Bengaluru News: ಯುವತಿಯರನ್ನು ವೇಶ್ಯಾವಾಟಿಕೆ ದೂಡಿದ್ದ ಆರೋಪಿಗಳ ಬಂಧನ: 26 ಯುವತಿಯರ ರಕ್ಷಣೆ
ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನ ಕರೆತಂದು ವೇಶ್ಯಾವಾಟಿಕೆಗೆ ದೂಡಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನ (Young Girl) ಕರೆತಂದು ವೇಶ್ಯಾವಾಟಿಕೆಗೆ (Prostitution) ದೂಡಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು 26 ಯುವತಿಯರನ್ನು ರಕ್ಷಣೆ ಮಾಡಿದ್ದು, 9 ಜನ ಆರೋಪಿಗಳನ್ನು ಬಂಧಸಿದ್ದಾರೆ. ಆರೋಪಿಗಳು ಕೆಲಸ ಕೊಡಸುವ ನೆಪದಲ್ಲಿ ಹೊರ ರಾಜ್ಯದಿಂದ ಯುವತಿಯರನ್ನ ಕರೆತರುತ್ತಿದ್ದರು. ಯುವತಿಯರನ್ನು ನಗರದ ಪಿಜಿಗಳಲ್ಲಿ ಇರಿಸಿ ಆರೋಪಿಗಳು ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಈ ವಿಷಯ ತಿಳಿದ ಸಿಸಿಬಿ ಪೊಲೀಸರು ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ಕಡೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ದೆಹಲಿ ಮೂಲದ ನಾಲ್ವರು, ಮುಂಬೈ ಮೂಲದ 9, ಪಶ್ಚಿಮ ಬಂಗಾಳ ಮೂಲದ 8 ಹಾಗೂ ಛತ್ತೀಸ್ಗಡ ಮೂಲದ ಓರ್ವ ಯುವತಿಯನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೇಟಿಂಗ್ ಆ್ಯಪ್ ಮೂಲಕ ಯುವತಿಗೆ ವಂಚಿಸಿದ್ದ ಆರೋಪಿ ಬಂಧನ
ಡೇಟಿಂಗ್ ಆ್ಯಪ್ ಮೂಲಕ ಯುವತಿಗೆ ವಂಚಿಸಿದ್ದ ಆರೋಪಿ ಮುದಾಸಿರ್ ಎಂಬಾತನನ್ನ ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಿಂದೂ ಯುವಕನ ಹೆಸರಲ್ಲಿ ಆರೋಪಿ ಮುದಾಸಿರ್ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ. ಆ್ಯಪ್ನಲ್ಲಿ ಸಂಗಾತಿ ಹುಡುಕುತ್ತಿದ್ದ ಯುವತಿಗೆ ಮೆಸೇಜ್ ಕಳಿಸಿದ್ದ.
ಬಳಿಕ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದನು. ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ ಆರೋಪಿ ಮುದಾಸಿರ್, ನಂತರ ಯುವತಿ ಭೇಟಿ ವೇಳೆ ಆತ ಹಿಂದೂ ಅಲ್ಲ ಎಂಬುದು ಬೆಳಕಿಗೆ ಬಂದಿದೆ. ಜೊತೆಗೆ ತಾಯಿಗೆ ಹುಷಾರಿಲ್ಲವೆಂದು ಯುವತಿ ಬಳಿ 1 ಲಕ್ಷ ಹಣವನ್ನ ಪಡೆದಿದ್ದನಂತೆ. ಬಳಿಕ ತಾಯಿ ಮೃತಪಟ್ಟಿದ್ದಾರೆ ಎಂದು ಸುಳ್ಳಿನ ಕಥೆ ಕಟ್ಟಿದ್ದಾನೆ.
ಇದನ್ನೂ ಓದಿ: ಮನೆಯಿಂದ ಹೊರಹೋದ ಮಹಿಳೆ ಶವವಾಗಿ ಪತ್ತೆ; ಕಣ್ಣೀರಿನಲ್ಲಿ ಕುಟುಂಬ
ಇನ್ನು ಕೊನೆಗೆ ಸೋದರನನ್ನ ನೋಡಲು ದುಬೈಗೆ ಹೋಗಿ ಬರುತ್ತೆನೆಂದು ಫೋನ್ ಸ್ಪಿಚ್ ಆಫ್ ಮಾಡಿ, ಬಳಿಕ ಮುದಾಸಿರ್ನನ್ನ ಪತ್ತೆ ಹಚ್ಚಿದ ಯುವತಿಗೆ ಡಬ್ಬಲ್ ಶಾಕ್ ಎದುರಾಗಿತ್ತು. ಹೌದು ಅನಿರುದ್ದ್ ಹೆಸರಿನವನು ಅನಿರುದ್ದ್ ಅಲ್ಲ ಮುದಾಸಿರ್ ಅನ್ನೋದರ ಜೊತೆಗೆ ಮುದಾಸಿರ್ಗೆ ಮತ್ತೊಂದು ಮದುವೆಯಾಗಿ ಹೆಂಡತಿ ಮಕ್ಕಳು ಇದ್ದಾರೆಂಬುದು ಗೊತ್ತಾಗಿದೆ. ಕೊನೆಗೆ ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿ ಇದೀಗ ಜೈಲಿಗಟ್ಟಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Sat, 10 June 23