ಕಾವೇರಿ ವಿಚಾರದಲ್ಲಿ ನಮ್ಮ ತಪ್ಪಿಲ್ಲ, ಮಳೆ ಬರದಿರುವುದು ನಮ್ಮ ತಪ್ಪಾ?: ರಾಮಲಿಂಗಾರೆಡ್ಡಿ
ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ನೀಡಿದ್ದು, ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನೆಲ, ಜಲ ವಿಚಾರದಲ್ಲಿ ಅನ್ಯಾಯ ಆದಾಗ ಬಂದ್ ಮಾಡೋದು ಸಹಜ. ಆಸ್ತಿ-ಪಾಸ್ತಿ ನಷ್ಟವಾಗದಂತೆ ಬಂದ್ ಮಾಡಿ ಎಂದರು.
ಹುಬ್ಬಳ್ಳಿ, ಸೆ.24: ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಸೆ.26 ರಂದು ಬೆಂಗಳೂರು ಬಂದ್ಗೆ (Bangalore Bandh) ಕರೆ ನೀಡಿದ್ದು, ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy), ನೆಲ, ಜಲ ವಿಚಾರದಲ್ಲಿ ಅನ್ಯಾಯ ಆದಾಗ ಬಂದ್ ಮಾಡೋದು ಸಹಜ. ಆಸ್ತಿ-ಪಾಸ್ತಿ ನಷ್ಟವಾಗದಂತೆ ಬಂದ್ ಮಾಡಿ ಎಂದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ನಮ್ಮ ತಪ್ಪಿಲ್ಲ, ಮಳೆ ಬರದಿರುವುದು ನಮ್ಮ ತಪ್ಪಾ? ಅದು ಪ್ರಕೃತಿ ವಿಕೋಪ ಎಂದರು. ಕಳೆದ ಬಾರಿ 600 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗಿತ್ತು. ನಮ್ಮ ಬಳಿ ನೀರು ಇರದೆ ಇರುವುದು ಸುಪ್ರೀಂ ಕೋರ್ಟ್ಗೆ ಗೊತ್ತಿಲ್ವಾ? ಕಮೀಟಿಗೆ ನೀರು ಇರುವುದು ಗೊತ್ತಿಲ್ವಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸೆ.26ರಂದು ಬೆಂಗಳೂರು ಬಂದ್ ಫಿಕ್ಸ್, ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ
ಮಿನಿಮಮ್ ನೀರು ಹೋಗತ್ತದೆ ಎಂದ ರಾಮಲಿಂಗಾರೆಡ್ಡಿ, ಪ್ರಧಾನ ಮಂತ್ರಿಗಳು ಯಾಕೆ ಈ ವಿಷಯದಲ್ಲಿ ಮೌನವಹಿಸಿದ್ದಾರೆ? ಸಂಸದರು ಯಾಕೆ ಮಾತಾಡಲ್ಲ? ಎಂದು ಕೇಳಿದರು. ಅಲ್ಲದೆ, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಬರಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರನ್ನೂ ಕರೆದು ಪ್ರಧಾನಿ ತೀರ್ಮಾನ ಮಾಡಬೇಕು. ಅವರ ಕಡೆ ಅಧಿಕಾರ ಇದೆ ಎಂದರು.
ಬಿಜೆಪಿ ಜೆಡಿಎಸ್ ಮೈತ್ತಿ ಅವರಿಗೆ ಬಿಟ್ಟಿದ್ದು ಎಂದ ರಾಮಲಿಂಗಾರೆಡ್ಡಿ, ಲೋಕಸಭೆ ಚುನಾವಣೆಯಲ್ಲಿ ನಮಗೆ 20 ಸ್ಥಾನ ಬರತ್ತದೆ. ಬಿಜೆಪಿಗೆ ಒಂದು ಅಥವಾ ಎರಡು ಸ್ಥಾನ ಸಿಗಬಹುದು ಎಂದರು. ಮೂರು ಡಿಸಿಎಂ ಆಯ್ಕೆ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಾಗೆ ಮಾತಾಡುವುದೇ ಸರಿ ಅಲ್ಲ. ಇದು ಅನವಶ್ಯಕ. ಮುಖ್ಯಮಂತ್ರಿ ಇದ್ದಾರೆ, ಉಪ ಮುಖ್ಯಮಂತ್ರಿ ಇದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ