್ತಿ. ಹಿಗಾಗೇ ಇಲ್ಲಿಗೆ ಬಂದಿದ್ದೆನೆ ಎಂದು ಹುಬ್ಬಳ್ಳಿಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಹೆದ್ದಾರಿ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಗಡ್ಕರಿಯನ್ನು ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಐದು ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ; ಕರ್ನಾಟಕಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಿದ ನಿತಿನ್ ಗಡ್ಕರಿ
ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ನಡುವಣ ನದಿ ನೀರಿನ ವಿವಾದ ಪರಿಹರಿಸಲು ನನ್ನಿಂದ ಆಗಲೇ ಇಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಷಾದ
Published On - 6:10 pm, Mon, 28 February 22