ಧಾರವಾಡದ ಈ ಪ್ರದೇಶಗಳಲ್ಲಿ ಅ.29 ರಂದು ವಿದ್ಯುತ್ ವ್ಯತ್ಯಯ; ಇಲ್ಲಿದೆ ಮಾಹಿತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 27, 2023 | 7:53 PM

ಧಾರವಾಡ(Dharwad) ಉಪವಿಭಾಗ ವ್ಯಾಪಿಯಲ್ಲಿ ಬರುವ 110 ಕೆವಿ. ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಜಾಗುವ 11 ಕೆ ವಿ ನವಲೂರು ಫೀಡರ್ ಮಾರ್ಗದಲ್ಲಿ ಅ.29 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ.

ಧಾರವಾಡದ ಈ ಪ್ರದೇಶಗಳಲ್ಲಿ ಅ.29 ರಂದು ವಿದ್ಯುತ್ ವ್ಯತ್ಯಯ; ಇಲ್ಲಿದೆ ಮಾಹಿತಿ
ಧಾರವಾಡದಲ್ಲಿ ಅ.29 ರಂದು ವಿದ್ಯುತ್ ವ್ಯತ್ಯಯ
Follow us on

ಧಾರವಾಡ, ಅ.27: ಧಾರವಾಡ(Dharwad) ಉಪವಿಭಾಗ ವ್ಯಾಪಿಯಲ್ಲಿ ಬರುವ 110 ಕೆವಿ. ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಜಾಗುವ 11 ಕೆ ವಿ ನವಲೂರು ಫೀಡರ್ ಮಾರ್ಗದಲ್ಲಿ ಅ.29 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ. ಈ ಹಿನ್ನಲೆ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲ 11 ಕೆ.ವಿ. ಮಾರ್ಗಗಳಲ್ಲಿ ಅ.29 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯ (Power Cut)ವಾಗಲಿದೆ.

ಎಲ್ಲೆಲ್ಲಿ ಪವರ್​​ ಕಟ್?​

ಹೌದು, ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅವರು ತುರ್ತುಪಾಲನಾ ಕಾಮಗಾರಿಯನ್ನು ಕೈಗೊಂಡಿರುವುದರಿಂದ ಓಂ ನಗರ, ಸಂಪೂರ್ಣ ನವಲೂರು ಗ್ರಾಮದ ಕೃಷಿ ಪ್ರದೇಶ ಹಾಗೂ ನವಲೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ:ವಿದ್ಯುತ್ ಕಣ್ಣಾ ಮುಚ್ಚಾಲೆ: ಅನಧಿಕೃತ ಲೋಡ್ ಶೆಡ್ಡಿಂಗ್​ನಿಂದ ಯಾದಗಿರಿ ಜಿಲ್ಲೆಯ ರೈತರು ಕಂಗಾಲು

ವಾಟ್ಸಪ್ ಮೂಲಕ ವಿದ್ಯುತ್ ಮಾಹಿತಿ ನೀಡಲು ಮುಂದಾಗಿದ್ದ ಹೆಸ್ಕಾಂ

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಉದ್ಭವಿಸಿದ್ದು, ಕರೆಂಟ್  ಯಾವಾಗ ಹೋಗುತ್ತೋ, ಬರುತ್ತೋ ತಿಳಿಯುತ್ತಿರಲಿಲ್ಲ. ಇದರಿಂದ ರೈತರನ್ನು ಸೇರಿದಂತೆ ಎಲ್ಲರಿಗೂ ಸಮಸ್ಯೆ ಆಗುತ್ತಿತ್ತು. ಇದನ್ನು ಬಗೆಹರಿಸಲು ಹೆಸ್ಕಾಂ  ಅಧಿಕಾರಿಗಳ ವಿಭಿನ್ನ ಪ್ಲ್ಯಾನ್ ಮಾಡಿ, ಸ್ಮಾರ್ಟ್ ಫೋನ್ ಮೂಲಕವೇ ವಿದ್ಯುತ್ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ಮುಂದಾಗಿದ್ದರು. ಹೌದು, ಹೆಸ್ಕಾಂ ಅಧಿಕಾರಿಗಳು ವಾಟ್ಸ್​ಆ್ಯಪ್ ಗ್ರೂಫ್​ನ್ನು ರಚಿಸಿ, ಇದರಲ್ಲಿ ಪಂಪ್ ಸೆಟ್ ಉಪಯೋಗಿಸುವ ರೈತರನ್ನು ಒಳಗೊಂಡು ಎಲ್ಲಾ ಗ್ರಾಹಕರನ್ನು ಸೇರಿಸಲಾಗಿದೆ.

ಕರೆಂಟ್ ಯಾವಾಗ ಹೋಗುತ್ತದೆ, ಬರತ್ತದೆ ಎಂಬುದರ ಬಗ್ಗೆ ಗ್ರಾಹಕರಿಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ರೈತರು ರಾತ್ರಿ ಇಡೀ ಜಮೀನಿನಲ್ಲಿ ಕಾಯುತ್ತಿರುತ್ತಾರೆ. ಈ ಸಮಸ್ಯೆಯನ್ನು ದೂರ ಮಾಡಲು ರೈತರಿಗೆ ವಾಟ್ಸ್​ಆ್ಯಪ್ ಗ್ರೂಪ್ ಮೂಲಕ ಮಾಹಿತಿ ರವಾನೆ ಮಾಡಲಾಗುತ್ತಿದೆ. ವಿದ್ಯುತ್ ಎಷ್ಟು ಗಂಟೆಗೆ ಬರತ್ತದೆ, ಎಷ್ಟು ವ್ಯತ್ಯಯ ಆಗಲಿದೆ ಎಂದು ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಬ್ಯಾಹಟ್ಟಿ ಸರ್ಕಲ್​ನಲ್ಲಿ ಮಾಡಿರುವ ಈ ಪ್ರಯೋಗ ಯಶಸ್ವಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ