Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ನೀರಿಲ್ಲದೆ ಒಣಗುತ್ತಿದೆ ಮೆಕ್ಕೆಜೋಳ, ರೈತರು ಕಂಗಾಲು

ಶಿವಮೊಗ್ಗಾ ತಾಲೂಕಿನ ಶ್ರೀರಾಮ ಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಸುಮಾರು 300 ರಿಂದ 400 ಎಕೆರೆ ಮೆಕ್ಕೆ ಜೋಳ ಬೆಳೆದಿದ್ದಾಳೆ. ಮಳೆ ಇಲ್ಲದೆ ಮೆಕ್ಕೆಜೋಳ ಆರಂಭದ ಹಂತದಲ್ಲಿ ಒಣಗಿ ಹೋಗಿದೆ. ಎಕರೆಗೆ 25 ರಿಂದ 30 ಸಾವಿರ ರೂಪಾಯಿ ವೆಚ್ಚ ಮಾಡಿದ್ದಾರೆ. ಸಾಲ ಸೂಲ ಮಾಡಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ ರೈತರ ಮಳೆ ಇಲ್ಲದೇ ಕಂಗಾಲಾಗಿದ್ಧಾನೆ. ಬೆಳೆ ಹಾನಿ ಆಗಿದ್ದರಿಂದ ರೈತನು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ.

ಶಿವಮೊಗ್ಗ: ನೀರಿಲ್ಲದೆ ಒಣಗುತ್ತಿದೆ ಮೆಕ್ಕೆಜೋಳ, ರೈತರು ಕಂಗಾಲು
ನೀರಿಲ್ಲದೆ ಒಣಗುತ್ತಿದೆ ಮೆಕ್ಕೆಜೋಳ
Follow us
Basavaraj Yaraganavi
| Updated By: ಆಯೇಷಾ ಬಾನು

Updated on: Sep 23, 2023 | 10:28 AM

ಶಿವಮೊಗ್ಗ, ಸೆ.23: ಜಿಲ್ಲೆಯಲ್ಲಿ ಮುಂಗಾರು(Monsson) ಮಳೆ ಕೈಕೊಟ್ಟಿದೆ. ರೈತರು ಹಗಲು ರಾತ್ರಿ ಸಾಲ ಸೂಲ ಮಾಡಿ ಬೆಳೆದ ಮೆಕ್ಕೆಜೋಳ(Corn Crops) ಕೈಕೊಟ್ಟಿದೆ. ವಾಡಿಕೆ ಮಳೆಗಿಂತ ಶೇ. 40 ರಷ್ಟು ಮಳೆ ಕಡಿಮೆಯಾಗಿದೆ(Karnataka Rain). ಇದರಿಂದ ಒಂದೆಡೆ ಮೆಕ್ಕೆಜೋಳ ಸಂಪೂರ್ಣವಾಗಿ ಒಣಗಿ ಹೋಗಿವೆ. ಇನ್ನೂ ಕೆಲ ರೈತರು ಬೆಳೆ ಉಳಿಸಿಕೊಳ್ಳಲು ಭಗತೀಥ ಯತ್ನಕ್ಕೆ ಮುಂದಾಗಿದ್ದಾರೆ. ಶಿವಮೊಗ್ಗಾ ತಾಲೂಕಿನ ಶ್ರೀರಾಮ ಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಸುಮಾರು 300 ರಿಂದ 400 ಎಕೆರೆ ಮೆಕ್ಕೆ ಜೋಳ ಬೆಳೆದಿದ್ದಾಳೆ. ಮಳೆ ಇಲ್ಲದೆ ಮೆಕ್ಕೆಜೋಳ ಆರಂಭದ ಹಂತದಲ್ಲಿ ಒಣಗಿ ಹೋಗಿದೆ.

ಎಕರೆಗೆ 25 ರಿಂದ 30 ಸಾವಿರ ರೂಪಾಯಿ ವೆಚ್ಚ ಮಾಡಿದ್ದಾರೆ. ಸಾಲ ಸೂಲ ಮಾಡಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ ರೈತರ ಮಳೆ ಇಲ್ಲದೇ ಕಂಗಾಲಾಗಿದ್ಧಾನೆ. ಬೆಳೆ ಹಾನಿ ಆಗಿದ್ದರಿಂದ ರೈತನು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ. ಇನ್ನೂ ಕೆಲ ರೈತರು ಟ್ಯಾಂಟರ್ ಮೂಲಕ ಮೆಕ್ಕೆ ಜೋಳಕ್ಕೆ ನೀರು ಹಾಯಿಸುವ ಮೂಲಕ ಅದನ್ನು ಬಚಾವ್ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಟಿವಿ9 ಮುಂದೆ ಬೆಳೆ ಹಾನಿಗೊಳಗಾದ ರೈತರು ತಮ್ಮ ನೋವು ಬೇಸರ ಹೊರಹಾಕಿದ್ದಾರೆ.

ಧಾರವಾಡದಲ್ಲಿ ಶೇಂಗಾ ಬೆಳೆಗೆ ಬರ

ಧಾರವಾಡದಲ್ಲಿ ಜಿಲ್ಲೆಯಲ್ಲಿ ನೀರಾವರಿ ಅವಲಂಬಿಸಿ ಶೇಂಗಾ ಬೆಳೆದಿರುವ ರೈತರ ಪರಿಸ್ಥಿತಿ ಹೇಳತೀರದ್ದು ಧಾರವಾಡ ಜಿಲ್ಲೆಯಲ್ಲಿ ಈ ಸಲ ಮಳೆ ಕೈಕೊಟ್ಟಿದೆ. ಆದರೆ ಅನೇಕ ರೈತರು ಬೋರ್​ವೆಲ್ ಮೇಲೆ ಅವಲಂಬಿತರಾಗಿ ಶೇಂಗಾ ಬೆಳೆದಿದ್ದಾರೆ. ಇದಕ್ಕಾಗಿ ಸಾಕಷ್ಟು ಖರ್ಚು ಮಾಡಿ ಪೋಷಣೆ ಕೂಡ ಮಾಡಿದ್ದರು. ಆದರೆ ಈಗ ಆ ಶೇಂಗಾ ಬೆಳೆಯೇ ನಿರೀಕ್ಷಿತ ಇಳುವರಿ ಕೊಡುವ ಲಕ್ಷಣ ಕಾಣುತ್ತಿಲ್ಲ. ಶೇಂಗಾ ಕಾಯಿ ಕಟ್ಟುವ ಹಂತದಲ್ಲಿಯೇ ಒಣಗೋಕೆ ಶುರುವಾಗಿದೆ. ಹೀಗಾಗಿ ಈಗ ಶೇಂಗಾ ಬೆಳೆಯಂತೂ ಕೈಗೆ ಬರೋದಿಲ್ಲ. ಬದಲಿಗೆ ಇದನ್ನೆಲ್ಲ ಕಿತ್ತು ದನ ಕರುಗಳಿಗೆ ಮೇವಿನ ರೂಪದಲ್ಲಾದರೂ ಬಳಸಿಕೊಳ್ಳೋಣ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಬರದ ಛಾಯೆ ಮಧ್ಯೆ ರೈತರಿಗೆ ಮತ್ತೊಂದು ಸಂಕಷ್ಟ: ಬೆಳೆದ ಕಬ್ಬಿಗೆ ಹುರಿಮಲ್ಲಿಗೆ ಕಾಯಿಲೆ

ಇನ್ನು ಪ್ರತಿವರ್ಷ ಗಣೇಶ ಚತುರ್ಥಿ ಹೊತ್ತಿಗೆ ಶೇಂಗಾ ಬೆಳೆ ಕೈಗೆ ಬರುತ್ತಿತ್ತು. ಶೇಂಗಾ ಕಿತ್ತು ಎಷ್ಟೋ ಹಸಿ ಶೇಂಗಾವನ್ನೇ ಮಾರ್ಕೆಟ್ ನಲ್ಲಿ ಮಾರಿ, ಅದರಿಂದ ಬಂದ ಹಣದಲ್ಲಿಯೇ ಬಹುತೇಕ ರೈತರು ಭರ್ಜರಿ ಹಬ್ಬ ಮಾಡುತ್ತಿದ್ದರು. ಆದರೆ ಈ ವರ್ಷ ಮುಂಗಾರು ಮಳೆ ವಿಳಂಬವಾಗಿ ಪ್ರವೇಶ ಮಾಡಿದ್ದರಿಂದ ಬಿತ್ತನೆಯೂ ತಡವಾಗಿ ಆಗಿತ್ತು. ಬಳಿಕ ಮಳೆ ಕೈಕೊಟ್ಟಿದ್ದರಿಂದ ಬೋರ್​ವೆಲ್ ಮೂಲಕ ನೀರು ಹಾಯಿಸಿ ಕೃಷಿ ಮಾಡಿದ್ದರು. ಆದರೆ ಇಳುವರಿ ಕೈಗೆ ಬರೋದು ತಡವಾಗೋ ಹೊತ್ತಿಗೆ ಶೇಂಗಾ ಕಾಳಿನ ಬೆಳವಣಿಗೆಯೂ ಕುಂಠಿತವಾಗಿ ಇದೀಗ ಅದೂ ಕೂಡ ಒಣಗೋಕೆ ಶುರುವಾಗಿದೆ. ಈ ಬಾರಿ ಹೆಚ್ಚಿನ ಪ್ರಮಾಣ ಜೊಳ್ಳು ಕಾಳುಗಳೇ ಹೆಚ್ಚಾಗಿದ್ದರಿಂದ ರೈತರಿಗೆ ಯಾವುದೇ ಪ್ರಯೋಜನವಾಗೋದಿಲ್ಲ. ಹೀಗಾಗಿ ಈ ಸಲ ಗಣೇಶ ಹಬ್ಬಕ್ಕೆ ನಮಗೆ ಸಂಭ್ರಮ ಇಲ್ಲ ಅನ್ನೋದು ರೈತರ ಅಳಲು.

ಧಾರವಾಡ ಜಿಲ್ಲೆಯಲ್ಲಿಯೂ ನಾಲ್ಕು ತಾಲೂಕುಗಳನ್ನು ಬರ ಪೀಡಿತ ಅಂತಾ ಘೋಷಣೆ ಮಾಡಿದ್ದಾರೆ. ಆದರೆ ಬರ ಪರಿಹಾರ ಬರೋದು ಮಾತ್ರ ಸದ್ಯಕ್ಕೆ ಇಲ್ಲ. ಹೀಗಾಗಿ ಹಬ್ಬವನ್ನೂ ಈಗ ರೈತರು ಸಾಲ ಮಾಡಿಯೇ ಮಾಡುವಂತಹ ಸ್ಥಿತಿ ಬಂದಿದೆ. ಆದರೆ ಸಾಲ ಮಾಡಿ ಹಬ್ಬವನ್ನು ಮಾಡೋದು ಎಷ್ಟರಮಟ್ಟಿಗೆ ಸರಿ ಅನ್ನೋದು ರೈತರ ಪ್ರಶ್ನೆಯಾಗಿದೆ. ಕಳೆದ ವರ್ಷ ಅತಿವೃಷ್ಠಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಈ ಬಾರಿ ಅತಿವೃಷ್ಠಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು ವಿಪರ್ಯಾಸವೇ ಸರಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ