Koppala News: ಕಾರು ಮಾಲೀಕನ ಮಗನನ್ನೇ ಕೊಲೆ ಮಾಡಿದ ಪಾಪಿ ಚಾಲಕ; ಕಾರಣವೇನು ಗೊತ್ತಾ?

ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಕಾರು ಮಾಲೀಕನ ಮಗನನ್ನೇ ಬಾವಿಯಲ್ಲಿ ಮುಳುಗಿಸಿ ಚಾಲಕ ಕೊಲೆ ಮಾಡಿದ ಧಾರುಣ ಘಟನೆ ನಡೆದಿದೆ. ಪ್ರಜ್ವಲ್​ ಎಂಬಾತ ಮೃತ ಬಾಲಕ.​

Koppala News: ಕಾರು ಮಾಲೀಕನ ಮಗನನ್ನೇ ಕೊಲೆ ಮಾಡಿದ ಪಾಪಿ ಚಾಲಕ; ಕಾರಣವೇನು ಗೊತ್ತಾ?
ಆರೋಪಿ ಶಂಕರ್​​, ಮೃತ ಬಾಲಕ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 10, 2023 | 9:42 AM

ಕೊಪ್ಪಳ: ಜಿಲ್ಲೆಯ ಕುಕನೂರು(Kuknoor) ಪಟ್ಟಣದಲ್ಲಿ ಕಾರು ಮಾಲೀಕನ ಮಗನನ್ನೇ ಬಾವಿಯಲ್ಲಿ ಮುಳುಗಿಸಿ ಚಾಲಕ ಕೊಲೆ ಮಾಡಿದ ಧಾರುಣ ಘಟನೆ ನಡೆದಿದೆ. ಪ್ರಜ್ವಲ್​ ಎಂಬಾತ ಮೃತ ಬಾಲಕ.​ ಐದು ದಿನಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಚಾಲಕ ಶಂಕರ್ ಅಪ್ರಾಪ್ತರಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿ ಅದನ್ನ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಬಳಿಕ ವಿಡಿಯೋ ತೋರಿಸಿ ಹಣವನ್ನ ಕೀಳುತ್ತಿದ್ದನಂತೆ.​​ ತಾನು ಕೆಲಸ ಮಾಡುತ್ತಿದ್ದ ಕಾರು ಮಾಲೀಕನ ಮಗನಿಗೂ ಇದೇ ರೀತಿಯಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದಿದ್ದರೆ ವಿಡಿಯೋ ತೋರಿಸುವುದಾಗಿ ಪ್ರಜ್ವಲ್​ಗೆ ಬೆದರಿಕೆ ಹಾಕಿದ್ದಾನೆ. ಆದರೆ, ಬಾಲಕ ಹಣ ಕೊಡಲ್ಲ ಎಂದಿದ್ದಾನೆ. ಇದೇ ಕಾರಣಕ್ಕೆ ಪ್ರಜ್ವಲ್​ನನ್ನ ಬಾವಿಗೆ ತಳ್ಳಿ ಕಾಲಿನಿಂದ ತುಳಿದು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿ‌ದ ಬಳಿಕ ಪ್ರಜ್ವಲ್​​​​ ತಂದೆಗೆ ಸ್ವತಃ ಕರೆ ಮಾಡಿದ್ದ ಶಂಕರ್

ಹೌದು ಮೃತ ಪ್ರಜ್ವಲ್​ನನ್ನ ಕೊಲೆ ಮಾಡಿ, ಬಾವಿಯಲ್ಲಿ ಮುಳುಗಿ ನಿಮ್ಮ ಮಗ ಮೃತಪಟ್ಟಿದ್ದಾನೆಂದು ಸ್ವತಃ ಪ್ರಜ್ವಲ್​​​​ ತಂದೆಗೆ ಕರೆ ಮಾಡಿ ಶಂಕರ್ ಹೇಳಿದ್ದ. ಜೊತೆಗೆ ಕೊಲೆ ಮಾಡಿದ್ದನ್ನು ಗಮನಿಸಿದ್ದ ಯುವಕರಿಗೂ ಬೆದರಿಕೆ ಹಾಕಿದ್ದನಂತೆ. ಶಂಕರ್ ಮೇಲೆ ಅನುಮಾನ ಇದ್ದ ಹಿನ್ನೆಲೆ ಮೃತ ಬಾಲಕನ ತಂದೆ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಕುಕನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಶಂಕರ್ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ:ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆಟೋ ಚಾಲಕನ ಕೊಲೆ, ಪಾಳು ಬಿದ್ದ ಮನೆಯ ಶೌಚಾಲಯದಲ್ಲಿ ಶವ ಪತ್ತೆ

ಬಾಡಿಗೆ ರೂಮ್​ನಲ್ಲಿ ವಾಸವಿದ್ದ ಯುವತಿ ಅನುಮಾನಸ್ಪದ ಸಾವು

ತುಮಕೂರು: ನಗರದ ವಿದ್ಯಾನಗರದ 10 ನೇ ಕ್ರಾಸ್​ನಲ್ಲಿ ಬಾಡಿಗೆ ರೂಮ್​ನಲ್ಲಿ ವಾಸವಿದ್ದ ಯುವತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ. ವೀಣಾ(21) ಮೃತ ದುರ್ದೈವಿ. ತುರುವೇಕೆರೆ ತಾಲೂಕಿನ ಹುಲೆಕೆರೆ ಗ್ರಾಮದ ಮೃತ ವೀಣಾ ಅವರು ತುಮಕೂರು ತಾಲೂಕಿನ ಪಂಡಿನತಹಳ್ಳಿ ಬಳಿಯಿರುವ ಇನ್ ಕ್ಯಾಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಒಟ್ಟು ಮೂವರು ಸ್ನೇಹಿತೆರೊಂದಿಗೆ ವಾಸವಿದ್ದಳು. ಇಬ್ಬರು ಸ್ನೇಹಿತೆಯರು ಕೆಲಸಕ್ಕೆ‌ ಹೋಗಿದ್ದರು. ಈ ವೇಳೆ ರೂಮ್​ನಲ್ಲಿ ಒಬ್ಬಳೆ ಇದ್ದಾಗ ಈ ಘಟನೆ ನಡೆದಿದ್ದು, ಕೊಲೆಯಾದ ಸ್ಥಿತಿಯಲ್ಲಿ ವೀಣಾ ಶವ ಪತ್ತೆಯಾಗಿದೆ. ಹೌದು ಕತ್ತಿನಲ್ಲಿ ಗಾಯದ ಗುರುತು ಇದ್ದು, ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ