ದುಬೈನಿಂದ ಬಂದ ಒಂದೇ ವಾರದಲ್ಲಿ ಕೊಲೆ; ಅಸ್ತಿಪಂಜರದಿಂದಲೇ ಹತ್ಯೆಯ ಆರೋಪಿಗಳನ್ನ ಪತ್ತೆ ಹಚ್ಚಿದ ಪೊಲೀಸರು

ನಾಲ್ಕು ಜನ ಹೆಣ್ಣುಮಕ್ಕಳ ಪೈಕಿ ಆತನೊಬ್ಬನೆ ಗಂಡು ಮಗ. ಮನೆಯಲ್ಲಿರುವ ಬಡತನ ದೂರವಾಗಿಸಲು ದೂರದ ದುಬೈ ದೇಶಕ್ಕೆ ಕೆಲಸಕ್ಕೆಂದು ಹೋಗಿದ್ದ. ಎರಡು ವರ್ಷ ಕೆಲಸ ಮಾಡಿ ಎರಡು ತಿಂಗಳು ರಜೆಗೆಂದು ಊರಿಗೆ ಬಂದಿದ್ದ. ಊರಿಗೆ ಬಂದು ಒಂದೇ ವಾರದಲ್ಲಿ, ಸ್ನೇಹಿತರಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾನೆ. ಕೊಲೆಯಾದ ವ್ಯಕ್ತಿಯ ಅಸ್ತಿ ಪಂಜರ ಮಾತ್ರ ಸಿಕ್ಕಿದ್ದು, ಅದೇ ಅಸ್ತಿಪಂಜರದಿಲೇ ಕೊಲೆ ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ದುಬೈನಿಂದ ಬಂದ ಒಂದೇ ವಾರದಲ್ಲಿ ಕೊಲೆ; ಅಸ್ತಿಪಂಜರದಿಂದಲೇ ಹತ್ಯೆಯ ಆರೋಪಿಗಳನ್ನ ಪತ್ತೆ ಹಚ್ಚಿದ ಪೊಲೀಸರು
ಕೊಲೆಯಾದ ಯುವಕ, ಎಸ್ಪಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 11, 2024 | 4:25 PM

ಬೀದರ್​, ಜೂ.11: ಯುವಕನೊಬ್ಬ ಸ್ನೇಹಿತರಿಂದಲೇ ಬರ್ಬರವಾಗಿ ಕೊಲೆಯಾದ ಘಟನೆಗೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಅಸ್ತಿಪಂಜರದಿಲೇ(skeleton)ಹತ್ಯೆಯ ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಹೌದು, 2024 ಏಪ್ರಿಲ್ 26 ರಂದು ದುಬೈ ದೇಶಕ್ಕೆ ಕೆಲಸಕ್ಕೆಂದು ಹೋಗಿದ್ದ ಶಿವಾಜಿ ಬಾಬುರಾವ್ ಅಲ್ಲೂರೆ ಎಂಬಾತ ತನ್ನ ಹುಟ್ಟೂರು ಬೀದರ್ ಜಿಲ್ಲೆಯ ಹುಮ್ನಾಬಾದ್ (Humnabad)ತಾಲೂಕಿನ ಸಕ್ಕರಂಜ್ ವಾಡಿಗೆ ಎರಡು ತಿಂಗಳ ರಜೆಗೆಂದು ಬಂದಿದ್ದ. ಎರಡು ವರ್ಷದ ಬಳಿಕ ಮಗ ಮನೆಗೆ ಬಂದಿದ್ದಾನೆ ಎಂದು ತಾಯಿ ರುಕ್ಮಿಣಿಯ ಖುಷಿ ಕೂಡ ಹೆಚ್ಚಾಗಿತ್ತು. ಇನ್ನು ಮದುವೆಯಾಗಿ ಗಂಡನಮನೆಗೆ ಹೋಗಿದ್ದ ನಾಲ್ಕು ಜನ ಅಕ್ಕ-ತಂಗಿಯರು ಸಹೋದರನನ್ನ ನೋಡಲು ಮನೆಗ ಬಂದಿದ್ದರು.

ವಾರಗಳ ಕಾಲ ಎಲ್ಲರೂ ತವರು ಮನೆಯಲ್ಲಿಯೇ ಖಷಿಯಾಗಿ ಇದ್ದರು. ಕಳೆದ ಮೇ. 3 ರಂದು ತಂಗಿಯ ಮಗುವಿನ ತೊಟ್ಟಿಲು ಕಾರ್ಯಕ್ರಮವನ್ನ ತನ್ನ ಮನೆಯಲ್ಲಿಯೇ ಅದ್ದೂರಿಯಾಗಿಯೇ ಅಮ್ಮ, ಅಕ್ಕ-ತಂಗಿಯರು ಹಾಗೂ ಭಾವವಂದಿರ ಜೊತೆಗೆ ಶಿವಾಜಿ ತೊಟ್ಟಿಲು ಕಾರ್ಯಕ್ರಮ ನೇರವೇರಿಸಿದ್ದ. ಎಲ್ಲರೂ ಕೂಷಿಯಿಂದ ಇರುವಾಗಲೇ ಅವತ್ತೆ ಮೇ 3 ರಂದು ಶಿವಾಜಿ ಅಲ್ಲೂರೆ ಕಾಣೆಯಾಗಿದ್ದ. ಶಿವಾಜಿ ಈಗ ಬರುತ್ತಾನೆ, ಆಗ ಬರುತ್ತಾನೆಂದು ಮನೆಯವರೆಲ್ಲರೂ ಕಾಯ್ದರು ಕೂಡ ಶಿವಾಜಿ ಅಲ್ಲೂರೆ ಬರಲೇ ಇಲ್ಲ. ಎಲ್ಲಿಯಾದರೂ ಸ್ನೇಹಿತರ ಜೊತೆಗೆ ಹೋಗಿರಬಹುದೆಂದು ಸುಮ್ಮನಾದ ಮನೆಯವರು ಮುಂಜಾನೆ ಹತ್ತು ಗಂಟೆಯಾದರೂ ಬಾರದೆ ಹೋದಾಗಿ ಹಳ್ಳಖೇಡ್ ಪೊಲೀಸ್ ಠಾಣೆಯಲ್ಲಿ ಮಿಸಿಂಗ್ ಕೇಸ್​ನ್ನು ಶಿವಾಜಿಯ ತಾಯಿ ರುಕ್ಮಿಣಿ ಕೊಡುತ್ತಾರೆ.

ಇದನ್ನೂ ಓದಿ:ಅಂಜಲಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಕೊಲೆಯಲ್ಲಿ ನೇಹಾ ತಂದೆ ನಿರಂಜನ ಆಪ್ತ ಸಹಾಯಕನ ಕೈವಾಡ ಆರೋಪ

ದೂರು ಕೊಟ್ಟು ಸುಮ್ಮನಾಗದೆ ಎಲ್ಲಾ ಕಡೆಗೂ ಹುಡುಕಾಡಲು ಶುರು ಮಾಡಿದ್ದಾರೆ. ಒಂದಲ್ಲ, ಎರಡಲ್ಲ, ಒಂದು ವಾರ ಕಳೆದರೂ ಕೂಡ ಶಿವಾಜಿ ಎಲ್ಲಿ ಇದ್ದಾನೆಂದು ಮನೆಯವರಿಗೆ ಗೊತ್ತಾಗಿಲ್ಲ. ಇತ್ತ ಪೊಲೀಸರು ಕೂಡ ಲೋಕಸಭಾ ಚುನಾವಣೆ ಇರುವ ಕಾರಣಕ್ಕೆ ಈ ಮಿಸಿಂಗ್ ಕೇಸ್ ಬಗ್ಗೆ ಅಷ್ಟೇನೋ ತಲೆಕೆಡಿಸಿಕೊಳ್ಳಲಿಲ್ಲ. ನಂತರ ಮೇ 3 ರಂದು ಕಾಣಿಯಾಗಿದ್ದ ಶಿವಾಜೀ ಅಲ್ಲೂರೆ (28) ಮೇ 12 ರಂದು ಸಕ್ಕರಗಂಜ್ ವಾಡಿ ಗ್ರಾಮದ ಹೊರವಲಯದಲ್ಲಿ ರೇಲ್ವೇ ಸೇತುವೆ ಬಳಿ ಒಂದು ಮನಷ್ಯನ ಅಸ್ತಿ ಪಂಜರ್ ಇದೆ ಎಂದು ರೈತನೊರ್ವನಿಗೆ ಗೊತ್ತಾಗಿದೆ. ಕೂಡಲೇ ಅಲ್ಲೂರೆ ಕುಟುಂಬಕ್ಕೂ ಕೂಡ ಈ ಸುದ್ದಿ ಗೊತ್ತಾಗಿದೆ.

ಮೃತರ ಕುಟುಂಬ

ಗ್ರಾಮದ ಜನರು ಸಮೇತ ಶಿವಾಜಿ ಕುಟುಂಬವೂ ಬಿದ್ದಿರುವ ಅಸ್ತಿ ಪಂಜರವನ್ನು ನೋಡಿದ್ದಾರೆ.ಇದು ಕಾಣಿಯಾಗಿದ್ದ ಶಿವಾಜಿಯದ್ದೆ ಇರಬೇಕು ಎಂದು ಅನಿಸಿದೆ. ಈ ಅಸ್ತಿ ಪಂಜರವನ್ನ ನಾಯಿಗಳು ಎಳೆದುಕೊಂಡು ಬಂದು ಇಲ್ಲಿ ಬಿಟ್ಟಿದೆ. ಹೀಗಾಗಿ ಗ್ರಾಮಸ್ಥರು ಎಲ್ಲಿ ಕೊಲೆಯಾಗಿದೆ ಆ ಜಾಗವನ್ನ ಹುಡುಕಾಡಿದಾಗಿ ಈ ಅಸ್ತಿ ಪಂಜರ ಬಿದ್ದಿದ್ದ 50 ಅಡಿಯಷ್ಟು ದೂರದಲ್ಲಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು. ಅಲ್ಲಿ ಅರ್ದಂಬರ್ದವಾಗಿ ಸುಟ್ಟಿದ್ದ ಬಟ್ಟೆಗಳು, ಉಮೇನ್ ದೇಶದ ಕರೆನ್ಸಿಗಳು, ಅರ್ಧ ಸುಟ್ಟಿದ್ದ ಸ್ಥಿತಿಯಲ್ಲಿ ಸಿಕ್ಕಿವೆ. ಹೀಗಾಗಿ ಈ ಅಸ್ತಿ ಪಂಜರ ಕಾಣಿಯಾಗಿದ್ದ ಶಿವಾಜಿ ಅಲ್ಲೂರೆನದ್ದೆ ಎಂದು ಕುಟುಂಬಸ್ಥರಿಗೆ ಗೊತ್ತಾಗಿ ವಿಷವನ್ನ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ವ್ಯಕ್ತಿಯ ಕೊಲೆ; ದರ್ಶನ್ ಅರೆಸ್ಟ್

ಸ್ನೇಹಿತರೆ ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆದು ಕೊಲೆ

ಚುನಾವಣೆ ಕೆಲಸದ ಒತ್ತಡದ ನಡುವೆಯೂ ತಕ್ಷಣವೇ ಸ್ಥಳಕ್ಕೆ ಬಂದ ಪೋಲೀಸರು ಶ್ವಾನದಳ, ಬೆರಳಚ್ಚು ತಜ್ಞರು, ವಿಧಿವಿಜ್ಜಾನ ತಂಡ ಸ್ಥಳಕ್ಕೆ ಬಂದು ಪರೀಶಿಲನೆ ನಡೆಸಿದಾಗ ಶಿವಾಜಿಯನ್ನ ಆತನ ಬಾಲ್ಯದ ಸ್ನೇಹಿತರೆ ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವುದು ಬೆಳಕಿಗೆ ಬರುತ್ತದೆ. ಈ ಕೊಲೆಗೆ ಕಾರಣ ನೋಡುವುದಾದರೆ, ಬಸವರಾಜ್ ವಗ್ಗೆನೂರು ಎಂಬಾತ ಹಾಗೂ ಶಿವಾಜಿ ಅಲ್ಲೂರೆ ಇಬ್ಬರು ಕೂಡ ಬಾಲ್ಯದ ಗೆಳೆಯರೆ, ಒಂದೆ ಜಾತಿಯವರಾಗಿದ್ದರಿಂದ ಸಲುಗೆ ಕೂಡಾ ಹೆಚ್ಚಾಗಿತ್ತು. ಒಬ್ಬರ ಮನೆಗೊಬ್ಬರು ಬಂದು ಹೋಗಿ ಮಾಡಿಕೊಂಡಿದ್ದು ಚನ್ನಾಗಿಯೇ ಇದ್ದರು.

ಈ ವೇಳೆ ಶಿವಾಜಿ ದುಬೈನಲ್ಲಿದ್ದ ಸಮಯದಲ್ಲಿಯೇ ಈತನ ಸ್ನೇಹಿತ ಲಾರಿ ಚಾಲಕ ಬಸವರಾಜ್ ವಗ್ಗೆನೂರ ಹೆಂಡತಿ ಪ್ರೀಯಾಯೊಳಂದಿಗೆ ಫೋನ್​ನಲ್ಲಿ ಮಾತೋಡದನ್ನ ಶುರುಮಾಡಿದ್ದ. ಗಂಡ ಕೆಲಸಕ್ಕೆ ಹೋದ ನಂತರ ಪ್ರೀಯಾ ಶಿವಾಜಿ ಅಲ್ಲೂರೆ ಜೊತೆಗೆ ಗಂಟೆಗಟ್ಟಲೇ ಫೋನ್​ನಲ್ಲಿ ಮಾತನಾಡುತ್ತಿದ್ದಳು. ಈ ವಿಚಾರ ಲಾರಿ ಚಾಲಕ ಶಿವಾಜಿಯ ಸ್ನೇಹಿತ ಬಸವರಾಜ್ ವಗ್ಗೆನೂರ್​ಗೆ ನನ್ನ ಹೆಂಡತಿ ಯಾರದ್ದೋ ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಾಳೆಂದು ಸಂಸಯ ಬಂದಿದೆ. ಆದರೆ. ತನ್ನ ಬಾಲ್ಯದ ಸ್ನೇಹಿತ ಶಿವಾಜಿ ಜೊತೆಗೆ ಮಾತನಾಡುತ್ತಾಳೆಂದು ಆತನಿಗೆ ಗೊತ್ತಾಗಿಲ್ಲ.

ಎರಡು ವರ್ಷ ಕಳೆದ ಬಳಿಗೆ ದೂಬೈನಲ್ಲಿದ್ದ ಶಿವಾಜಿ ಅಲ್ಲೂರೆ ತನ್ನ ಹುಟ್ಟೂರಿಗೆ ಬಂದಿದ್ದಾನೆ. ಊರಿಗೆ ಬಂದ ಮರುದಿನವೇ ರಾತ್ರಿ 11 ಗಂಟೆಯ ಸುಮಾರಿಗೆ ತನ್ನ ಸ್ನೇಹಿತ ಬಸವರಾಜ್ ವಗ್ಗೆನೂರ್ ನ ಹೆಂಡತಿಗೆ ಕಾಲ್ ಮಾಡಿ ಮಾತನಾಡಿದ್ದಾನೆ. ತನ್ನ ಹೆಂಡತಿ ರಾತ್ರಿ ವೇಳೆಯಲ್ಲಿ ಯಾರ ಜೊತೆಗೆ ಮಾತನಾಡುತ್ತಿದ್ದಾಳೆಂದು ತನ್ನ ಹೆಂಡತಿ ಪೋನ್ ಕಟ್ ಮಾಡಿದ ನಂತರ ಹೋಗಿ ನೋಡಿದಾಗ ತನ್ನ ಹೆಂಡತಿ ಮಾತನಾಡಿದ್ದು ತನ್ನ ಗೆಳೆಯ ಶಿವಾಜಿ ಅಲ್ಲೂರೆ ಜೊತೆಗೆ ಎಂದು ತಿಳಿದುಕೊಂಡಿದ್ದಾನೆ. ಮರುದಿನ ಶಿವಾಜಿ ಹಾಗೂ ಬಸವರಾಜ್ ಇಬ್ಬರು ಪಾರ್ಟಿ ಮಾಡಿದ್ದಾರೆ. ಕುಡಿದು ನಶೆ ಹೆಚ್ಚಾದಾಗ ನೀನು ನನ್ನ ಹೆಂಡತಿಗೆ ಪೋನ್ ಮಾಡುತ್ತಿಯಾ ಎಂದು ಬಸವರಾಜ್ ಕೊಲೆಯಾದ ಶಿವಾಜಿಗೆ ಕೇಳಿದ್ದಾನೆ.

ಇದನ್ನೂ ಓದಿ:ಮೈಸೂರು; ಮಾರಕಾಸ್ತ್ರಗಳಿಂದ ಕೊಚ್ಚಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿ ಕೊಲೆ, ಆಪ್ತ ಸಹಾಯಕ ಅರೆಸ್ಟ್

ಆಗ ಶಿವಾಜಿ ಪೋನ್ ಮಾಡುತ್ತೇನೆ, ಏನ್ ಮಾಡಿಕೊತ್ತಿಯಾ ಮಾಡಿಕೋ ಎಂದು ಹೇಳಿ ಮನೆಗೆ ಹೋಗಿದ್ದಾನೆ. ಅವತ್ತೇ ಶಿವಾಜಿಯನ್ನ ಕೊಲೆ ಮಾಡಲು ಸ್ನೇಹಿತರ ಜೊತೆಗೆ ಸ್ಕೇಚ್ ಹಾಕಿದ್ದ ಬಸವರಾಜ್ ವಗ್ಗೇನೂರ್, ತನ್ನ ಗೆಳೆಯರಾದ ಸಿದ್ದಾರೂಡ ಮತ್ತು ಹರೀಶ್​ ಇಬ್ಬರೂ ಸಿಕ್ಕಾಗ ಅವರ ಜೊತೆಯಲ್ಲಿ ಸರಾಯಿ ಕುಡಿಯುತ್ತಾ ಬಸವರಾಜ್ ಶಿವಾಜಿ ಅಲ್ಲೂರೆ ನನ್ನ ಹೆಂಡತಿಯ ಜೊತೆಯಲ್ಲಿ ರಾತ್ರಿ ವೇಳೆಯಲ್ಲಿ ಫೋನಿನಲ್ಲಿ ಮಾತಾಡುತ್ತಿರುತ್ತಾನೆ. ಈ ಕುರಿತು ಆತನಿಗೆ ಕೇಳಿದರೆ ನನಗೆ ಬೈದಿದ್ದಾನೆ. ಈ ಹಿನ್ನಲೆ ಆತನನ್ನು ಕೊಲೆ ಮಾಡಬೇಕು ಎಂದು ಗೆಳೆಯರ ಮುಂದೆ ಕೇಳಿಕೊಳ್ಳುತ್ತಾನೆ.

ಅದರಂತೆ ಮೇ 3 ರಂದು ಪಾರ್ಟಿಯ ನೆಪದಲ್ಲಿ ಶಿವಾಜಿ ಅಲ್ಲೂರೆ ನನ್ನ ಬಸವರಾಜ್ ವಗ್ಗನೂರ್, ಸಿದ್ದಾರೂಢ, ಹರೀಶ್​ ಈ ಮೂರು ಜನರು ಸೇರಿಕೊಂಡು ಕರೆದುಕೊಂಡು ಹೋಗಿ ಗ್ರಾಮದ ಹೊರವಲಯದಲ್ಲಿ ನಾಲ್ಕು ಜನರು ಸೇರಿಕೊಂಡು ಕುಡಿದ್ದಾರೆ. ಕೊಲೆ ಮಾಡಲೇ ಬೇಕೆಂದು ಸ್ಕೇಚ್ ಹಾಕಿಕೊಂಡು ಬಂದಿದ್ದ ಮೂರು ಜನರು ಶಿವಾಜಿಗೆ ರಾಡ್ ನಿಂದಾ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮೃತ ದೇಹವನ್ನ ಸಕ್ಕರಗಂಜ್ ವಾಡಿಯ ಬಾವಗೆನೋರ ರವರ ಹೊಲದ ಹತ್ತಿರ ಇರುವ ರೇಲ್ವೆ ಬ್ರಿಡ್ಜ್ ಹತ್ತಿರ ಶಿವಾಜಿಯ ಮೃತ ದೇಹವನ್ನು ಮೂವರು ಎತ್ತಿಕೊಂಡು ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಶಿವಾಜಿ ಅಲ್ಲೂರೆ ಕೊಲೆಯಾದ 9 ದಿನದ ಬಳಿಕ ಶವದ ಅಸ್ತಿ ಪಂಜರ್ ಸಿಕ್ಕಿದೆ. ಅದೇ ಅಸ್ತಿ ಪಂಜರದ ಸಹಾಯದಿಂದ ಶಿವಾಜಿ ಎಂದು ಕನ್ಫರ್ಮ್​ ಮಾಡಿಕೊಂಡು ಆತನ ಫೋನ್​ ಕರೆಗಳನ್ನು ಪರಿಶೀಲಿಸಿ ಮೂರು ಜನ ಆರೋಪಿಗಳನ್ನ ಬಂಧಿಸಿ, ಜೈಲಿಗಟ್ಟಿದ್ದಾರೆ. ಸ್ನೇಹಿತನ ಹೆಂಡತಿಗೆ ಫೋನ್ ಕಾಲ್ ಮಾಡಿದ್ದಕ್ಕೆ ಸ್ನೇಹಿತನಿಂದಲೇ ಕೊಲೆಯಾಗಿದ್ದು, ಮಗನನ್ನ ಕಳೆದುಕೊಂಡ ಕುಟುಂಬ ದುಖದಲ್ಲಿ ಮುಳುಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ