ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷ ನಿಲ್ಲಬೇಕಂದ್ರೆ ರಾಜಕಾರಣಿಗಳು ಮೌನವಾಗಿರಬೇಕು ಎಂದ ರಂಭಾಪುರಿ ಜಗದ್ಗುರು

| Updated By: ಆಯೇಷಾ ಬಾನು

Updated on: May 08, 2022 | 1:30 PM

ರಾಜ್ಯದಲ್ಲಿ ಧರ್ಮದ ವಿಷಯದಲ್ಲಿ ಕೆಲ ರಾಜಕೀಯ ಶಕ್ತಿಗಳು ನುಸುಳಿವೆ. ಇದರಿಂದ ಧರ್ಮದ ಘನತೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಮುಂಚೆ ಇಂಥ ಧರ್ಮ ಸಂಘರ್ಷಗಳು ಇರಲಿಲ್ಲ. ತಮ್ಮ ತಮ್ಮ ಧರ್ಮ ಕಾಪಾಡಿಕೊಂಡಿದ್ದರು. ಇನ್ನೊಂದು ಧರ್ಮದ ಬಗ್ಗೆ ಸಹಿಷ್ಣುತಾ ಭಾವವಿತ್ತು. -ರಂಭಾಪುರಿ ಜಗದ್ಗುರು

ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷ ನಿಲ್ಲಬೇಕಂದ್ರೆ ರಾಜಕಾರಣಿಗಳು ಮೌನವಾಗಿರಬೇಕು ಎಂದ ರಂಭಾಪುರಿ ಜಗದ್ಗುರು
ರಂಭಾಪುರಿ ಜಗದ್ಗುರು
Follow us on

ಧಾರವಾಡ: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷ ವಿಚಾರಕ್ಕೆ ಸಂಬಂಧಿಸಿ ಧಾರವಾಡದಲ್ಲಿ ರಂಭಾಪುರಿ ಜಗದ್ಗುರು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ರಾಜಕಾರಣಿಗಳು ಮೌನವಾಗಿರಬೇಕು. ಅವರು ಮೌನವಾದರೆ ಎಲ್ಲವೂ ಪರಿಹಾರ ಆಗುತ್ತದೆ ಎಂದು ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಹೇಳಿದ್ದಾರೆ.

ರಾಜ್ಯದಲ್ಲಿ ಧರ್ಮದ ವಿಷಯದಲ್ಲಿ ಕೆಲ ರಾಜಕೀಯ ಶಕ್ತಿಗಳು ನುಸುಳಿವೆ. ಇದರಿಂದ ಧರ್ಮದ ಘನತೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಮುಂಚೆ ಇಂಥ ಧರ್ಮ ಸಂಘರ್ಷಗಳು ಇರಲಿಲ್ಲ. ತಮ್ಮ ತಮ್ಮ ಧರ್ಮ ಕಾಪಾಡಿಕೊಂಡಿದ್ದರು. ಇನ್ನೊಂದು ಧರ್ಮದ ಬಗ್ಗೆ ಸಹಿಷ್ಣುತಾ ಭಾವವಿತ್ತು. ಈಗ ರಾಜಕೀಯ ಶಕ್ತಿಯ ಪ್ರಚೋದನೆಯಾಗುತ್ತಿದೆ. ಇದರಿಂದ ಇಂಥ ಸಮಸ್ಯೆ ಆಗಿದೆ. ಯಾವುದೇ ಸಮುದಾಯ ಪ್ರಚೋದನೆಗೆ ಒಳಗಾಗಬಾರದು. ಬಾಳೆಹೊನ್ನೂರ ಧರ್ಮಪೀಠ ಮಾನವ ಧರ್ಮಕ್ಕೆ ಜಯ ಎಂದು ಹೇಳುತ್ತ ಬಂದಿದೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿ ಹೇಳುತ್ತಿದೆ. ಐಕ್ಯತೆ ಬೆಳೆಸುವ ಕೆಲಸ ಬಾಳೆಹೊನ್ನೂರ ಧರ್ಮಪೀಠ ಮಾಡಿದೆ. ಆದರೆ ಇತ್ತೀಚಿನ ಬೆಳವಣಿಗೆ ಬಹಳ ಬೇಸರ ತರಿಸಿದೆ. ಜನ ರಾಜಕಾರಣಿಗಳ ಮಾತಿಗೆ ಎಷ್ಟು ಬೇಕೋ ಅಷ್ಟೇ ಬೆಲೆ ಕೊಡಬೇಕು. ಧರ್ಮ ಸಹಿಷ್ಣುತೆ ಕಾಪಾಡಿಕೊಂಡು ಹೋಗಬೇಕು. ಒಬ್ಬರು ಒಂದು ಹೇಳಿದರೆ ಮತ್ತೊಬ್ಬರು ಇನ್ನೊಂದು ಹೇಳುತ್ತಾರೆ. ಹೀಗಾಗಿ ರಾಜಕಾರಣಿಗಳು ಮೌನವಾಗಿರಬೇಕು. ಅವರು ಮೌನವಾದರೆ ಈ ಸಮಸ್ಯೆ ತಾನೇ ಪರಿಹಾರ ಆಗುತ್ತದೆ ಎಂದು ರಂಭಾಪುರಿ ಜಗದ್ಗುರು ತಿಳಿಸಿದ್ದಾರೆ.

ದೇಗುಲಗಳಲ್ಲಿ ಸುಪ್ರಭಾತ ಅಭಿಯಾನಕ್ಕೆ ಕರೆಕೊಟ್ಟ ಶ್ರೀರಾಮಸೇನೆ
ಬೆಂಗಳೂರು: ಮಸೀದಿಗಳಿಗೆ ಮೈಕ್ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹಿಂದುತ್ವ ಪರ ಸಂಘಟನೆಗಳು ಕರ್ನಾಟಕದ ವಿವಿಧೆಡೆ ನಡೆಸುತ್ತಿರುವ ಪ್ರತಿಭಟನೆಗಳು ಮತ್ತೊಂದು ಮಜಲಿಗೆ ಮುಟ್ಟಿವೆ. ಈ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ರಾಜ್ಯದ ಎಲ್ಲಾ ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಅಭಿಯಾನ ನಡೆಸಲಾಗುವುದು. ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ದೇವರ ಹಾಡುಗಳನ್ನು ಪ್ಲೇ ಮಾಡಲಾಗುವುದು. ಸದ್ಯಕ್ಕೆ ಮಸೀದಿಗಳ ಎದುರು ಯಾವುದೇ ಕಾರ್ಯಕ್ರಮ ನಡೆಸುವುದಿಲ್ಲ. ಒಂದು ವೇಳೆ ಸರ್ಕಾರ ನಮ್ಮ ಒತ್ತಡಕ್ಕೆ ಮಣಿಯದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಉತ್ತರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತೆಗೆದುಕೊಂಡ ಕ್ರಮದ ಮಾದರಿಯಲ್ಲಿಯೇ ಇಲ್ಲಿಯೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೋರ್ಟ್ ಆದೇಶ ಉಲ್ಲಂಘನೆಯಾಗುವುದನ್ನು ತಡೆಯಬೇಕು. ಈ ಬೆಳವಣಿಗೆ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಅಪಾಯ ತಪ್ಪಿದ್ದಲ್ಲ ಎಂದರು.

ನಾವು ಆಜಾನ್ ಮಾದರಿಯಲ್ಲಿ ದಿನಕ್ಕೆ ಐದು ಸಲ ದೇವರನಾಮ ಹಾಕುವುದಿಲ್ಲ. ಕೇವಲ ಬೆಳಗ್ಗೆ 5 ಗಂಟೆಗೆ ಮಾತ್ರ ಸುಪ್ರಭಾತಗಳನ್ನು ಹಾಕುತ್ತೇವೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರತಿದಿನ ದೇವಾಲಯಗಳಲ್ಲಿ ಬೆಳಿಗೆ 5ರಿಂದ 6ರವರೆಗೆ ಒಂದು ಗಂಟೆಗಳ ಕಾಲ ದೇವಸ್ಥಾನ ಸಮಿತಿ, ಕಾರ್ಯಕರ್ತರು ಮತ್ತು ಭಕ್ತರು ಸುಪ್ರಭಾತ ಸೇವೆ, ಭಜನೆ ಮಾಡುತ್ತಾರೆ. ನಾನು ಮೈಸೂರಿನಲ್ಲಿ ನಡೆಯುವ ಸುಪ್ರಭಾತ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇನೆ. ಪೊಲೀಸರು ಮೊದಲು ಮಸೀದಿಗೆ ಹೋಗಲಿ, ಆಮೇಲೆ ನಮ್ಮ ಬಳಿ ಬರಲಿ. ಪೊಲೀಸರು ನಮ್ಮ ಅಭಿಯಾನಕ್ಕೆ ತೊಂದರೆ ಕೊಡಬಾರದು. ನಮ್ಮ ಆಂದೋಲನಕ್ಕೆ ಬೆದರಿಕೆ ಹಾಕುವ ಅಥವಾ ಹತ್ತಿಕ್ಕುವ ಕೆಲಸ ಮಾಡಬಾರದು. ಸರ್ಕಾರದ ಮೇಲೆ ನಮಗೆ ವಿಶ್ವಾಸ ಇಲ್ಲ ಎಂದು ಹೇಳಿದರು.

ಧಾರವಾಡದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:30 pm, Sun, 8 May 22