Shakti scheme from tomorrow: ಬಸ್ ಪ್ರಯಾಣಕ್ಕೆ ಹಣ ತೆರಬೇಕಿಲ್ಲ ಅಂತ ರಾಜ್ಯಾದಂತ ಮಹಿಳೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ!
ಧಾರವಾಡದ ನಿವಾಸಿಯಾಗಿರುವ ಡಾ ಯಶೋಧ (Dr Yashodha) ಹುಬ್ಬಳ್ಳಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದಾರೆ.
ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (free bus travel) ನಾಳೆಯಿಂದ ಜಾರಿಗೆ ಬರಲಿದೆ. ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiah) ಮಹತ್ವದ ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಜ್ಯದೆಲ್ಲೆಡೆ ಮಹಿಳೆಯರು ನಾಳೆಯಿಂದ ಬಸ್ ಪಯಣಕ್ಕೆ ಹಣ ವ್ಯಯಿಸಬೇಕಿಲ್ವಲ್ಲ ಅಂತ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆ ಮತ್ತು ನಗರ ಪ್ರದೇಶಗಳಲ್ಲಿರುವ ಟಿವಿ9 ವರದಿಗಾರರು ಮಹಿಳೆಯರೊಂದಿಗೆ ಮಾತಾಡಿದ ವಿಡಿಯೋಗಳನ್ನು ಕಳಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಹುಬ್ಬಳ್ಳಿಯ ದಂತವೈದ್ಯೆಯೊಬ್ಬರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ ಯೋಜನೆ ಬಗ್ಗೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಧಾರವಾಡದ ನಿವಾಸಿಯಾಗಿರುವ ಡಾ ಯಶೋಧ (Dr Yashodha) ಹುಬ್ಬಳ್ಳಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದಾರೆ. ನಾಳೆಯಿಂದ ಪ್ರಯಾಣದ ವೆಚ್ಚ ಉಳಿಯುತ್ತೆ ಅಂತ ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ

ಸುಪ್ರೀಂ ಕೋರ್ಟ್ ಗಾರ್ಡನ್ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ

ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
