Vande Bharat Express: ಧಾರವಾಡ – ಬೆಂಗಳೂರು ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಸಂಚಾರದ ಸಮಯ, ಟಿಕೆಟ್​ ದರ ಇಲ್ಲಿದೆ

|

Updated on: Jun 27, 2023 | 12:06 PM

ಇಂದು (ಜೂ.27) ಧಾರವಾಡ - ಬೆಂಗಳೂರು ವಂದೇಭಾರತ ಎಕ್ಸಪ್ರೆಸ್​​ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಾಪಥಿ ರೈಲ್ವೆ ನಿಲ್ದಾಣದಿಂದ ವರ್ಚುವಲ್​​ ಮೂಲಕ ಹಸಿರು ನಿಶಾನೆ ತೋರಿಸಿದರು. ಈ ರೈಲು ಸಂಚರಿಸುವ ಸಮಯ ಮತ್ತು ಟಿಕೆಟ್​ ದರ ಇಲ್ಲಿದೆ.

Vande Bharat Express: ಧಾರವಾಡ - ಬೆಂಗಳೂರು ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಸಂಚಾರದ ಸಮಯ, ಟಿಕೆಟ್​ ದರ ಇಲ್ಲಿದೆ
ಧಾರವಾಡ - ಬೆಂಗಳೂರು ವಂದೇ ಭಾರತ್ ಎಕ್ಸ್​​ಪ್ರೆಸ್​​ ರೈಲು
Follow us on

ಧಾರವಾಡ: ಇಂದು (ಜೂ.27) ಧಾರವಾಡ – ಬೆಂಗಳೂರು (Dharwad-Bengaluru) ಸೇರಿದಂತೆ ದೇಶದ ಐದು ಧಾರವಾಡ – ಬೆಂಗಳೂರು ವಂದೇ ಭಾರತ್ ಎಕ್ಸ್​​ಪ್ರೆಸ್​​ ರೈಲುಗಳಿಗೆ (Vande Bharat Express) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಾಪಥಿ ರೈಲು ನಿಲ್ದಾಣದಿಂದ ವರ್ಚುವಲ್​​ ಮೂಲಕ ಹಸಿರು ನಿಶಾನೆ ತೋರಿಸಿದರು. ಪ್ರಧಾನಿ ಮೋದಿ ಚಾಲನೆ ಬಳಿಕ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್​​ ರೈಲು ಸದ್ಯಕ್ಕೆ 530 ಆಸನಗಳನ್ನು ಒಳಗೊಂಡ 8 ಬೋಗಿಗಳನ್ನು ಹೊಂದಿದೆ. ಈ ರೈಲು 489 ಕಿಮಿ ಮಾರ್ಗವನ್ನು ಗಂಟೆಗೆ 110 ಕಿಮಿ ವೇಗದಲ್ಲಿ ಚಲಿಸುತ್ತದೆ.

ಇದನ್ನೂ ಓದಿ: ರೈಲು 180 ಕಿಮೀ ವೇಗದಲ್ಲಿ ಚಲಿಸಿದರೂ ಗ್ಲಾಸಿನಲ್ಲಿದ್ದ ನೀರು ತುಳುಕುವುದಿಲ್ಲ: ಪ್ರಹ್ಲಾದ್​ ಜೋಶಿ

ಈ ರೈಲು ಧಾರವಾಡ-ಬೆಂಗಳೂರು ಮಧ್ಯೆ ವಾರದಲ್ಲಿ ಆರು ದಿನ ಸಂಚರಿಸಲಿದೆ. ಇಂದು ಮಾತ್ರ ಹಲವು ಕಡೆ ನಿಲುಗಡೆಯಾಗಲಿದ್ದು, ನಾಳೆಯಿಂದ (ಜೂ.28) ಅಧಿಕೃತ ಸಂಚಾರ ಆರಂಭವಾಗಲಿದೆ. ಆಗ ನಿಗದಿತ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ.

ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸಪ್ರೆಸ್​ ರೈಲಿನ ಸಮಯ
ರೈಲು ನಿಲ್ದಾಣ ಸಮಯ (28/06/2023)
​ ಬೆಂಗಳೂರು ಬೆಳಿಗ್ಗೆ 05:45
ಯಶವಂತಪುರ ಬೆಳಿಗ್ಗೆ 05: 57
ದಾವಣಗೆರೆ ಬೆಳಿಗ್ಗೆ 09:17
ಹುಬ್ಬಳ್ಳಿ ಬೆಳಿಗ್ಗೆ 11:35
ಧಾರವಾಡ ಮಧ್ಯಾಹ್ನ 12:10
ಧಾರವಾಡ ಮಧ್ಯಾಹ್ನ 1:35
ಹುಬ್ಬಳ್ಳಿ ಮಧ್ಯಾಹ್ನ 1:40
ದಾವಣಗೆರೆ ಮಧ್ಯಾಹ್ನ 3:40
ಯಶವಂತಪುರ ಸಾಂಯಕಾಲ 7:15
 ಬೆಂಗಳೂರು ಸಾಯಂಕಾಲ 7: 45

 

ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸಪ್ರೆಸ್​ ರೈಲಿನ ಟಿಕೆಟ್​ ದರ
ರೈಲು ಸಂಖ್ಯೆ 20661
ರೈಲು ನಿಲ್ದಾಣ ಎಸಿ ಚೇರ್​ (ರೂ) ಎಕ್ಸಿಕ್ಯೂಟಿವ್ ಕ್ಲಾಸ್ (ರೂ)
ಬೆಂಗಳೂರು-ಧಾರವಾಡ 1165 2010
ಬೆಂಗಳೂರು-ಹುಬ್ಬಳ್ಳಿ 1135 2180
ಬೆಂಗಳೂರು-ದಾವಣಗೆರೆ 915 1740
ದಾವಣಗೆರೆ-ಧಾರವಾಡ 535 1055
ರೈಲು ಸಂಖ್ಯೆ 20662
ರೈಲು ನಿಲ್ದಾಣ ಎಸಿ ಚೇರ್​ (ರೂ) ಎಕ್ಸಿಕ್ಯೂಟಿವ್ ಕ್ಲಾಸ್ (ರೂ)
ಧಾರವಾಡ-ಬೆಂಗಳೂರು 1330 2440
ಹುಬ್ಬಳ್ಳಿ-ಬೆಂಗಳೂರು 1300 2375
ದಾವಣಗೆರೆ-ಬೆಂಗಳೂರು 860 1690
ಧಾರವಾಡ-ದಾವಣಗೆರೆ 745 1282

ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ದರವು ಊಟ ಮತ್ತು ತಿಂಡಿಗಳನ್ನು ಒಳಗೊಂಡಿರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:22 am, Tue, 27 June 23