ಈಡಿಗ ಸಮಾವೇಶ: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಭುಸುಗುಟ್ಟಿದ ಬಿಕೆ ಹರಿಪ್ರಸಾದ್

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಮುನಿಸು ತಣಿಯುವಂತೆ ಕಾಣುತ್ತಿಲ್ಲ. ಸಚಿವ ಸ್ಥಾನ ನೀಡುವಲ್ಲಿ ಬಿ.ಕೆ.ಹರಿಪ್ರಸಾದ್‌ಗೆ ಸಿದ್ದರಾಮಯ್ಯರೇ ಅಡ್ಡಗಾಲಾಗಿದ್ದರು ಎಂಬ ಮಾತು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೇಳಿಬಂದಿತ್ತು. ಅಂದಿನಿಂದಲೂ ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಶೀತಲ ಸಮರ ಮುಂದುವರೆದಿದ್ದು, ಇದೀಗ ಮತ್ತೊಮ್ಮೆ ಸಿದ್ದರಾಯಮ್ಯ ವಿರುದ್ಧ ಹರಿಪ್ರಸಾದ್ ಪರೋಕ್ಷವಾಗಿ ಭುಸುಗುಟ್ಟಿದ್ದಾರೆ.

ಈಡಿಗ ಸಮಾವೇಶ:  ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಭುಸುಗುಟ್ಟಿದ ಬಿಕೆ ಹರಿಪ್ರಸಾದ್
ಸಿದ್ದರಾಮಯ್ಯ-ಬಿಕೆ ಹರಿಪ್ರಸಾದ್
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on: Dec 10, 2023 | 11:58 AM

ಹುಬ್ಬಳ್ಳಿ, (ಡಿಸೆಂಬರ್ 10): ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಡಿಗ ಸಮಾವೇಶ (Ediga Community Convention) ನಡೆಸುತ್ತಿರುವುದರ ವಿರುದ್ಧ ಕಾಂಗ್ರೆಸ್ ವಿಧಾನಪರಿಷತ್ ಬಿಕೆ ಹರಿಪ್ರಸಾದ್​ ಮತ್ತೆ ಕೆರಳ ಕೆಂಡವಾಗಿದ್ದಾರೆ. ರಾಜಕೀಯ ಕುತಂತ್ರಕ್ಕೆ ನಾನು ಬಗ್ಗಲ್ಲ. ಸಿದ್ದರಾಮಯ್ಯ 2006ರಲ್ಲಿ ಪಕ್ಷ ಬಂದಿದ್ದು, ಅಷ್ಟೇನು ಪರಿಚಯವಿಲ್ಲ. ಯಾವ ಕಾರಣಕ್ಕೆ ಅಧಿಕಾರಕ್ಕೆ ಬಂದಿದ್ದೇವೆ, ಅದನ್ನು ಈಡೇರಿಸಬೇಕು ಎಂದು ಬಿಕೆ ಹರಿಪ್ರಸಾದ್ (BK Hariprasad ಮತ್ತೆ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ದೊಡ್ಡ ದೊಡ್ಡ ನಾಯಕರು ಈಡಿಗ ಸಂಘವನ್ನು ಕಟ್ಟಿದ್ದಾರೆ. ಆದರೆ ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನು ಮಾಡಿದ್ದಾರೆ. ರಾಜಕೀಯ ಕುತಂತ್ರದ ಸಮಾವೇಶ, ಇದರಿಂದ ಒಳ್ಳೆಯದಾಗಲ್ಲ. ಗುರುನಾರಾಯಣ ಅಧ್ಯಯನ ಪೀಠಕ್ಕೆ ಅನುದಾನವನ್ನು ಕೊಟ್ಟಿಲ್ಲ. ಸಮಾಜದ ಹಿತದೃಷ್ಟಿಯಿಂದ ಏನು ಮಾಡಿದ್ದಾರೆಂದು ಹೇಳಬೇಕು. ರಾಜಕೀಯ ಪ್ರೇರಿತ ಸಮಾವೇಶದಲ್ಲಿ ನಾವು ಭಾಗಿಯಾಗುವುದಿಲ್ಲ. ಪ್ರಣಾವನಂದ ಸ್ವಾಮೀಜಿ ಉಪವಾಸ ಸತ್ಯಾಗ್ರಹಕ್ಕೆ ಶುಭವಾಗಲಿ ಎಂದು ಹೇಳಿದರು.

ಇದನ್ನೂ ಓದಿ: ನಾನೊಬ್ಬ ಹಿಂದುಳಿದವನು ಅಂತಾ ನೋಟಿಸ್ ಕೊಡುತ್ತಿದ್ದೀರಾ: ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ

ಸಮಾಜ ಒಡೆಯೋ ಪ್ರಯತ್ನ ಮಾಡಿದ್ರೆ ಮುಂದೆ ಏನಾಗತ್ತೆ ನೋಡೋಣ. ಪ್ರಣಾವನಂದ ಸ್ವಾಮೀಜಿ ಸತ್ಯಾಗ್ರಹ ಸಮುದಾಯದ ಪರ. ಹಿಂದುಳಿದ, ಅತಿ ಹಿಂದುಳಿದವರ ಪರ ಸತ್ಯಾಗ್ರಹ ಮಾಡುತ್ತಿದ್ದು, ಅವರಿಗೆ ಒಳ್ಳೆಯಾದಗಲಿ. ಪ್ರಣಾವನಂದ ಸ್ವಾಮೀಜಿಗೆ ಜಾಸ್ತಿ ಹುಳುಕು ಗೊತ್ತಿದೆ. ಅದಕ್ಕಾಗಿ ಅವರನ್ಮ ದೂರ ಇಟ್ಟಿದ್ದಾರೆ ‌. ಸ್ವಾಮೀಜಿ ನಮ್ಮ‌ಜಾತಿಯವರು ಅಲ್ಲ ಅಂದ್ರು. ಅವರ ಪಾದ ಪೂಜೆ ಮಾಡಿದವರು ಯಾರು ಎಂದು ಪ್ರಶ್ನಿಸಿದ ಹರಿಪ್ರಸಾದ್, ಇವರೇನು ಜಾತಿ ಪ್ರಮಾಣ ಪತ್ರ ಕೊಡುವುದಕ್ಕೆ ತಹಶೀಲ್ದಾರ್​ ಏನು ಎಂದು ವಾಗ್ದಾಳಿ ನಡೆಸಿದರು.

ಸಂಘ ಮಾಡಿಡುವುದಕ್ಕೆ ಒಳ್ಳೆಯದಕ್ಕೆ. 1944 ರಲ್ಲಿ ಸಂಘ ಹುಟ್ಟುಕೊಂಡಿದೆ. 75 ವರ್ಷದಲ್ಲಿ ಬರೀ 12500 ಜ‌ನ ಇದ್ದಾರೆ. ಅವರು ಮಾತ್ರ ಈಡೀಗರಾ. ಕೇವಲ‌ ಕೆಲವರ ಕಪಿಮುಷ್ಟಿಯಲ್ಲಿದೆ. ಕೆಲ ವ್ಯಾಪಾರಿಗಳು ಸಂಘ ಮಾಡಿಕೊಂಡಿದ್ದಾರೆ. ಸಂಪೂರ್ಣವಾಗಿ ಸಂಘ ವ್ಯಾಪಾರಕ್ಕೆ ಇದೆ. 26 ಒಳ ಪಂಗಡದವರನ್ನು ಸದಸ್ಯರನ್ನ‌ ಮಾಡಿದ್ದಾರಾ. ಸಮಾವೇಶದ ಕುರಿತು ಯಾರ ಹತ್ತಿರ ಚರ್ಚೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೂತು ನಾಲ್ಕ ಜನ‌ ಸಮಾವೇಶ ಮಾಡಿದ್ರೆ ಆಗಲ್ಲ. ಸಮುದಾಯದ ಜನ ಕುತಂತ್ರಕ್ಕೆ, ಷಡ್ಯಂತ್ರಕ್ಕೆ ಬಲಿಯಾಗಬೇಡಿ ಎಂದು ಹರಿಪ್ರಸಾದ್ ತಮ್ಮ ಸಮುದಾಯದ ಜನಕ್ಕೆ ಮನವಿ ಮಾಡಿದರು.

ನಾನು‌ ಮಂತ್ರಿ ಅಗಬೇಕು ಎನ್ನುವುದು ಇಲ್ಲ. ಸಿದ್ದರಾಮಯ್ಯ ಪರ ಮಾತಾಡಿದ್ರೆ ಮಂತ್ರಿ ಆಗುತ್ತಾರೆ ಎನ್ನುವುದು ತಪ್ಪು. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ನಾನು ‌ಮಂತ್ರಿ ಆಗಬೇಕು ಎಂದು ಯಾರ ಹತ್ತಿರ ಕೇಳಿಲ್ಲ. ನಾನು ಬೇರೆಯವರ ತರಹ ಬಹಿಷ್ಕಾರ ‌ಮಾಡಿಲ್ಲ. ಯಾರ ಮಂತ್ರಿ ಆಗಿದ್ದಾರಲ್ವಾ ಅವರು ಬಹಿಷ್ಕಾರ ಮಾಡಿದ್ರು ‌ನಂತರ‌ ಅವರನ್ನು‌ ಮಂತ್ರಿ ಮಾಡಿದರು ಎಂದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ