ಹುಬ್ಬಳ್ಳಿ, ಸೆ.24: ಕಸಬಾಪೇಟೆ ಪೊಲೀಸ್ ಸಿಬ್ಬಂದಿಯೊಬ್ಬರು ಪೊಲೀಸ್ ವಾಹನದ ಮುಂದೆ ನಿಂತು ರೀಲ್ಸ್ (Police Reels) ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿತ್ತು. ಇದಲ್ಲದೆ ಆಸ್ತಿ ಲಪಾಟಿಯಿಸಿದ ಆರೋಪವೂ ಈ ಸಿಬ್ಬಂದಿ ವಿರುದ್ಧ ಕೇಳಿಬಂದ ಹಿನ್ನೆಲೆ ಅವರನ್ನು ಅಮಾನತ್ತು ಮಾಡಿ ಹುಬ್ಬಳ್ಳಿ ಧಾರವಾಡ (Hubli Dharwad) ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ್ ಆದೇಶ ಹೊರಡಿಸಿದ್ದಾರೆ.
ಕಸಬಾಪೇಟೆ ಸಿಬ್ಬಂದಿ ಬಸು ಮಣ್ಣೂರ ಅವರು ಪೊಲೀಸ್ ವಾಹನದ ಮುಂದೆ ನಿಂತು ಅವಾಚ್ಯ ಶಬ್ದ ಬಳಸಿ ರೀಲ್ಸ್ ಮಾಡಿ ಬಿಲ್ಡಪ್ ಕೊಟ್ಟಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಲ್ಲದೆ ಆಸ್ತಿ ಲಪಾಟಿಯಿಸಿದ ಆರೋಪವೂ ಬಸು ಮಣ್ಣೂರ ಮೇಲಿದ್ದಿದ್ದರಿಂದ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಇದನ್ನೂ ಓದಿ: Viral News: ಹಾಸ್ಟೆಲ್‌ನ ಆಹಾರದಲ್ಲಿ ಸತ್ತ ಕಪ್ಪೆ ಪತ್ತೆ; ಪೋಸ್ಟ್ ವೈರಲ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ