ಮೋದಿ ಹೆಸರು ತೆಗೆದು ಬಯ್ಯದೇ ಇದ್ರೆ ಸಿದ್ದರಾಮಯ್ಯಗೆ ಊಟ ರುಚಿಸುವುದಿಲ್ಲ -ಪ್ರಹ್ಲಾದ್​​ ಜೋಶಿ

| Updated By: ಆಯೇಷಾ ಬಾನು

Updated on: Dec 09, 2023 | 12:46 PM

ಮೋದಿ ಅವರ ಹೆಸರು ತೆಗೆದುಕೊಂಡು ಬಯ್ಯದೇ ಇದ್ದಲ್ಲಿ ಸಿದ್ದರಾಮಯ್ಯಗೆ ಊಟ ರುಚಿಸುವುದಿಲ್ಲ. ಯತ್ನಾಳ್ ಅವರು ತನ್ವೀರ್ ಕುರಿತು ಯಾವ ಕಾರಣದಿಂದ ಹೇಳಿದ್ದಾರೆ ಅನ್ನೋದು ಮುಖ್ಯ. ಯತ್ನಾಳ್ ಮಾಡಿರುವ ಗಂಭೀರ ಆರೋಪಕ್ಕೆ ಸಿಎಂ ಸ್ಪಷ್ಟನೆ ಕೊಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.

ಮೋದಿ ಹೆಸರು ತೆಗೆದು ಬಯ್ಯದೇ ಇದ್ರೆ ಸಿದ್ದರಾಮಯ್ಯಗೆ ಊಟ ರುಚಿಸುವುದಿಲ್ಲ -ಪ್ರಹ್ಲಾದ್​​ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
Follow us on

ಹುಬ್ಬಳ್ಳಿ, ಡಿ.09: ಮೋದಿ ಅವರ ಹೆಸರು ತೆಗೆದುಕೊಂಡು ಬಯ್ಯದೇ ಇದ್ದಲ್ಲಿ ಸಿದ್ದರಾಮಯ್ಯಗೆ (Siddaramaiah) ಊಟ ರುಚಿಸುವುದಿಲ್ಲ ಎಂದು ಕೇಂದ್ರ ಗಣಿ ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​​ ಜೋಶಿ (Prahlad Joshi) ಅವರು ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರ ಬಂದ ನಂತರ ಕರ್ನಾಟಕಕ್ಕೆ ಎಷ್ಟು ಹಣ ಕೊಟ್ಟಿದ್ದೇವೆ ಅನ್ನೋದನ್ನ ಶೀಘ್ರವೇ ನಿಮ್ಮ ಮುಂದೆ ಇಡ್ತೇನೆ ಎಂದು ಪ್ರಹ್ಲಾದ್​​ ಜೋಶಿ ಕಿಡಿಕಾರಿದರು.

ರಾಜಸ್ಥಾನದಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಬಜೆಪಿ ಜಯಗಳಿಸಿದೆ. ಹೀಗಾಗಿ ರಾಜಸ್ಥಾನ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಹ್ಲಾದ್​​ ಜೋಶಿ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದ ಮೂಲಕ ಆಗಮಿಸಿದ್ದು ಅದ್ದೂರಿ ಸ್ವಾಗತ ಕೋರಿ ಬಿಜೆಪಿ ಕಾರ್ಯಕರ್ತರು ಬರ ಮಾಡಿಕೊಂಡಿದ್ದಾರೆ. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಹ್ಲಾದ್​​ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಅವರ ಹೆಸರು ತೆಗೆದುಕೊಂಡು ಬಯ್ಯದೇ ಇದ್ದಲ್ಲಿ ಸಿದ್ದರಾಮಯ್ಯಗೆ ಊಟ ರುಚಿಸುವುದಿಲ್ಲ. ಯತ್ನಾಳ್ ಅವರು ತನ್ವೀರ್ ಕುರಿತು ಯಾವ ಕಾರಣದಿಂದ ಹೇಳಿದ್ದಾರೆ ಅನ್ನೋದು ಮುಖ್ಯ. ಯತ್ನಾಳ್ ಮಾಡಿರುವ ಗಂಭೀರ ಆರೋಪಕ್ಕೆ ಸಿಎಂ ಸ್ಪಷ್ಟನೆ ಕೊಡಬೇಕು. ನೀವು ಅಲ್ಲಿಗೆ ಹೋಗಬಾರದು ಅಂತ ಸಿಎಂಗೆ ಪೊಲೀಸರು ಹೇಳಿದ್ದಾಗಿ ಯತ್ನಾಳ ಆರೋಪಿಸಿದ್ದಾರೆ. ಪ್ರಧಾನಿಗಳು ಭೇಟಿಯಾದ ಕಾರ್ಯಕ್ರಮದಲ್ಲಿ ತನ್ವೀರ್ ಭಾಗಿಯಾಗಿರುವ ಫೋಟೋ ಹಾಕಿದ್ದಾರೆ. ಅದು ಸರಿ ಇದ್ದರೂ ಇರಬಹುದು. ಆ ಸಂದರ್ಭದಲ್ಲಿ ತನ್ವೀರ್ ಗೆ ಐಸಿಎಸ್ ನಂಟು ಇತ್ತು ಇಲ್ಲವೋ ಗೊತ್ತಿಲ್ಲ. ಈಗ ತನ್ವೀರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ತನಿಖಾ ಸಂಸ್ಥೆಗಳು ಏನು ಹೇಳುತ್ತೋ ಅದನ್ನು ನಾವು ಪರಿಗಣಿಸಬೇಕು. ಸಿದ್ದರಾಮಯ್ಯನವರು ಈ ರೀತಿ ಹೇಳಿಕೆ ಕೊಡೋದು ಅವರ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ. ಸಿದ್ದರಾಮಯ್ಯ ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಲಿ ಎಂದರು.

ಇನ್ನು ಜಮಾತ್ ಎ ಅಹಲೆ ಸುನ್ನತ್ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮೌಲ್ವಿ ತನ್ವೀರ್ ಹಶ್ಮಿ ಅವರು ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದರು. ಮೌಲ್ವಿ ತನ್ವೀರ್ ಹಶ್ಮಿ ಅವರಿಗೆ ಉಗ್ರ ಸಂಘಟನೆ ಐಸಿಸ್ ನಂಟು ಇದೆ ಎಂದಿದ್ದರು.

ಇದನ್ನೂ ಓದಿ: ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಟ್ರಕ್ಕಿಂಗ್ ಬಂದಿದ್ದ ಯುವಕ ನಾಪತ್ತೆ; ರಾಣಿಝರಿ ಪಾಯಿಂಟ್ ಬಳಿ ಬೈಕ್ ಪತ್ತೆ

ಶಾಸಕ ವಿಶ್ವನಾಥ್ ವಿರುದ್ಧ ಜೋಶಿ ಕಿಡಿ

ಅಧಿವೇಶನದಲ್ಲಿ ಬಿಜೆಪಿ ನಾಯಕರ ಮುಸುಕಿನ ಗುದ್ದಾಟ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ ಜೋಶಿ ಅವರು ವಿಧಾನಸಭೆ ಅಧಿವೇಶನದಲ್ಲಿ ನಡೆದ ಗೊಂದಲದ ಕುರಿತು ಬಹಿರಂಗ ಹೇಳಿಕೆ ಸರಿಯಲ್ಲ ಎಂದು ಶಾಸಕ ವಿಶ್ವನಾಥ್ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿಯಲ್ಲಿ ಆಂತರಿಕ ಕಿತ್ತಾಟವಿಲ್ಲ. ಸಂವಹನದ ಕೊರತೆಯಿಂದ ವಿಧಾನಸಭೆ ಅಧಿವೇಶನದಲ್ಲಿ ಆ ರೀತಿ ಘಟನೆ ನಡೆದಿದೆ. ಧರಣಿ ಮಾಡಬೇಕೊ ಅಥವಾ ಸಭಾತ್ಯಾಗ ಮಾಡಬೇಕು ಅನ್ನೋ ಬಗ್ಗೆ ಗೊಂದಲವಾಗಿದೆ. ಈ ಬಗ್ಗೆ ನಾವು ಸಹ  ಶೀಘ್ರವೇ ಸಭೆ ಮಾಡ್ತೇವೆ. ಕೆಲವರಲ್ಲಿ ಉಂಟಾಗಿರುವ ಗೊಂದಲ ನಿವಾರಿಸುತ್ತೇವೆ ಎಂದರು.

ವಿಶ್ವನಾಥ ಅವರ ಬಕೆಟ್ ರಾಜಕಾರಣ ಹೇಳಿಕೆ ಕುರಿತು ಮಾತನಾಡಿದ ಜೋಶಿ, ವಿಶ್ವನಾಥ್ ಏನ್ ಹೇಳಿದ್ದಾರೆ ಗೊತ್ತಿಲ್ಲ. ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಪಕ್ಷದ ಯಾವುದೇ ವಿಷಯವನ್ನು ಬಹಿರಂಗವಾಗಿ ಮಾತನಾಡಬಾರದು. ಈ ನಿಟ್ಟಿನಲ್ಲಿ ವಿಶ್ವನಾಥ್ ಅವರನ್ನು ಕರೆದು ಮಾತಾಡುತ್ತೇನೆ. ಬಿಜೆಪಿ ಶಿಸ್ತಿನಿಂದ ನಡೆದುಕೊಂಡ ಪರಿಣಾಮ ರಾಜ್ಯದ ಅನೇಕ ರಾಜ್ಯಗಳಲ್ಲಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಸಂಸದ, ಶಾಸಕ ಸೇರಿ ದೇಶದಲ್ಲಿ ಸುಮಾರು 50 ಸಾವಿರ ಜನಪ್ರತಿನಿಧಿಗಳು ಬಿಜೆಪಿಯಲ್ಲಿದ್ದಾರೆ. ಸಮಸ್ಯೆಗಳಿದ್ದರೆ ಒಟ್ಟಿಗೆ ಕೂತು ಮಾತನಾಡುವಂತೆ ಸಲಹೆ ನೀಡಿದರು.

ಕಿನ್ಯಾಗೆ ಬೆಣ್ಣೆ ಕರ್ನಾಟಕಕ್ಕೆ ಸುಣ್ಣ ಎಂಬ ಸಿದ್ದರಾಮಯ್ಯ ಆರೋಪ ವಿಚಾರ ಸಂಬಂಧ ವಿದೇಶ ಮಂತ್ರಾಲಯಕ್ಕೆ ಜಾಗತಿಕ ಮಟ್ಟದಲ್ಲಿ ಅನೇಕ ನೆರವು ನೀಡಬೇಕಾಗುತ್ತೆ. ಬೇರೆ ಬೇರೆ ರಾಜ್ಯಗಳಿಗೆ ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ಮೂಲಕ ಹಣ ಕೊಡ್ತಾ ಇರುತ್ತೇವೆ. ರಾಜ್ಯ ಸರ್ಕಾರ ತನ್ನ ಖಾತೆಯಲ್ಲಿರುವ ಹಣ ಖರ್ಚು ಮಾಡಲಿ. ಕೇಂದ್ರ ಸರ್ಕಾರ ನೀಡಿರುವ ಹಣ ಮೊದಲು ಖರ್ಚು ಮಾಡಲಿ.  ಅದನ್ನು ಬಿಟ್ಟು ಈ ರೀತಿ ಆರೋಪ ಮಾಡೋದು ಸರಿ ಇಲ್ಲ. ರಾಜ್ಯ ಸರ್ಕಾರದ ಬಳಿ ಹಣ ಇಲ್ಲದೆ ಇರುವುದರಿಂದ ಬರ ಪರಿಹಾರ ಕಾಮಗಾರಿ ಕೈಗೊಳ್ಳುತ್ತಿಲ್ಲ. ಭ್ರಷ್ಟಾಚಾರ, ಬೇರೆ ಬೇರೆ ಸ್ಕೀಮ್ ಗಳ ಹೆಸರಲ್ಲಿ ಹಣ ವ್ಯಯ ಮಾಡಲಾಗುತ್ತಿದೆ. ಕೆಎಸ್ಆರ್ಟಿ ಮತ್ತು ವಿದ್ಯುತ್ ನಿಗಮಗಳಿಗೆ ದುಡ್ಡು ಕೊಟ್ಟಿಲ್ಲ. ಮೊದಲು ನೀವು ಬರ ಪರಿಹಾರ ಕಾಮಗಾರಿ ಆರಂಭಿಸಿ. ಭಾರತ ದೇಶ ದೊಡ್ಡದಿದ್ದು ಅನೇಕ ರಾಜ್ಯಗಳಿರೋದ್ರಿಂದ ಹಣ ಬರೋದು ತಡವಾಗಬಹುದು. ಮೋದಿ ಸರ್ಕಾರ ಬಂದ ನಂತರ ಕರ್ನಾಟಕಕ್ಕೆ ಎಷ್ಟು ಹಣ ಕೊಟ್ಟಿದ್ದೇವೆ ಅನ್ನೋದನ್ನ ಶೀಘ್ರವೇ ನಿಮ್ಮ ಮುಂದೆ ಇಡ್ತೇನೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ