ದಸರಾ ಹಬ್ಬದ ನಿಮಿತ್ತ ಮೈಸೂರಿನಿಂದ ಹುಬ್ಬಳ್ಳಿ, ಬೆಳಗಾವಿ ಮತ್ತು ಬೆಂಗಳೂರಿಗೆ ವಿಶೇಷ ರೈಲು

|

Updated on: Oct 09, 2024 | 7:45 AM

ದಸರಾ ಹಬ್ಬ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ವಲಯ ನಿರ್ಧರಿಸಿದೆ. ಹಾಗಿದ್ದರೆ ಯಾವ ಯಾವ ಊರುಗಳಿಂದ ವಿಶೇಷ ರೈಲುಗಳು ಸಂಚರಿಸುತ್ತವೆ ಎಂಬ ಮಾಹಿತಿ ಇಲ್ಲಿದೆ.

ದಸರಾ ಹಬ್ಬದ ನಿಮಿತ್ತ ಮೈಸೂರಿನಿಂದ ಹುಬ್ಬಳ್ಳಿ, ಬೆಳಗಾವಿ ಮತ್ತು ಬೆಂಗಳೂರಿಗೆ ವಿಶೇಷ ರೈಲು
ರೈಲು
Follow us on

ಹುಬ್ಬಳ್ಳಿ, ಅಕ್ಟೋಬರ್​ 09: ನಾಡಿನ ಎಲ್ಲಡೆ ನವರಾತ್ರಿ (Navaratri) ಹಬ್ಬದ ಸಡಗರ ಮನೆ ಮಾಡಿದೆ. ನಾಡಹಬ್ಬ ದಸರಾ (Dasara) ಅನ್ನು ಮೈಸೂರಿನಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮೈಸೂರು ದಸರಾ (Mysore Dasara) ನೋಡಲು ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಿಂದಲೂ ಜನರು ಆಗಮಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೈಸೂರಿಗೆ ಪ್ರಯಾಣ ಮಾಡುವುದರಿಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಲಿದೆ.

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ವಲಯ ನಿರ್ಧರಿಸಿದೆ. ಹಾಗಿದ್ದರೆ ಯಾವ ಯಾವ ಊರುಗಳಿಂದ ವಿಶೇಷ ರೈಲುಗಳು ಸಂಚರಿಸುತ್ತವೆ ಎಂಬ ಮಾಹಿತಿ ಇಲ್ಲಿದೆ.

ವಿಶೇಷ ರೈಲುಗಳು

  1. ರೈಲು ಸಂಖ್ಯೆ 07305: ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲು ಅ.10 ರಂದು ಹುಬ್ಬಳ್ಳಿಯಿಂದ ಬೆಳಗ್ಗೆ 11:30ಕ್ಕೆ ಹೊರಟು ಅದೇ ದಿನ ರಾತ್ರಿ 7:40ಕ್ಕೆ ಯಶವಂತಪುರ ತಲುಪಲಿದೆ.
  2. ರೈಲು ಸಂಖ್ಯೆ 07306: ಯಶವಂತಪುರ-ಬೆಳಗಾವಿ ವಿಶೇಷ ರೈಲು ಅ.10 ರಂದು ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 8:55ಕ್ಕೆ ಹೊರಟು ಮರುದಿನ ಬೆಳಗ್ಗೆ 8:15ಕ್ಕೆ ಬೆಳಗಾವಿ ತಲುಪಲಿದೆ.
  3. ರೈಲು ಸಂಖ್ಯೆ 07307: ಬೆಳಗಾವಿ-ಮೈಸೂರು ವಿಶೇಷ ಎಕ್ಸಪ್ರೆಸ್​​​ ರೈಲು ಅ.11 ರಂದು ಬೆಳಗಾವಿಯಿಂದ ಸಂಜೆ 5:30ಕ್ಕೆ ಹೊರಟು ಮರುದಿನ ಬೆಳಗ್ಗೆ 6:25ಕ್ಕೆ ಮೈಸೂರು ತಲುಪಲಿದೆ.
  4. ರೈಲು ಸಂಖ್ಯೆ 07308: ಮೈಸೂರು-ಎಸ್​ಎಸ್​ಎಸ್​ ಹುಬ್ಬಳ್ಳಿ ವಿಶೇಷ ಎಕ್ಸಪ್ರೆಸ್​ ರೈಲು ಅ.12 ರಂದು ರಾತ್ರಿ 10:30ಕ್ಕೆ ಮೈಸೂರಿನಿಂದ ಹೊರಟು ಮರುದಿನ ಬೆಳಗ್ಗೆ 7:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.
  5. ರೈಲು ಸಂಖ್ಯೆ 06279: ಮೈಸೂರು-ಕೆಎಸ್‌ಆರ್ ಬೆಂಗಳೂರು ವಿಶೇಷ ರೈಲು ಅ.9, 10, 11, 12 ಮತ್ತು 13 ರಂದು ಮೈಸೂರಿನಿಂದ ರಾತ್ರಿ 11:15ಕ್ಕೆ ಹೊರಟು ತಡರಾತ್ರಿ 2:30ಕ್ಕೆ ಕೆಎಸ್​​ಆರ್​ ಬೆಂಗಳೂರು ತಲುಪಲಿದೆ.
  6. ರೈಲು ಸಂಖ್ಯೆ 06280: ಕೆಎಸ್​ಆರ್​ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅ. 10, 11, 12, 13 ಮತ್ತು 14 ರಂದು ಕೆಎಸ್​ಆರ್​ ಬೆಂಗಳೂರಿನಿಂದ ನಸುಕಿನ ಜಾವ 3 ಗಂಟೆಗೆ ಹೊರಟು ಅದೇ ದಿನ ಬೆಳಗ್ಗೆ 6:15ಕ್ಕೆ ಮೈಸೂರು ತಲುಪಲಿದೆ.
  7. ರೈಲು ಸಂಖ್ಯೆ 06281: ಮೈಸೂರು-ಚಾಮರಾಜನಗರ ಕಾಯ್ದಿರಿಸದ ವಿಶೇಷ ರೈಲು ಅ.9, 10, 11, 12 ಮತ್ತು 13 ರಂದು ಮೈಸೂರಿನಿಂದ ರಾತ್ರಿ 11:30ಕ್ಕೆ ಹೊರಟು ಚಾಮರಾಜನಗರವನ್ನು ಮಧ್ಯರಾತ್ರಿ 1:30ಕ್ಕೆ ತಲುಪಲಿದೆ.
  8. ರೈಲು ಸಂಖ್ಯೆ 06282: ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅ. 10, 11, 12, 13 ಮತ್ತು 14 ರಂದು ಚಾಮರಾಜನಗರದಿಂದ ನಸುಕಿನ ಜಾವ 4:15ಕ್ಕೆ ಹೊರಟು ಅದೇ ದಿನ ಬೆಳಗ್ಗೆ 6 ಗಂಟೆಗೆ ಮೈಸೂರು ತಲುಪಲಿದೆ.
  9. ರೈಲು ಸಂಖ್ಯೆ 06283: ಮೈಸೂರು-ಚಾಮರಾಜನಗರ ವಿಶೇಷ ರೈಲು ಅ.12 ರಂದು ಮೈಸೂರಿನಿಂದ ರಾತ್ರಿ 9:45ಕ್ಕೆ ಮೈಸೂರಿನಿಂದ ಹೊರಟು ಮಧ್ಯರಾತ್ರಿ 12:40ಕ್ಕೆ ಚಾಮರಾಜನಗರ ತಲುಪಲಿದೆ.
  10. ರೈಲು ಸಂಖ್ಯೆ 06284: ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅ.13 ರಂದು ಮಧ್ಯರಾತ್ರಿ 1:50ಕ್ಕೆ ಚಾಮರಾಜನಗರದಿಂದ ಹೊರಟು ಅದೇ ದಿನ ನಸುಕಿನ ಜಾವ 3:50ಕ್ಕೆ ಮೈಸೂರು ತಲುಪಲಿದೆ.
  11. ರೈಲು ಸಂಖ್ಯೆ 06285: ಕೆಎಸ್‌ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅ. 9, 10, 11, 12 ಮತ್ತು 13, 2024 ರಂದು ಕೆಎಸ್‌ಆರ್ ಬೆಂಗಳೂರಿನಿಂದ ಮಧ್ಯಾಹ್ನ 12:15 ಗಂಟೆಗೆ ಹೊರಟು, ಅದೇ ದಿನ ಸಂಜೆ 3:20ಕ್ಕೆ ಮೈಸೂರು ತಲುಪಲಿದೆ.
  12. ರೈಲು ಸಂಖ್ಯೆ 06286: ಮೈಸೂರು-ಕೆಎಸ್‌ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು ಅ. 9, 10, 11, 12 ಮತ್ತು 13, 2024 ರಂದು ಮೈಸೂರಿನಿಂದ 3:30ಕ್ಕೆ ಹೊರಟು ಅದೇ ದಿನ ರಾತ್ರಿ 7 ಗಂಟೆಗೆ ಮೈಸೂರು ತಲುಪಲಿದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನೈಋತ್ಯ ರೈಲ್ವೆ ಸಹಾಯವಾಣಿ ಸಂಖ್ಯೆ 139ಗೆ ಸಂಪರ್ಕಿಸಿ ಅಥವಾ ವೆಬ್ ಸೈಟ್ www.enquiry.indianrail.gov.in ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:42 am, Wed, 9 October 24