ಶಕ್ತಿ ಯೋಜನೆ ವಿರುದ್ಧ ಆಕ್ರೋಶ: ಹುಬ್ಬಳಿ-ಧಾರವಾಡದಲ್ಲಿ ಜು.31 ರಂದು ಆಟೋ ಬಂದ್​; ಚಾಲಕರ ಧರಣಿ

| Updated By: ವಿವೇಕ ಬಿರಾದಾರ

Updated on: Jul 30, 2023 | 1:45 PM

ಶಕ್ತಿ ಯೋಜನೆ ವಿರೋಧಿಸಿ ನಾಳೆ (ಜು.31) ರಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನೆಲೆ ಬೆಳಿಗ್ಗೆ 6 ರಿಂದ ಸಾಯಂಕಾಲ 6ರವರೆಗೆ ಆಟೋಗಳು ರಸ್ತೆಗೆ ಇಳಿಯುವುದಿಲ್ಲ.

ಶಕ್ತಿ ಯೋಜನೆ ವಿರುದ್ಧ ಆಕ್ರೋಶ: ಹುಬ್ಬಳಿ-ಧಾರವಾಡದಲ್ಲಿ ಜು.31 ರಂದು ಆಟೋ ಬಂದ್​; ಚಾಲಕರ ಧರಣಿ
ಸಾಂದರ್ಭಿಕ ಚಿತ್ರ
Follow us on

ಹುಬ್ಬಳ್ಳಿ ಜು.30: ರಾಜ್ಯ ಸರ್ಕಾರ ಶಕ್ತಿ ಯೋಜನೆ (Shakti yojana) ಅಡಿ ಸರ್ಕಾರಿ ಬಸ್​​ಗಳಲ್ಲಿ (Government Bus) ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಹೀಗಾಗಿ ಮಹಿಳೆಯರು ಹೆಚ್ಚಾಗಿ ಸರ್ಕಾರಿ ಬಸ್​​ಗಳಲ್ಲೇ ಸಂಚರಿಸುತ್ತಿದ್ದಾರೆ. ಇದರಿಂದ ಖಾಸಗಿ ಬಸ್​, ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಮಾಲಿಕರು ಮತ್ತು ಚಾಲಕರಿಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಚಾಲಕರು ಹಾಗೂ ಮಾಲಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶಕ್ತಿ ಯೋಜನೆ ವಿರೋಧಿಸಿ ನಾಳೆ (ಜು.31) ರಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ಪ್ರತಿಭಟನೆ ನಡೆಸಲಿದ್ದಾರೆ.

ಅವಳಿ ನಗರದ ಹುಬ್ಬಳ್ಳಿ-ಧಾರವಾಡದಲ್ಲಿ ಆಟೋ ಚಾಲಕರು ಸೋಮವಾರ ಆಟೋಗಳನ್ನು ರಸ್ತೆಗೆ ಇಳಿಸದೆ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಹೀಗಾಗಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಸುಮಾರು 25 ಸಾವಿರ ಆಟೋ ಸಂಚಾರ ಬಂದ್ ಆಗಲಿದೆ. ಇನ್ನು ಆಟೋ ಚಾಲಕರಿಗೆ ಕನ್ನಡಪರ ಸಂಘಟನೆಗಳು ಸಾಥ್ ನೀಡಲಿವೆ.

ಇದನ್ನೂ ಓದಿ: Shakti Scheme: ಶಕ್ತಿ ಯೋಜನೆಯಿಂದ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ

ಶಕ್ತಿ ಯೋಜನೆ ಜಾರಿಯಾದ ಬಳಿಕ ಆಟೋ ಚಾಲಕರು ಬೀದಿಗೆ ಬಂದಿದ್ದೇವೆ. ನಗರ ಸಾರಿಗೆ ವ್ಯಾಪ್ತಿಯಲ್ಲಿ 20 ಕಿಮೀ ಅವಕಾಶ ಕೊಡಬೇಕು. ನಾಳೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಬಂದು ನಮ್ಮ ಮನವಿ ಸ್ವೀಕರಿಸಬೇಕು. ಅವರು ಬರುವವರೆಗೆ ಪ್ರತಿಭಟನೆ ಮಾಡುತ್ತೇವೆ ಎಂದು ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Sun, 30 July 23