ಲವ್​ ಜಿಹಾದ್​ ತಡೆಗೆ ಶ್ರೀರಾಮಸೇನೆ ಸಹಾಯವಾಣಿ; ಎರಡನೇ ವಾರಕ್ಕೆ ಬಂದ್ವು 600ಕ್ಕೂ ಹೆಚ್ಚು ಫೋನ್ ಕರೆಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 11, 2024 | 6:25 PM

ಶ್ರೀರಾಮಸೇನೆ ಹುಬ್ಬಳ್ಳಿಯ ನೇಹಾ ಹತ್ಯೆ ಬಳಿಕ ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳ ರಕ್ಷಣೆಯ ವಿಷಯ ದೊಡ್ಡ ಸದ್ದು ಮಾಡಿತ್ತು. ನೇಹಾ ಕೊಲೆ ಅಕ್ಷರಶಃ ಲವ್ ಜಿಹಾದ್ ಎಂದೇ ಆರೋಪಿಸಿದ್ದ ಶ್ರೀರಾಮ ಸೇನೆ. ಇಂತಹ ಪ್ರೇಮಪಾಶದಲ್ಲಿ ಸಿಲುಕಿರುವ ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿಯೇ ಇತ್ತೀಚೆಗೆ ಸಹಾಯವಾಣಿ ಸಹ ಆರಂಭಿಸಿದೆ. ಈ ಸಹಾಯವಾಣಿಗೆ ಆರಂಭದಲ್ಲಿಯೇ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳು ಬಂದಿವೆ. ಆ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.

ಲವ್​ ಜಿಹಾದ್​ ತಡೆಗೆ ಶ್ರೀರಾಮಸೇನೆ ಸಹಾಯವಾಣಿ; ಎರಡನೇ ವಾರಕ್ಕೆ ಬಂದ್ವು 600ಕ್ಕೂ ಹೆಚ್ಚು ಫೋನ್ ಕರೆಗಳು
ಶ್ರೀರಾಮಸೇನೆ ಸಹಾಯವಾಣಿಗೆ ಎರಡನೇ ವಾರಕ್ಕೆ ಬಂದ್ವು 600 ಕರೆಗಳು
Follow us on

ಧಾರವಾಡ, ಜೂ.11: ಹುಬ್ಬಳ್ಳಿಯ ನೇಹಾ ಹಿರೇಮಠ ತನ್ನ ಪ್ರೀತಿ ಒಪ್ಪುತ್ತಿಲ್ಲ ನಿರಾಕರಿಸುತ್ತಿದ್ದಾಳೆ ಎಂದು ಫಯಾಜ್ ಎಂಬಾತ ಆಕೆಯ ಕಾಲೇಜ್ ಕ್ಯಾಂಪಸ್​ನಲ್ಲಿಯೇ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ (Murder) ಮಾಡಿದ ಸುದ್ದಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿತ್ತು. ಈ ಪ್ರಕರಣದ ಬೆನ್ನಲ್ಲಿಯೇ ರಾಜ್ಯದಲ್ಲಿ ಅವ್ಯಾಹತವಾಗಿ ಲವ್ ಜಿಹಾದ್ ನಡೀಯುತ್ತಾ ಇದೆ ಎಂಬ ಶ್ರೀರಾಮಸೇನೆ(Sri Ram Sena) ಆರೋಪಕ್ಕೂ ಪುಷ್ಠಿ ಬಂದಂತೆ ಆಗಿತ್ತು. ಹೀಗಾಗಿ ಇದಕ್ಕೊಂದು ತಾರ್ಕಿಕ ಅಂತ್ಯ ಹೇಳಲೇಬೇಕು, ಲವ್ ಜಿಹಾದ್ ವಿರುದ್ಧ ಹೇಗಾದರೂ ಹೋರಾಟ ಮಾಡಲೇಬೇಕು ಜೊತೆಗೆ ಪ್ರೀತಿಯ ಬಲೆಗೆ ಸಿಲುಕಿ ಬಳಿಕ ತಮ್ಮ ಜೀವವನ್ನೇ ಕಳೆದುಕೊಳ್ಳೋ ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕು ಎಂದು ವಿಚಾರ ಮಾಡಿದ ಶ್ರೀರಾಮಸೇನೆ. ಇದೇ ಮೇ 29ರಂದು ಸಹಾಯವಾಣಿ ಆರಂಭಿಸಿತ್ತು.

ಎರಡನೇ ವಾರದಲ್ಲಿ ಬಂದ್ವು 600 ಕ್ಕೂ ಹೆಚ್ಚು ಕರೆಗಳು

ಸಂಕಷ್ಟದಲ್ಲಿರುವ ಹಿಂದು ಹೆಣ್ಣುಮಕ್ಕಳು ನಮ್ಮನ್ನು ಸಂಪರ್ಕಿಸಿದರೆ ಅಗತ್ಯ ಸಹಾಯ ಮಾಡುತ್ತೇವೆ, ರಕ್ಷಣೆಗೆ ನಿಲ್ಲುತ್ತೇವೆ ಅಂತಾನೂ ಶ್ರೀರಾಮಸೇನೆ ಹೇಳಿತ್ತು. ಹೀಗಾಗಿ ಸಹಾಯವಾಣಿ ಆರಂಭವಾಗುತ್ತಿದ್ದಂತೆಯೇ ಎರಡನೇ ವಾರದಲ್ಲಿ ಹಿಂದೂ ಹೆಣ್ಣುಮಕ್ಕಳಿಂದ 600ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿವೆಯಂತೆ. ‘ಯಾವಾಗ ಸಹಾಯವಾಣಿ ಆರಂಭವಾಯಿತೋ ಆಗ ಅನೇಕ ಹೆಣ್ಣುಮಕ್ಕಳಿಗೆ ತಮ್ಮ ದುಃಖ, ನೋವು ಕೇಳೋರು ಒಬ್ಬರು ಇದಾರಲ್ಲ ಎನ್ನುವ ಭಾವನೆ ಬಂದಿದೆಯಂತೆ.

ಇದನ್ನೂ ಓದಿ:ಲವ್ ಜಿಹಾದ್​​ ತಡೆಗೆ ಶ್ರೀರಾಮಸೇನೆಯಿಂದ ರಾಜ್ಯದ 6 ಕಡೆ ಸಹಾಯವಾಣಿ ಆರಂಭಿಸಲು ನಿರ್ಧಾರ

ಹೀಗಾಗಿ ಈ 600 ಫೋನ್ ಕರೆಗಳನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ 100ಕ್ಕೂ ಮಹಿಳೆಯರು ಈಗಾಗಲೇ ಲವ್ ಜಿಹಾದ್ ಸಂಕಷ್ಟಕ್ಕೆ ಸಿಲುಕಿದವರಾಗಿದ್ದಾರಂತೆ. ಅದರಲ್ಲಿ ಬಹುತೇಕರದ್ದು ವಿಚಿತ್ರ ಹಾಗೂ ಯಾರ ಮುಂದೆಯೂ ಹೇಳಿಕೊಳ್ಳಲಾಗದ ಘಟನೆಗಳಿವೆಯಂತೆ. ಈ ಮಹಿಳೆಯರಿಗೆ ಎಲ್ಲ ನೆರವು ನೀಡುವುದಕ್ಕಾಗಿಯೇ ಶ್ರೀರಾಮ ಸೇನೆ ವಿಶೇಷ ತಂಡ ಈಗ ಸಜ್ಜಾಗುತ್ತಿದೆ. ಕಾನೂನಾತ್ಮಕ ತೊಡಕುಗಳಿದ್ದಲ್ಲಿ ಅವುಗಳನ್ನು ಕಾನೂನಾತ್ಮಕವಾಗಿಯೇ ಬಗೆ ಹರಿಸಲು ನಿರ್ಧರಿಸಿದ್ದಾರಂತೆ. ಈಗಾಗಲೇ 15 ಪ್ರಕರಣಗಳನ್ನು ತಮ್ಮ ಮಟ್ಟದಲ್ಲಿಯೇ ಇತ್ಯರ್ಥ ಸಹ ಮಾಡಿದ್ದಾರೆ.

ಇದೇ ಜೂನ್ 12ರಂದು ಧಾರವಾಡದಲ್ಲಿ ತ್ರಿಶೂಲ್ ದೀಕ್ಷಾ ಅಭಿಯಾನ ನಡೆಯಲಿದ್ದು, ಅಭಿಯಾನದ ಬಳಿಕ ಈ ಸಹಾಯವಾಣಿಗೆ ಬಂದ ಕರೆಗಳ ಇತ್ಯರ್ಥ ಕಾರ್ಯದಲ್ಲಿ ಶ್ರೀರಾಮ ಸೇನೆ ತೊಡಗಲಿದೆ. ಒಟ್ಟಾರೆಯಾಗಿ ಇಷ್ಟು ದಿನ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುತ್ತ ಬಂದಿದ್ದ ಶ್ರೀರಾಮ ಸೇನೆ ಈಗ ನೇರವಾಗಿಯೇ ಸಹಾಯವಾಣಿ ಮೂಲಕ ಲವ್ ಜಿಹಾದ್ ವಿರುದ್ಧ ಸಮರಕ್ಕೆ ನಿಂತಿದ್ದು, ಮುಂದೆ ಹೇಗೆಲ್ಲ‌ ಇದು ಪರಿಣಾಮಕಾರಿಯಾಗಿ ಕಾರ್ಯ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ