ಅಂಜಲಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಕೊಲೆಯಲ್ಲಿ ನೇಹಾ ತಂದೆ ನಿರಂಜನ ಆಪ್ತ ಸಹಾಯಕನ ಕೈವಾಡ ಆರೋಪ

ಮೇ.15 ರಂದು ಮನೆಗೆ ನುಗ್ಗಿ ಅಂಜಲಿ ಹತ್ಯೆ ಪ್ರಕರಣ (Anjali Ambigera Murder Case)ಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಅಂಜಲಿ ಕೊಲೆಯಲ್ಲಿ ನೇಹಾ ತಂದೆ ನಿರಂಜನ ಹಿರೇಮಠ ಅವರ ಆಪ್ತ ಸಹಾಯಕನಾಗಿರುವ ವಿಜಯ್ ಅಲಿಯಾಸ್ ಈರಣ್ಣನ‌ ಪಾತ್ರವೂ ಇದೆ ಎಂಬ ಆರೋಪ ಕೇಳಿಬಂದಿದೆ.

ಅಂಜಲಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಕೊಲೆಯಲ್ಲಿ ನೇಹಾ ತಂದೆ ನಿರಂಜನ ಆಪ್ತ ಸಹಾಯಕನ ಕೈವಾಡ ಆರೋಪ
ಅಂಜಲಿ ಹತ್ಯೆ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 08, 2024 | 2:50 PM

ಹುಬ್ಬಳ್ಳಿ, ಜೂ.08: ಮೇ.15 ರಂದು ಮನೆಗೆ ನುಗ್ಗಿ ಅಂಜಲಿ ಹತ್ಯೆ ಪ್ರಕರಣ (Anjali Ambigera Murder Case)ಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಅಂಜಲಿ ಕೊಲೆಯಲ್ಲಿ ವಿಜಯ್ ಅಲಿಯಾಸ್ ಈರಣ್ಣನ‌ ಪಾತ್ರ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆ ನೇಹಾ ತಂದೆ ನಿರಂಜನ ಹಿರೇಮಠ ಅವರ ಆಪ್ತ ಸಹಾಯಕನಾಗಿರುವ ವಿಜಯ್ ಮೇಲೆ ಅಂಜಲಿ ಸಹೋದರಿಯ ಪತಿಯಾದ ಶಿವಕುಮಾರ್ ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಬಸವನಗರದಲ್ಲಿ ಹಲ್ಲೆಗೆ ಯತ್ನಿಸಿದ್ದ. ಈ ಕುರಿತು ವಿಜಯ್ ಶಿವಕುಮಾರ್ ವಿರುದ್ದ ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ.

ವಿಜಯ್​ ಬಂಧಿಸಲು ಅಂಜಲಿ ಸಹೋದರಿ ಯಶೋಧಾ ಆಗ್ರಹ

ಇನ್ನು ವಿಜಯ್​ನನ್ನು ಕೂಡ ಅರೆಸ್ಟ್ ಮಾಡಬೇಕೆಂದು ಅಂಜಲಿ ಸಹೋದರಿ ಯಶೋಧಾ ಆಗ್ರಹಿಸಿದ್ದರು. ಇದೀಗ ವಿಜಯ್ ಅಂಗಡಿಗೆ ಹೋದಾಗ ಬೈಕ್ ಅಡ್ಡಗಟ್ಟಿದ ಶಿವಕುಮಾರ್ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ವಿಜಯ್​ ಬೆಂಡಿಗೇರಿ ಠಾಣೆಯಲ್ಲಿ ದೂರು ನೀಡಿದ್ದ. ಈ ಹಿನ್ನಲೆ ಸೆಕ್ಷನ್ 341,504 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿ, ಹಲ್ಲೆಗೆ ಮುಂದಾಗಿದ್ದ ಶಿವಕುಮಾರ್​ನನ್ನ ಪೊಲೀಸರು ಬಂಧಿಸಿದ್ದಾರೆ. ಇದರ ಜೊತೆಗೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಶಿವಕುಮಾರ್ ವಿರುದ್ದ ಕಳ್ಳತನ ಪ್ರಕರಣವು ದಾಖಲಾಗಿದ್ದು, ಶಿವಕುಮಾರ್ ವಿರುದ್ದ ಪೊಲೀಸರು ವಾರೆಂಟ್ ಕೂಡ ಹೊರಡಿಸಿದ್ದರು.

ಇದನ್ನೂ ಓದಿ:ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣದ ಆರೋಪಿ ವಿಶ್ವ ಕಿಮ್ಸ್​ ನರ್ಸ್​ ಜೊತೆ ಅನುಚಿತ ವರ್ತನೆ

ಹೊಸ ಬಾಂಬ್​ ಹಾಕಿದ್ದ ಅಂಜಲಿ ಸಹೋದರಿ ಯಶೋಧಾ

ಅಂಜಲಿ ಹತ್ಯೆ ಪ್ರಕರಣ ತನಿಖೆ ಚುರುಕುಗೊಂಡಿದ್ದು, ಇದೇ. 23 ರಂದು ಅಂಜಲಿ ಸಹೋದರಿ ಹೊಸ ಬಾಂಬ್​ ಹಾಕಿದ್ದರು. ಹೌದು, ಈ ಹಿಂದೆ ಅಂದರೆ ನಮ್ಮ ಅಕ್ಕ(ಮೃತ ಅಂಜಲಿ) 17 ವರ್ಷ ಇದ್ದಾಗ ವಿಜಯ್​ ಎನ್ನುವ ಯುವಕ ಲವ್ ಮಾಡುತ್ತಿದ್ದ. ಈ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು ಕೂಡ ನೀಡಲಾಗಿತ್ತು. ನಾವು ಹೊಡೆದು ಬುದ್ದಿ ಹೇಳಿದ್ದೇವು. ಅವಾಗ ಅಕ್ಕ ಬಿಟ್ಟಿದ್ದರು‌. ಆದರೆ, ಇದೀಗ ನಮ್ಮಕ್ಕನ‌ ಕೊಲೆಯಾಗಿದೆ. ಕೊಲೆಯಾದ ದಿನದಿಂದ ಅವನು ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Sat, 8 June 24

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ