ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ (South Western Railway) ಹುಬ್ಬಳ್ಳಿಯಿಂದ (Hubli Railway Station)-ತಂಜಾವುರಗೆ (Tanjavur Railway Station) (ಗಾಡಿ ಸಂಖ್ಯೆ 07325 ಮತ್ತು 07326) ರೈಲು ಸಂಚಾರ ಆರಂಭಿಸಲು ನಿರ್ಧಿಸಿದೆ. ರೈಲು ವಾರಕ್ಕೆ 5 ಬಾರಿ ಮಾತ್ರ ಸಂಚರಿಸಲಿದ್ದು, ಮಾರ್ಚ್ 20 ರಿಂದ ಸಂಚಾರ ಆರಂಭಾವಾಗಲಿದೆ. ಎಪ್ರಿಲ್ ತಿಂಗಳಲ್ಲಿ ದಿನಾಂಕ 3, 10, 17 ಮತ್ತು 24 ರಂದು ಹುಬ್ಬಳ್ಳಿಯಿಂದ ತಂಜಾವುರಗೆ ತೆರಳುತ್ತದೆ. ಹುಬ್ಬಳ್ಳಿ-ತಂಜಾವುರ ವೀಕ್ಲಿ ಸ್ಪೆಷಲ್ ಎಕ್ಸ್ಪ್ರೆಸ್ (ಗಾಡಿ ಸಂಖ್ಯೆ 07325) ಸೋಮವಾರ (ಮಾ.20) ರಂದು ರಾತ್ರಿ 8:25 ನಿಮಿಷಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಂಗಳವಾರ ಮಧ್ಯಾಹ್ನ 2:15ಕ್ಕೆ ತಂಜಾವುರ ತಲುಪುತ್ತದೆ.
ರೈಲು ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬಿರುರ, ಅರಸಿಕೇರೆ, ತುಮಕೂರು, ಚಿಕ್ಕಬಾಣವಾರ, ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟ, ಸೇಲಂ ಜಂಕ್ಷನ್, ಕರೂರ ಜಂಕ್ಷನ್, ತಿರುಚಿರಾಪಲ್ಲಿ ಜಂಕ್ಷನ್, ಬುದಲುರ್ ಮಾರ್ಗವಾಗಿ ತಂಜಾವುರ ತಲುಪುತ್ತದೆ.
ಹುಬ್ಬಳ್ಳಿ-ತಂಜಾವುರ ವೀಕ್ಲಿ ಸ್ಪೆಷಲ್ ಎಕ್ಸಪ್ರೆಸ್ (ಗಾಡಿ ಸಂಖ್ಯೆ 07326) ಮಂಗಳವಾರ (ಮಾ.21) ರಂದು ತಾಜಾವುರನಿಂದ ಸಾಯಂಕಾಲ 7:40ಕ್ಕೆ ಹೊರಟು ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣಕ್ಕೆ (Shree Siddaroodha Swamji Railway Station) ಬುಧವಾರ ಮಧ್ಯಾಹ್ನ 12:30ಕ್ಕೆ ತಲುಪುತ್ತದೆ. ಈ ರೈಲು ಕೂಡ ಮೇಲೆ ಹೇಳಿದ ಮಾರ್ಗವಾಗಿಯೇ ಸಂಚಿರಿಸುತ್ತದೆ. ರೈಲಿನ ಪ್ರಾಥಮಿಕ ನಿರ್ವಹಣೆ ಹುಬ್ಬಳ್ಳಿ ಮತ್ತು ರೈಲಿನ ದ್ವಿತೀಯ ನಿರ್ವಹಣೆ ತಂಜಾವೂರಿನಲ್ಲಿ ಇರುತ್ತದೆ.
ಇದನ್ನೂ ಓದಿ: ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ಪ್ಲಾಟ್ ಫಾರಂ, ಇದರ ಅನುಕೂಲಗಳೇನು?
ಈ ರೈಲು 1 ಎಸಿ 2-ಟೈರ್ ಕೋಚ್, 3 ಎಸಿ 3-ಟೈರ್ ಕೋಚ್‌ಗಳು, 9 ಸ್ಲೀಪರ್ ಕೋಚ್‌ಗಳು ಮತ್ತು ವಿಕಲಾಂಗ ವಿಭಾಗವನ್ನು ಒಳಗೊಂಡಿರುವ 20 ಕೋಚ್‌ಗಳನ್ನು ಹೊಂದಿದೆ. ಈ ಸಂಚಾರ ಉತ್ತಮ ಪ್ರತಿಕ್ರಿಯೆಯನ್ನು ಪಡೆದರೆ ಸೇವೆಯನ್ನು ಕ್ರಮಬದ್ಧಗೊಳಿಸಲು ಚಿಂತನೆ ನಡೆಸಿದೆ. ಇದಕ್ಕಾಗಿ ಬುಕ್ಕಿಂಗ್‌ಗಳು ಈಗಾಗಲೇ ತೆರೆದಿವೆ.
ನೈಋತ್ಯ ರೈಲ್ವೆ ಬೇಸಿಗೆ ಕಾಲಕ್ಕೆ ವಿಶೇಷ ರೈಲೊಂದು ಬಿಡಲು ನಿರ್ಧರಿಸಿದೆ. ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮಿಜಿ ರೈಲು ನಿಲ್ದಾಣದಿಂದ ಬನಾರಸ್ಗೆ ವಿಶೇಷ ರೈಲನ್ನು ಬಿಟ್ಟಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ನಿಯಂತ್ರಿಸುವ ನಿಟ್ಟಿನಲ್ಲಿ ಈ ವಿಶೇಷ ರೈಲನ್ನು ಬಿಡಲಾಗಿದೆ.
ಗಾಡಿ ಸಂಖ್ಯೆ (07347) ಮಾರ್ಚ್ 27 ರಂದು ರಾತ್ರಿ 8:30ಕ್ಕೆ ಹುಬ್ಬಳ್ಳಿಯಿಂದ ಹೊರಟು ಬನಾರಸ್ ಅನ್ನು ಮಾರ್ಚ್ 29 ರಂದು ಬೆಳಿಗ್ಗೆ 9:10 ಕ್ಕೆ ತಲುಪುತ್ತದೆ. ಗಾಡಿ ಸಂಖ್ಯೆ (07348) ಬನಾರಸ್ನಿಂದ ಮಾರ್ಚ್ 29 ರಂದು ರಾತ್ರಿ 8:40 ಕ್ಕೆ ಹೊರಟು, ಮಾರ್ಚ್ 31 ರಂದು ಬೆಳಿಗ್ಗೆ 11:45ಕ್ಕೆ ಹುಬ್ಬಳ್ಳಿ ತಲಪುತ್ತದೆ.
ಈ ರೈಲು ಗದಗ, ಬದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರಸ್ತೆ, ವಿಜಯಪುರ, ಇಂಡಿ ರಸ್ತೆ, ಸೊಲ್ಲಾಪುರ. ದಾವುಂದ, ಅಹಮೆದಾನಗರ, ಕೊಪಅರಂಗಾವ, ಮಾನಮದ್, ಬುಸವಾಲ್, ಖಂಡವಾ, ಇಟಸ್ರಿ, ಪಿಪ್ರರಿಯಾ, ಜಲಬಾಪುರ, ಕತನಿ, ಮೈಹಾರ್, ಸತ್ನಾ, ಮಾನಿಕಪುರ, ಪ್ರಯಾಗರಾಜ ಚೌಕ್ ಜಂಕ್ಷನ್ ಮೂಲಕ ವಾರಣಾಸಿ ತಲಪುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:49 am, Fri, 17 March 23