ಸೆ. 28ಕ್ಕೆ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆ ಬಿಗಿ ಬಂದೋಬಸ್ತ್​ಗೆ ವ್ಯವಸ್ಥೆ​​: ಎಡಿಜಿಪಿ ಆರ್ ಹಿತೇಂದ್ರ

ಸೆ. 28ಕ್ಕೆ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆ ಮತ್ತು ಅ.1 ಕ್ಕೆ ಈದ್ ಮಿಲಾದ್ ಹಬ್ಬದ ಮೆರವಣಿಗೆ ಬಿಗಿ ಬಂದೋಬಸ್ತ್​​ ಒದಗಿಸಲಾಗಿದ್ದು, 15 ಕೆಎಸ್​ಆರ್​ಪಿ ತುಕಡಿ, 2000 ಪೊಲೀಸರು, 15 ಡಿವೈಎಸ್ಪಿ ಮತ್ತು ಒಂದು ಆರ್​​ಎಎಫ್ ತುಕಡಿ ನಿಯೋಜನೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್ ಹಿತೇಂದ್ರ ಹೇಳಿದ್ದಾರೆ.    

ಸೆ. 28ಕ್ಕೆ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆ ಬಿಗಿ ಬಂದೋಬಸ್ತ್​ಗೆ ವ್ಯವಸ್ಥೆ​​: ಎಡಿಜಿಪಿ ಆರ್ ಹಿತೇಂದ್ರ
ಎಡಿಜಿಪಿ ಆರ್ ಹಿತೇಂದ್ರ
Follow us
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ

Updated on: Sep 22, 2023 | 6:20 PM

ಶಿವಮೊಗ್ಗ, ಸೆಪ್ಟೆಂಬರ್​ 22: ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಒಟ್ಟಿಗೆ ಬಂದಿವೆ. ಸೆ. 28 ಕ್ಕೆ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆ ಮತ್ತು ಅ.1ಕ್ಕೆ ಈದ್ ಮಿಲಾದ್ ಹಬ್ಬದ ಮೆರವಣಿಗೆ ಇದೆ. ಹಾಗಾಗಿ 15 ಕೆಎಸ್​ಆರ್​ಪಿ ತುಕಡಿ, 2000 ಪೊಲೀಸರು, 15 ಡಿವೈಎಸ್ಪಿ, ಒಂದು ಆರ್​ಎಎಫ್ ತುಕಡಿ ಬಂದೋಬಸ್ತ್​​ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ (ADGP) ಆರ್ ಹಿತೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ತುಂಬಾ ಸೂಕ್ಷ್ಮ ಪ್ರದೇಶ ಆಗಿದೆ ಎಂದರು.

ನಿನ್ನೆ ತಡರಾತ್ರಿ ಒಂದೇ ದಿನ ಮೂರು ಘಟನೆಗಳಿಂದ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾರವಣ ನಿರ್ಮಾಣಗೊಂಡಿತ್ತು. ಕೂಡಲೇ ಪರಿಸ್ಥಿತಿಯನ್ನು ಪೊಲೀಸ್​ ಅಧಿಕಾರಿಗಳು ನಿಯಂತ್ರಣಕ್ಕೆ ಪಡೆದಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪಟಾಕಿ ಹಚ್ಚುವ ವಿಚಾರವಾಗಿ ಮಾತಿನ ಚಕಮಕಿ ಉಂಟಾಗಿದ್ದು, ಬಳಿಕ ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮಲೆನಾಡಿನಲ್ಲಿ ರೌಡಿಗಳ ಹಾವಳಿ ತಡೆಯಲು ಇಲಾಖೆಯಿಂದ ಕಠಿಣ ಕ್ರಮ

ಮಲೆನಾಡಿನಲ್ಲಿ ರೌಡಿಗಳ ಹಾವಳಿ ತಡೆಯಲು ಇಲಾಖೆಯಿಂದ ಕಠಿಣ ಕ್ರಮಕೈಗೊಳ್ಳಲಾಗಿದೆ. ಜೈಲಿನಿಂದ ರೌಡಿಯೊಬ್ಬ ಬೆದರಿಕೆ ಕರೆ ಮಾಡಿದ್ದು ಬೆಳಕಿಗೆ ಬಂದಿದೆ. ರೌಡಿಗಳ ನಿಯಂತ್ರಣಕ್ಕೆ ಶಿವಮೊಗ್ಗ ಪೊಲೀಸರಿಂದ ಗಡಿಪಾರು ಸೇರಿದಂತೆ ಇತರೆ ಕ್ರಮ ಕೈಗೊಳ್ಳಲಾಗಿದೆ. ಉಗ್ರ ಚಟುವಟಿಕೆ ಮಟ್ಟಹಾಕಲು ಎನ್​ಐಎ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: Shivamogga: ಶಿವಮೊಗ್ಗದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ, ಐವರಿಗೆ ಚಾಕು ಇರಿತ

ದೆಹಲಿಯಲ್ಲಿ ಓರ್ವ ಆರೋಪಿ ಬಂಧಿಸಿದ್ದು, NIA ತನಿಖೆ ನಡೆಸುತ್ತಿದೆ. ಕರ್ತವ್ಯಲೋಪ ಹಿನ್ನೆಲೆ ಭದ್ರಾವತಿ ನ್ಯೂಟೌನ್ ಠಾಣೆ PSI ಅಮಾನತು ಮಾಡಲಾಗಿದೆ. ರೌಡಿಸಂಗೆ 40 ವರ್ಷಗಳ ಇತಿಹಾಸವಿದೆ. ನಿರಂತರ ಆಪರೇಷನ್ ಮೂಲಕ ರೌಡಿಸಂ ಮಟ್ಟ ಹಾಕಲು ಸಾಧ್ಯ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲ ಗಾಂಜಾ ಹಾವಳಿ 

ಜಿಲ್ಲೆಯಲ್ಲಿ ಸೇರಿದಂತೆ ರಾಜ್ಯದಲ್ಲಿ ಗಾಂಜಾ ಹಾವಳಿ ಜೋರಾಗಿದೆ. ಗಾಂಜಾ ದಂಧೆ ತಡೆಯಲು ಪೊಲೀಸ್ ಇಲಾಖೆ ದೊಡ್ಡ ಆಪರೇಶನ್ ಮಾಡಿವೆ. ಶಿವಮೊಗ್ಗಕ್ಕೆ ಆಂಧ್ರ ಮತ್ತು ಒಡಿಸ್ಸಾದಿಂದ ಗಾಂಜಾ ಪೂರೈಕೆ ಮಾಡಲಾಗುತ್ತಿದ್ದು, ರಾಜ್ಯದಲ್ಲಿ 10 ರಿಂದ 12 ಟನ್ ಗಾಂಜಾ ಸೀಜ್ ಆಗಿದೆ. 5000 ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ 2 ಕೋಮಿನ ಗುಂಪು ನಡುವೆ ವಾಗ್ವಾದ

ಗಾಂಜಾ ದಂಧೆ ತಡೆಗೆ ಪೊಲೀಸ್ ಇಲಾಖೆಗೆ ಇತರೆ ಇಲಾಖೆ ಕೈಜೋಡಿಸಬೇಕಿದೆ. ಬೇರು ಮಟ್ಟದಿಂದ ಗಾಂಜಾ ದಂಧೆ ಕಿತ್ತು ಹಾಕಬೇಕಿದೆ. ಗಾಂಜಾ ತಡೆಗೆ ನಿರಂತರ ಕಾರ್ಯಾಚರಣೆ ಅಗತ್ಯ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್