ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆಟೋ ಚಾಲಕನ ಕೊಲೆ, ಪಾಳು ಬಿದ್ದ ಮನೆಯ ಶೌಚಾಲಯದಲ್ಲಿ ಶವ ಪತ್ತೆ

5 ದಿನದ ಹಿಂದೆ ಆಟೋ ಸಮೇತ ಮನೆಯಿಂದ ಹೊರ ಹೋಗಿದ್ದ ಆಟೋ ಚಾಲಕ ನೊಹಾನ್ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ತಡರಾತ್ರಿ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಜನ ಪ್ರದೇಶದಲ್ಲಿ ಆಟೋ ಪತ್ತೆಯಾಗಿದ್ದು ಪಾಳು ಬಿದ್ದ ಮನೆಯ ಶೌಚಾಲಯದಲ್ಲಿ ಚಾಲಕನ ಶವ ಸಿಕ್ಕಿದೆ.

ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆಟೋ ಚಾಲಕನ ಕೊಲೆ, ಪಾಳು ಬಿದ್ದ ಮನೆಯ ಶೌಚಾಲಯದಲ್ಲಿ ಶವ ಪತ್ತೆ
ನೊಹಾನ್ ಧಾರವಾಡಕರ್

ಬೆಳಗಾವಿ: ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆಟೋ ಚಾಲಕನ ಕೊಲೆ ಮಾಡಿರುವ ಘಟನೆ ಬೆಳಗಾವಿ ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಆಟೋ ಚಾಲಕ ನೊಹಾನ್ ಧಾರವಾಡಕರ್(23) ಬರ್ಬರ ಹತ್ಯೆಯಾಗಿದೆ.

5 ದಿನದ ಹಿಂದೆ ಆಟೋ ಸಮೇತ ಮನೆಯಿಂದ ಹೊರ ಹೋಗಿದ್ದ ಆಟೋ ಚಾಲಕ ನೊಹಾನ್ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ತಡರಾತ್ರಿ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಜನ ಪ್ರದೇಶದಲ್ಲಿ ಆಟೋ ಪತ್ತೆಯಾಗಿದ್ದು ಪಾಳು ಬಿದ್ದ ಮನೆಯ ಶೌಚಾಲಯದಲ್ಲಿ ಚಾಲಕನ ಶವ ಸಿಕ್ಕಿದೆ. ಸ್ನೇಹಿತರೇ ನೊಹಾನ್‌ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪತಿಯೇ ಪತ್ನಿಯ ಕೊಂದು ಹೂತಿಟ್ಟ ಇನ್ನು ಮತ್ತೊಂದೆಡೆ ಚಿತ್ರದುರ್ಗದ ಕೋಣನೂರು ಗ್ರಾಮದಲ್ಲಿ ಪತ್ನಿ ಸುಮಾ(26) ಹತ್ಯೆಗೈದು ಶವ ಹೂತಿಟ್ಟಿದ್ದ ಆರೋಪಿ ಪತಿ ನಾರಪ್ಪ(40)ನನ್ನು ಪೊಲೀಸರು ಬಂಧಿಸಿದ್ದಾರೆ. ಭರಮಸಾಗರ ಠಾಣೆ ಪೊಲೀಸರಿಂದ ಆರೋಪಿ ಬಂಧನವಾಗಿದೆ.

ಮದ್ಯ ಸೇವನೆ ಬಿಟ್ಟು ಮನೆಗೆ ಹಣ ನೀಡುವಂತೆ ಕೇಳಿದ ಪತ್ನಿಯನ್ನು ಒನಕೆಯಿಂದ ಹೊಡೆದು ಹತ್ಯೆಗೈದು, ಶವವನ್ನು ಆರೋಪಿ ನಾರಪ್ಪ ಮನೆಯಲ್ಲೇ ಹೂತಿಟ್ಟಿದ್ದ. ಡಿಸೆಂಬರ್ 25ರ ರಾತ್ರಿ ಘಟನೆ ನಡೆದಿದ್ದು ಶವ ಮನೆಯಲ್ಲೇ ಹೂತಿಟ್ಟು ನಾಪತ್ತೆ ಆಗಿದ್ದಾಳೆಂದು ಬಿಂಬಿಸಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಇಂದಿನಿಂದ ದೇಶದಲ್ಲಿ ಕೊವಿಡ್ 19 ಲಸಿಕೆ ಬೂಸ್ಟರ್ ಡೋಸ್ ನೀಡಿಕೆ ಅಭಿಯಾನ; ಮತ್ತೆ ನೋಂದಣಿ ಬೇಕಾ? ಯಾವ ಲಸಿಕೆ? ಇಲ್ಲಿದೆ ಮಾಹಿತಿ

Click on your DTH Provider to Add TV9 Kannada