ಹುಬ್ಬಳ್ಳಿ: ರಾತ್ರೋರಾತ್ರಿ ಹಳೇ ಹುಬ್ಬಳ್ಳಿ ಹೆಗ್ಗೆರಿಯ ಪಾಲಿಕೆ ಕಚೇರಿ ಆವರಣದಲ್ಲಿ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಕಚೇರಿಯ ಆವರಣದಲ್ಲಿ ಗಣಪತಿ ವಿಗ್ರಹವಿಟ್ಟು ಪೂಜೆ ಮಾಡಿದ್ದಾರೆ. ಚಿಕ್ಕ ಮಂಟಪ ನಿರ್ಮಾಣ ಮಾಡಿ ಕಚೇರಿಯ ಶೌಚಾಲಯದ ಪಕ್ಕದಲ್ಲಿ ವಿಗ್ರಹವನ್ನಿಟ್ಟು ಕಿಡಿಗೇಡಿಗಳು ಪೂಜೆ ಸಲ್ಲಿಸಿದ್ದಾರೆ. ಮಧ್ಯರಾತ್ರಿ ಕಚೇರಿಯ ಬೀಗ ಒಡೆದು ಚಿಕ್ಕ ಮಂಟಪ ಹಾಕಿ ವಿನಾಯಕನ ಮೂರ್ತಿ ಇಟ್ಟಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಈ ಘಟನೆ ನಡೆದಿದೆ.
ಮೂರ್ತಿ ತೆರವು
ಪಾಲಿಕೆ ಕಚೇರಿಯ ಆವರಣದಲ್ಲಿ ರಾತ್ರೋರಾತ್ರಿ ಇಡಲಾಗಿದ್ದ ಗಣೇಶ ಮೂರ್ತಿಯನ್ನು ತೆರವುಗೊಳಿಸಲಾಗಿದೆ. ಎಸಿಪಿ ಆರ್ಕೆ ಪಾಟೀಲ್ ನೇತೃತ್ವದಲ್ಲಿ ಮೂರ್ತಿಯನ್ನು ತೆರವು ಮಾಡಲಾಗಿದೆ. ಪಾಲಿಕೆ ಸಿಬ್ಬಂದಿ ಗಣೇಶನ ವಿಗ್ರಹವನ್ನು ಕಾರಿನಲ್ಲಿ ಹೊತ್ತುಕೊಂಡು ಹೋದರು. ಈ ರೀತಿ ದೇವರ ಮೂರ್ತಿ ಇಟ್ಟು ಪೂಜೆ ಮಾಡಿರುವವರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
300 ವರ್ಷಗಳ ಹಳೆಯ ದೈವ ಪರಿಕರಗಳು ಪತ್ತೆ
ಸಾಮಾನ್ಯವಾಗಿ ಕರಾವಳಿ ಪ್ರದೇಶ ದೈವ ಮತ್ತು ಭೂತ ಎಂಬ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಒಂದಷ್ಟು ಆಚರಣೆಗಳ ನೆಲೆಯಾಗಿದೆ. ಇಲ್ಲಿನ ಜನರು ಕೂಡ ದೇವರನ್ನು ಅಷ್ಟೇ ಭಕ್ತಿಯಿಂದ ಕಾಣುತ್ತಾರೆ. ಕೊರಗಜ್ಜನ ಮೇಲಿನ ನಂಬಿಕೆ, ಕೋಲಾ ನಡೆಸಿದರೆ ಊರಿಗೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ಇನ್ನು ಕೂಡ ಹಾಗೆ ಇದೆ, ಈ ಕಾರಣಕ್ಕೆ ಇಲ್ಲಿ ಸಂಪ್ರದಾಯ ಮತ್ತು ಆಚರಣೆಗಳು ಇನ್ನೂ ಕೂಡ ಹಾಗೆ ಇದೆ.
ಮಂಗಳೂರಿನಲ್ಲಿ ಮತ್ತೆ ಮತ್ತೆ ದೈವಗಳ ಕಾರಣಿಕ ಸಾಬೀತಾಗುತ್ತಿದೆ. ಮುಚ್ಚಿ ಹೋದ ಬಾವಿಯಲ್ಲಿ 300 ವರ್ಷಗಳ ಹಿಂದಿನ ದೈವಗಳ ಪರಿಕರ ಪತ್ತೆಯಾಗಿದ್ದು, ಇದಕ್ಕೆ ನಿದರ್ಶನ ನೀಡುವಂತಿದೆ. ಕಾಲಾಂತರದಲ್ಲಿ ಅಜೀರ್ಣಗೊಂಡಿದ್ದ ದೇವಸ್ಥಾನ ಇದೀಗ ಜೀರ್ಣೋದ್ಧಾರದ ಮೂಗಲಕ ಬೆಳಕಿಗೆ ಬಂದಿದ್ದು, ಈ ಜೀರ್ಣೋದ್ಧಾರದ ಸಂದರ್ಭದಲ್ಲಿ ದೈವ ಕೊಟ್ಟಿದ್ದ ನುಡಿ ಸತ್ಯವಾಗಿದೆ.
ಇದನ್ನೂ ಓದಿ
Published On - 12:19 pm, Thu, 14 October 21