Dharwad News: ರಸ್ತೆ ಅಪಘಾತ ಮೂವರ ಸಾವು

|

Updated on: Jun 11, 2023 | 10:23 AM

ಲಾರಿ-ಕಾರ್ ಮಧ್ಯೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ 4 ರ ಹಳಿಯಾಳ ಸೇತುವೆ ಬಳಿ ನಡೆದಿದೆ.

Dharwad News: ರಸ್ತೆ ಅಪಘಾತ ಮೂವರ ಸಾವು
ಧಾರವಾಡ ರಸ್ತೆ ಅಪಘಾತ
Follow us on

ಧಾರವಾಡ: ಲಾರಿ-ಕಾರ್ ಮಧ್ಯೆ ಅಪಘಾತ (Accident) ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ (Dharwad National Highway) 4 ರ ಹಳಿಯಾಳ (Haliyal) ಸೇತುವೆ ಬಳಿ ನಡೆದಿದೆ. ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಾತನಹಳ್ಳಿ ಗ್ರಾಮದ ಚಂದನ್ (28), ಹೊಳೆನರಸಿಪುರದ ಟಿ.ವಿ. ದೀಪು(26), ಹೊಳೆನರಸಿಪುರ ತಾಲೂಕಿನ ಒಡನಹಳ್ಳಿ ಗ್ರಾಮದ ಪುಟ್ಟಣ್ಣ ಮಡಿಕೇರಿ (33) ಮೃತ ದುರ್ದೈವಿಗಳು.
ಗಾಯಾಳು ಕಿರಣ್ (28) ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರು ಹಾಸನ ಮತ್ತು ಮೈಸೂರು ಮೂಲದವರು ಎಂದು ತಿಳಿದುಬಂದಿದೆ. ಕಾರು ಹುಬ್ಬಳ್ಳಿಯಿಂದ ಬೆಳಗಾವಿಕಡೆಗೆ ಹೋಗುತ್ತಿತ್ತು. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಲಕನ‌ ನಿಯಂತ್ರಣ ತಪ್ಪಿ ಹೊಳೆಗೆ ಉರುಳಿ ಬಿದ್ದ ಕಾರು

ಮಂಗಳೂರು: ಚಾಲಕನ‌ ನಿಯಂತ್ರಣ ತಪ್ಪಿ ಎರ್ಟಿಗಾ ಕಾರು ಹೊಳೆಗೆ ಉರುಳಿ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ‌ ಓರ್ವ ಮೃತಪಟ್ಟಿದ್ದು ಇನ್ನೋರ್ವನಿಗೆ ಗಂಭೀರ ಗಾಯಗಳಾಗಿದ್ದು, ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಹೊಸೂರು ನಿವಾಸಿ ಎಂದು ಗುರುತಿಸಲಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಎಂಬಲ್ಲಿ ಎರ್ಟಿಗಾ ಕಾರು ಹೊಳೆಗೆ ಉರುಳಿ ಬಿದ್ದಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

ಇದನ್ನೂ ಓದಿ: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅನುಮಾನಸ್ಪದ ಸಾವು

ದಂಪತಿಗೆ ಕಚ್ಚಿದ ಹಾವು, ಪತಿ ಸಾವು, ಪತ್ನಿ ಸ್ಥಿತಿ ಗಂಭೀರ

ಬೆಳಗಾವಿ: ದಂಪತಿಗೆ ಹಾವು ಕಚ್ಚಿ ಪತಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಪತಿ ಸಾವನ್ನಪ್ಪಿದ್ದು, ಪತ್ನಿ ಸ್ಥಿತಿ ಗಂಭೀರವಾಗಿದೆ. ಸಿದ್ದಪ್ಪ ಚಿವಟಗುಂಡಿ(35) ಮೃತ ದುರ್ದೈವಿ. ನಾಗವ್ವಾ ಚಿವಟಗುಂಡಿ(28) ಸ್ಥಿತಿ ಗಂಭೀರ. ದಂಪತಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಾನಿಕೊಪ್ಪ ಗ್ರಾಮದವರು ಎಂದು ತಿಳಿದುಬಂದಿದೆ.

ದಂಪತಿ ಸೆಕ್ಯುರಿಟಿ ಕೆಲಸಕ್ಕೆಂದು ಏಳು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ತಗಡಿನ ಶೆಡ್​​ನಲ್ಲಿ ಮೂರು ಮಕ್ಕಳೊಂದಿಗೆ ಮಲಗಿದ್ದ ಪತಿ, ಪತ್ನಿಗೆ ಹಾವು ಕಚ್ಚಿದೆ. ಬೆಳಗಾವಿಯ ಜಿಲ್ಲಾಸ್ಪತ್ರೆಯ ಐಸಿಯುವಿನಲ್ಲಿ ನಾಗವ್ವಾಗೆ ಚಿಕಿತ್ಸೆ ಮುಂದುವರೆದಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 am, Sun, 11 June 23