AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tumakuru: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅನುಮಾನಸ್ಪದ ಸಾವು; ಪ್ರಿಯಕರನೇ ಕೊಲೆ ಮಾಡಿರುವ ಶಂಕೆ

ಆಕೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ. ಮನೆಯಲ್ಲಿ ಬಡತನ, ಮನೆಯಲ್ಲಿ ಜೀವನ ನಡೆಯಬೇಕಾದ್ರೆ, ಈ ಯುವತಿ ದುಡಿಯಲೇಬೇಕಿತ್ತು. ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡಿ, ತಮ್ಮ ಮನೆಯನ್ನ ಸಾಕುತ್ತಿದ್ದಳು. ಆದರೆ, ಅದೇನಾಯ್ತೋ ಗೊತ್ತಿಲ್ಲ. ಕೊಲೆಯಾದ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಾಳೆ.

Tumakuru: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅನುಮಾನಸ್ಪದ ಸಾವು; ಪ್ರಿಯಕರನೇ ಕೊಲೆ ಮಾಡಿರುವ ಶಂಕೆ
ಮೃತ ವೀಣಾ
ಕಿರಣ್ ಹನುಮಂತ್​ ಮಾದಾರ್
|

Updated on: Jun 11, 2023 | 7:02 AM

Share

ತುಮಕೂರು: ರಕ್ತದ ಮಡುವಿನಲ್ಲಿ ಬಿದ್ದಿರುವ ಯುವತಿ, ಒಂಟಿ ರೂಮ್, ಈ ದೃಶ್ಯ ಕಂಡು ಬಂದಿದ್ದು ನಗರದ ವಿದ್ಯಾನಗರದಲ್ಲಿ. ಹೌದು, ಈ ಒಂಟಿ ರೂಮ್​ನಲ್ಲಿ ವಾಸವಿದ್ದ ಯುವತಿ ವೀಣಾ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೂಲತಃ ತುಮಕೂರು(Tumakuru) ಜಿಲ್ಲೆಯ ತುರುವೇಕೆರೆ ತಾಲೂಕಿನ ಹುಲೆಕೆರೆ ಗ್ರಾಮದ ನಿವಾಸಿಯಾಗಿರುವ ವೀಣಾ ಕಳೆದ ನಾಲ್ಕು ವರ್ಷಗಳಿಂದ ತುಮಕೂರಿನ ಪಂಡಿತನಹಳ್ಳಿ ಬಳಿಯಿರುವ ಇನ್ ಕ್ಯಾಪ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅದರಂತೆ ನಿನ್ನೆ(ಜೂ.10)ಯೂ ಮೊದಲ ಶಿಪ್ಟ್ ಮುಗಿಸಿ ಮಧ್ಯಾಹ್ನ 3.30 ವೇಳೆಗೆ ರೂಮ್​ಗೆ ವಾಪಸ್ ಆಗಿದ್ದಳು. ಆದರೆ, ರಾತ್ರಿ 11.30 ರಷ್ಟರಲ್ಲಿ ಸ್ನೇಹಿತರು ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ವೀಣಾ ಜೊತೆಗೆ ಇಬ್ಬರು ಸ್ನೇಹಿತೆಯರು ವಾಸವಿದ್ದರಂತೆ. ಅವರು ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅವರು ಎರಡನೇ ಶಿಪ್ಟ್ ಕೆಲಸಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಎರಡನೇ ಶಿಪ್ಟ್ ಮುಗಿಸಿ‌ ರಾತ್ರಿ ಮನೆಗೆ ಬಂದಾಗ ಸ್ನೇಹಿತೇ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕಂಪನಿಯವರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೊಸ ಬಡಾವಣೆ ಪೊಲೀಸರು ಭೇಟಿ ನೀಡಿ‌ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಯುವತಿ ವೀಣಾ ಯಾರನ್ನೋ ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಪ್ರೀಯಕರನೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವೀಣಾ ಕಂಪನಿಯಲ್ಲಿ ಬೇರೆ ಹುಡುಗರ ಜೊತೆ ‌ಮಾತನಾಡುತ್ತಿದ್ದಳೆಂದು ಅನುಮಾನ ಪಟ್ಟು ಪ್ರೀಯಕರ ಕತ್ತು ಕೊಯ್ದು ಕೊಲೆ‌ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ:Lovers Murder: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಪ್ರೇಮಿಗಳ ಕೊಲೆ: 8 ತಿಂಗಳಲ್ಲಿ 7 ಭಯಾನಕ ಹತ್ಯೆ

ಒಟ್ಟಾರೆ ತಮ್ಮ ಬಡತನವನ್ನ ನಿಗಿಸಿಕೊಂಡು ತಂದೆ ತಾಯಿಯನ್ನ ನೋಡಿಕೊಂಡಿದ್ದ ವೀಣಾ ಕೊಲೆಯಾಗಿದ್ದು, ನಿಜಕ್ಕೂ ದುರಂತ. ಅತ್ತ ತನ್ನ ಮಗಳ ಸ್ಥಿತಿ ನೋಡಿ ತಂದೆ ಕಂಗಲಾಗಿದ್ದು, ತಮ್ಮ ಮುಂದಿನ ಜೀವನ ಹೇಗೆ ಅನ್ನೋ ಭೀತಿ ಶುರುವಾಗಿದೆ. ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಹುಡುಕಾಟ ನಡೆಸಿದ್ದಾರೆ.

ವರದಿ: ಮಹೇಶ್ ಟಿವಿ9 ತುಮಕೂರು

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ