ಹುಬ್ಬಳ್ಳಿ, ಸೆಪ್ಟೆಂಬರ್ 22: ನಮ್ಮಪಕ್ಷದ ಸ್ಟಾರ್ ಕ್ಯಾಂಪೇನರ್ ಚೈತ್ರಾ ಕುಂದಾಪುರ ಅಲ್ಲ. ಚೈತ್ರಾ ನಮ್ಮ ಪಾರ್ಟಿಯಲ್ಲಿ ಇರಲಿಲ್ಲ. ನಾನು 40 ವರ್ಷದಿಂದ ಪಕ್ಷದಲ್ಲಿದ್ದೇನೆ. ನಾನೇ ಅವರನ್ನು ನೋಡಿಲ್ಲ. ನಮ್ಮ ಪಕ್ಷಕ್ಕೂ ಅವರಿಗೆ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚೈತ್ರಾ ಕುಂದಾಪುರ ಇದೊಂದು ಸ್ಟ್ರೇ ಕೇಸ್ ಎಲ್ಲಲ್ಲೋ ಯಾರ ಹೆಸರಲ್ಲಿ ಟೋಪಿ ಹಾಕುತ್ತಾರೆ. ಯಾರದೋ ದೊಡ್ಡವರ ಹೆಸರು ಹೇಳುತ್ತಾರೆ. ಇದನ್ನು ಒಂದು ಪಕ್ಷಕ್ಕೆ ತಳಕು ಹಾಕುವ ಕೆಲಸ ಸರಿ ಅಲ್ಲ ಎಂದರು.
ಈ ವಿಚಾರವಾಗಿ ಕಾಂಗ್ರೆಸ್ ಬಹಳ ಮಾತಾಡಿದೆ. ಮಾರ್ಗರೇಟ್ ಆಳ್ವಾ ಕೆಲವೇ ವರ್ಷದ ಹಿಂದೆ ಟಿಕೆಟ್ ಮಾರಾಟಕ್ಕಿವೆ ಎಂದು ಹೇಳಿದ್ದನ್ನು ಕಾಂಗ್ರೆಸ್ ನೆನಪುಮಾಡಿಕೊಳ್ಳಲಿ. ಇವರು ನಮಗೆ ಸಂಬಂಧ ಇಲ್ಲದವರು ಟೋಪಿ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ಚೈತ್ರಾ ಕುಂದಾಪೂರ ಕೇಸ್ ತನಿಖೆ ನಡಿತಿದೆ. ಯಾರೋ ಇಬ್ಬರು ಇನ್ನೊಬ್ಬರಿಗೆ ಟೋಪಿ ಹಾಕಿದ್ದಾರೆ. ಅವರಿಗೆ ಶಿಕ್ಷೆಯಾಗಲಿ. ಕಾಂಗ್ರೆಸ್ ತಲ ತಲಾಂತರದಿಂದ ಟಿಕೆಟ್ ಮಾರಾಟ ಮಾಡುತ್ತಿದೆ. ನಮ್ಮ ಮುಖಂಡರಿಗೆ ಇದು ಸಂಬಂಧ ಇಲ್ಲ. ದೊಡ್ಡ ಉದ್ಯಮಿಯಾಗಿ ಬುದ್ದಿ ಬೇಕಲ್ವಾ. ಐದು ಕೋಟಿ ರೂ. ಕೊಡುತ್ತಾರೆ ಅಂದರೆ ಹೇಗೆ. 20 ಸಾವಿರಕ್ಕೂ ಹೆಚ್ಚು ಕ್ಯಾಸ್ ಕೊಡಬಾರದು ಅಂತಾ ಇದೆ. ಐದು ಕೋಟಿ ರೂ. ಹೇಗೆ ಕೊಟ್ಟರು ಎಂದರು.
ಚೈತ್ರಾ ಕುಂದಾಪುರ ಮೇಲೆ ಯಾರಿಗೂ ಅನುಕಂಪ ಇಲ್ಲ. ಅವರಿಗೆ ಹೆಚ್ಚು ಶಿಕ್ಷೆಯಾಗಲಿ. ಐದು ಕೊಟಿ ರೂ. ಕೊಟ್ಟವರದು ತನಿಖೆ ಆಗಬೇಕು. ರಾಜಕಾರಣದಲ್ಲಿ ಆಗಿದೆ ಎಂದು ದೊಡ್ಡ ಸುದ್ದಿಯಾಗಿದೆ. ಕುಕ್ಕರ್ ಕೊಟ್ಟಿದ್ದು ಕೂಡ ಭ್ರಷ್ಟಾಚಾರ ಎಂದು ಹೇಳಿದ್ದಾರೆ.
ಕಾವೇರಿ ವಿಷಯ ಸುಪ್ರೀಂ ಕೋರ್ಟ್ನಲ್ಲಿ ಆದೇಶ ಆಗಿದೆ. ಕರ್ನಾಟಕ ಸರ್ಕಾರ CWMA ನಲ್ಲಿ 2500 ಕೂಸೆಕ್ ನೀರು ಬಿಡುವುದಕ್ಕೆ ತಯಾರಿದ್ದೇವೆ ಎಂದು ಹೇಳಿದ್ದಾರೆ. ಅವರು 12500 ಕೇಳಿದ್ದರೆ ನೀವು 2500 ಅಂದಾಗ ಒಂದು ತಂಡ ಕಳಿಸಿದ್ದರು. ಸುಪ್ರೀಂ ಕೋರ್ಟ್ 5000 ಕ್ಯೂಸೆಕ್ ಬಿಡಬೇಕೆಂದು ಹೇಳಿದೆ. ಕರ್ನಾಟಕ ಸರ್ಕಾರ ನೀರಿಗಾಗಿ ಉಚಿತ ಯೋಜನೆ ಮಾಡಲಿಲ್ಲ ಎಂದರು.
ನನ್ನ ಕಡೆ ದಾಖಲಾತಿ ಇದೆ. ನೀರಾವರಿ ವಿಷಯಯದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಬಾರದು. ನೀರಿನ ವಿಷಯದ ಕರ್ನಾಟಕಕ್ಕೆ ಅನ್ಯಾಯ ಆಗಬಾರದು. ಈ ವಿಚಾರ ಉಪಮುಖ್ಯಮಂತ್ರಿಗಳಿಗೆ ಗೊತ್ತಿದೆ. ಎಲ್ಲ ವಿಷಯ ಆನ್ ರೆಕಾರ್ಡ್ ಹೇಳುವುದಕ್ಕೆ ಬರಲ್ಲ. ನಾವು ಎಲ್ಲ ಸಹಕಾರ ಕೊಟ್ಟಿದ್ದೇವೆ, ಮುಂದೆನೂ ಕೊಡುತ್ತವೆ. ಕೇಂದ್ರದ ಜಲಶಕ್ತಿ ಮಂತ್ರಿಗಳಿಗೆ ವಿನಂತಿ ಮಾಡಿದ್ದೇವೆ. ಅಧಿಕಾರಿಗಳನ್ನು ಕಳಸಬೇಕೆಂದು ವಿನಂತಿ ಮಾಡಿದ್ದೇವೆ. ಇದರಲ್ಲಿ ರಾಜಕಾರಣ ಮಾಡುವುಕ್ಕೆ ನಾವು ಹೋಗಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಮೋದ್ ಮುತಾಲಿಕ್ ಗಡಿಪಾರಿಗೆ ಮುಸ್ಲಿಂ ಮುಖಂಡರು ಮನವಿ: ಹುಬ್ಬಳ್ಳಿ ಪೊಲೀಸ್ ಆಯುಕ್ತೆ ರೇಣುಕಾ ಹೇಳಿದ್ದೇನು?
ಮಹದೇವಪ್ಪನವರು ನನಗೆ ಸಿಕ್ಕಿದ್ದರು. ಮುಂದೊಂದು ಹಿಂದೊಂದು ಮಾತಾಡುತ್ತಾರೆ. ನಾವು ಸಹಕಾರ ಕೊಟ್ಟಿದ್ದೇವೆ ಇಲ್ಲವೋ ಡಿಕೆ ಶಿವಕುಮಾರ್ ಕೇಳಿ. ಇದರಲ್ಲಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಪ್ರಶ್ನೆ ಬರಲ್ಲ. ಆಗಸ್ಟ್ 8 ಕ್ಕೆ ತಮ್ಮ ಘಟಬಂಧನ ಉಳಿಸುವುದಕ್ಕೆ ನೀರು ಬಿಟ್ಟಿದ್ದಾರೆ. ಡಿಎಮ್ಕೆ ಜೊತೆ ನಾವು ಮಾತಾಡಿ ಎಂದು ಮುಖ್ಯಮಂತ್ರಿಗಳಿಗೆ ಜೊತೆ ಮಾತಾಡಿ ಎಂದು ಸಲಹೆ ಕೊಟ್ಟಿದ್ದೇವೆ ಎಂದರು.
ಪ್ರಮೋದ್ ಮುತಾಲಿಕ್ ವಿಚಾರವಾಗಿ ಮಾತನಾಡಿದ ಅವರು, ಏನು ಮಾತಾಡಿದಾರೆ ಗೊತ್ತಿಲ್ಲ. ಅವರ ಮೇಲೆ ಯಾವ ಕೇಸ್ ಹಾಕಿದ್ದಾರೆ ಅನ್ನೋದ ಗೊತ್ತಿಲ್ಲ. ಗಡಿಪಾರ ಮಾಡಬೇಕ ಅನ್ನೋದು ಸರಿ ಅಲ್ಲ. ಅವರ ಮೇಲೆ FIR ಮಾಡೋದು ಸರಿ ಅಲ್ಲ. ಅವರಕ್ಕಿಂತ ಪ್ರಚೋದನಕಾರಿ ಭಾಷಣ ಬಹಳ ಜನ ಮಾತಾಡಿದ್ದಾರೆ. ನಾವೆಲ್ಲ ಗಡಿಪಾರು, FIR ಒಪ್ಪಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Fri, 22 September 23